ಉಡುಪಿ: ವಿಶ್ವಗೀತಾ ಪರ್ಯಾಯ ಖ್ಯಾತಿಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಮಹೋತ್ಸವದ ಮಂಗಳಾರಚಣೆ ಸದವಸರದಲ್ಲಿ ಜ.16 ಶುಕ್ರವಾರ ಉತ್ಸವಬ್ರಹ್ಮ ಪೊಡವಿಗೊಡೆಯ ಶ್ರೀಕೃಷ್ಣನ ಉತ್ಸವವನ್ನು ಸಪ್ತರಥೋತ್ಸವ (ಏಳು ರಥ)ದೊಂದಿಗೆ ಆಚರಿಸಲು ಪರ್ಯಾಯ ಶ್ರೀಪಾದರು ಸಂಕಲ್ಪಿಸಿದ್ದಾರೆ.
ಸಂಜೆ 7 ಗಂಟೆಗೆ ಸಪ್ತರಥೋತ್ಸವ ಸಡಗರದಿಂದ ನಡೆಯಲಿದೆ. ಭಕ್ತಾದಿಗಳು ಅಪೂರ್ವವಾದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಶ್ರೀಮಠದ ಪ್ರಕಟನೆ ತಿಳಿಸಿದೆ.






