ಬೆಂಗಳೂರು, 15 ಜನವರಿ, : ಕೋಕಾ-ಕೋಲಾ ಭಾರತದ ಸಾಂಸ್ಕೃತಿಕ ಪ್ರಯಾಣದಲ್ಲಿ ಒಂದು ಮೈಲಿಗಲ್ಲನ್ನು ಸ್ಥಾಪಿಸಿದ್ದು, *ಮೊಟ್ಟಮೊದಲ ಬಾರಿಗೆ ಕೋಕ್ ಸ್ಟುಡಿಯೋ ಭಾರತ್ ಲೈವ್* ಪ್ರಾರಂಭಿಸುವ ಮೂಲಕ, ತನ್ನ *ಜನಪ್ರಿಯ ಸಂಗೀತ ವೇದಿಕೆಯನ್ನು ಪರದೆಯಿಂದ ವೇದಿಕೆಗೆ ಅಂದರೆ ನೇರಪ್ರಸಾರವಾಗಿ* ಮೊದಲ ಬಾರಿಗೆ ತಂದಿದೆ. ಈ ದೊಡ್ಡ ಪ್ರಮಾಣದ ನೇರ ಅನುಭವವು ಕಲಾವಿದರು, ಪ್ರೇಕ್ಷಕರು ಮತ್ತು ಸಮುದಾಯಗಳನ್ನು ಸಂಪರ್ಕಿಸಿದ್ದು, ಮರೆಯಲಾಗದ ಕ್ಷಣಗಳನ್ನು ಹೊತ್ತು ತರುವ ಮೂಲಕ ಭಾರತದ ವೈವಿಧ್ಯಮಯ ಸಂಗೀತ ಧ್ವನಿಗಳನ್ನು ಕೇಳುಗರಿಗೆ ನೀಡಿದೆ, ಮತ್ತು ಇಂತಹ ರಸದೌತಣವನ್ನು *ಕೋಕ್ ಮಾತ್ರವೇ ನೀಡಬಹುದಾಗಿದೆ* .
ಮೊದಲ ಕೋಕ್ ಸ್ಟುಡಿಯೋ ಭಾರತ್ ಲೈವ್ ಜನವರಿ 10 ರಂದು ದೆಹಲಿಯಲ್ಲಿ ಮತ್ತು ಜನವರಿ 13 ರಂದು ಗುವಾಹಟಿಯಲ್ಲಿ ನಡೆಯಿತು. ಪ್ರತಿಯೊಂದು ನಗರವು ತನ್ನದೇ ಆದ ವಿಶಿಷ್ಟ ಶೈಲಿಯನ್ನು ಪ್ರದರ್ಶಿಸಿತು, ಭಾರತದಾದ್ಯಂತ ಜನರೊಂದಿಗೆ ಸಂಪರ್ಕ ಸಾಧಿಸುವುದರ ಜೊತೆಗೆ ಸ್ಥಳೀಯ ಸಂಗೀತವನ್ನು ಆಚರಿಸಿತು.
*ಕೋಕಾ-ಕೋಲಾ ಇಂಡಿಯಾ ಮತ್ತು ನೈಋತ್ಯ ಏಷ್ಯಾದ IMX (ಇಂಟಿಗ್ರೇಟೆಡ್ ಮಾರ್ಕೆಟಿಂಗ್ ಅನುಭವ) ಲೀಡ್ ಶಾಂತನು ಗಂಗಾನೆ* ಅವರು ಮಾತನಾಡುತ್ತಾ, “ಕೋಕ್ ಸ್ಟುಡಿಯೋ ಭಾರತ್ ಲೈವ್ ಕಾರ್ಯಕ್ರಮವು ಪರದೆಯಿಂದ ವೇದಿಕೆಗೆ ಮೊದಲ ಹೆಜ್ಜೆಯಾಗಿತ್ತು, ಸಂಗೀತ, ಆಹಾರ ಮತ್ತು ಕ್ರೀಡೆಗಳನ್ನು ಒಟ್ಟುಗೂಡಿಸಿತು. ದೆಹಲಿ ಮತ್ತು ಗುವಾಹಟಿಯಲ್ಲಿ, ಅಭಿಮಾನಿಗಳು ಕೇವಲ ವೀಕ್ಷಿಸಲಿಲ್ಲ ಬದಲಾಗಿ ಅವರು ಪ್ರದರ್ಶನದ ಭಾಗವಾದರು. ಕಲಾವಿದರು ಒಟ್ಟಿಗೆ ಪ್ರದರ್ಶನ ನೀಡುವುದರಿಂದ ಮತ್ತು ಹೊಸ ಹಾಡುಗಳನ್ನು ಪೂರ್ವವೀಕ್ಷಣೆ ಮಾಡುವುದರಿಂದ ಹಿಡಿದು ವೇದಿಕೆಯಲ್ಲಿ ಅವರೊಂದಿಗೆ ಸೇರುವ ಅಭಿಮಾನಿಗಳವರೆಗೆ, ಎರಡು ದಿನಗಳು ನಿಜವಾದ, ನೆಲದ ಸಂಪರ್ಕಗಳನ್ನು ಸೃಷ್ಟಿಸಿದವು. ಕಾರ್ಯಕ್ರಮಕ್ಕೆ ಹರಿದು ಬಂದ ಪ್ರತಿಕ್ರಿಯೆಯು ಕೋಕ್ ಸ್ಟುಡಿಯೋ ಭಾರತ್ ಒಟ್ಟಿಗೆ ಅನುಭವಿಸಲು ಜನರು ಎಷ್ಟು ಇಷ್ಟಪಡುತ್ತಾರೆ ಎಂಬುದನ್ನು ತೋರಿಸಿದೆ.” ಎಂದು ಹೇಳಿದರು.
*ದೆಹಲಿ: ಲೈವ್ ಜರ್ನಿ ಪ್ರಾರಂಭವಾದ ಸ್ಥಳ*
ಕೋಕ್ ಸ್ಟುಡಿಯೋ ಭಾರತ್ ಲೈವ್ ತನ್ನ ಮೊದಲ ಲೈವ್ ಪ್ರದರ್ಶನವನ್ನು ನವದೆಹಲಿಯ *ಓಖ್ಲಾದ NSIC ಮೈದಾನದಲ್ಲಿ* ಪ್ರಾರಂಭಿಸಿತು. ಸಂಗೀತ ಪ್ರಿಯರು ಭಾವನೆಗಳು, ಕಥೆಗಳು ಮತ್ತು ಆಧುನಿಕ ಶೈಲಿಗಳಿಂದ ತುಂಬಿರುವ ಭಾರತೀಯ ಧ್ವನಿಗಳನ್ನು ಸವಿಯುವ ಸಂಜೆಗಾಗಿ ಒಟ್ಟುಗೂಡಿದರು. ಶ್ರೇಯಾ ಘೋಷಾಲ್, ಆದಿತ್ಯ ರಿಖಾರಿ, ರಶ್ಮೀತ್ ಕೌರ್, ದಿವ್ಯಮ್ ಮತ್ತು ಖ್ವಾಬ್ ಅವರ ಪ್ರದರ್ಶನಗಳು ಇಂದಿನ ಸಂಗೀತವು ಪ್ರಕಾರಗಳು, ತಲೆಮಾರುಗಳು ಮತ್ತು ಪ್ರದೇಶಗಳಲ್ಲಿ ಹೇಗೆ ಸಂಪರ್ಕಗೊಳ್ಳುತ್ತದೆ ಎಂಬುದನ್ನು ತೋರಿಸುವ ಸ್ಥಳವಾಗಿ ಪರಿವರ್ತಿಸಿದವು.
ಆದಿತ್ಯ ರಿಖಾರಿ ಅವರು ಬಿಡುಗಡೆಯಾಗದ ಕೋಕ್ ಸ್ಟುಡಿಯೋ ಭಾರತ್ ಹಾಡನ್ನು ವೇದಿಕೆಯಲ್ಲಿ ನೇರಪ್ರಸಾರ ಮಾಡುವ ಮೂಲಕ ಅಭಿಮಾನಿಗಳಿಗೆ ವಿಶೇಷ ಅಚ್ಚರಿ ಮೂಡಿಸಿದರು, ಇದು ಅವರಿಗೆ ಮೊದಲ ವಿಶೇಷ ಆಲಿಸುವಿಕೆಗೆ ಅವಕಾಶ ಮಾಡಿಕೊಟ್ಟಿತು. ದೆಹಲಿ ಕಾರ್ಯಕ್ರಮವು ಶ್ರೇಯಾ ಘೋಷಾಲ್ ರಶ್ಮೀತ್ ಕೌರ್, ಆದಿತ್ಯ ರಿಖಾರಿ, ದಿವ್ಯಾಮ್ ಮತ್ತು ಖ್ವಾಬ್ ಅವರೊಂದಿಗೆ ಪ್ರಸಿದ್ಧ ಕೋಕ್ ಸ್ಟುಡಿಯೋ ಭಾರತ್ ಹಾಡುಗಳ ಸಂಯೋಜನೆಯಲ್ಲಿ ಸೇರಿಕೊಂಡು ಸುಂದರ ಕ್ಷಣಗಳೊಂದಿಗೆ ಮುಕ್ತಾಯಗೊಂಡಿತು. ಒಬ್ಬ ಅದೃಷ್ಟಶಾಲಿ ಅಭಿಮಾನಿಯನ್ನು ಶ್ರೇಯಾ ಘೋಷಾಲ್ ಅವರೊಂದಿಗೆ ಹಾಡಲು ವೇದಿಕೆಯ ಮೇಲೆ ಆಹ್ವಾನಿಸಲಾಯಿತು, ಇದು ಸಂಗೀತ ಕಚೇರಿಯನ್ನು ಕೇವಲ ಪ್ರದರ್ಶನವಲ್ಲ, ಹಂಚಿಕೆಯ ಆಚರಣೆಯನ್ನಾಗಿ ಮಾಡಿತು.
*ಗುವಾಹಟಿ: ಗಮನ ಸೆಳೆದ ಈಶಾನ್ಯದ ಸಂಗೀತದ ಧ್ವನಿ*
ರಾಜಧಾನಿಯಿಂದ, ಪ್ರಯಾಣವು ಗುವಾಹಟಿಯತ್ತ ಮುಖಮಾಡಿತು, ಅಲ್ಲಿ ಕೋಕ್ ಸ್ಟುಡಿಯೋ ಭಾರತ್ ಲೈವ್ ಪ್ರಬಲ ಪ್ರಾದೇಶಿಕ ಅಭಿವ್ಯಕ್ತಿಯನ್ನು ಪಡೆದುಕೊಂಡಿತು, ಈಶಾನ್ಯದ ಧ್ವನಿಗಳ ಮೇಲೆ ದೃಢವಾಗಿ ಬೆಳಕು ಚೆಲ್ಲಿತು. ಬರ್ಸಾಪರದ ಎಸಿಎ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಗುವಾಹಟಿ ಆವೃತ್ತಿಯು ಈ ಪ್ರದೇಶದ ಸಾಹಿತ್ಯದ ಆಳ ಮತ್ತು ಸಂಗೀತದ ಪ್ರತ್ಯೇಕತೆಯನ್ನು ಪ್ರೇಕ್ಷಕರಿಗೆ ಉಣಬಡಿಸಿತು, ಸ್ಥಳೀಯ ಕಥೆ ಹೇಳುವಿಕೆಯಲ್ಲಿ ಆಳವಾಗಿ ಬೇರೂರಿರುವ ಕಲಾವಿದರನ್ನು ಒಟ್ಟುಗೂಡಿಸಿತು.
*ಅನುವ್ ಜೈನ್, ಶಂಕುರಾಜ್ ಕೊನ್ವರ್, ರಿಟೊ ರಿಬಾ ಮತ್ತು ಅನೌಷ್ಕಾ ಮಾಸ್ಕೆ* ಅವರ ಪ್ರದರ್ಶನಗಳು ಆಪ್ತ ಹಾಗೆಯೇ ತಲ್ಲೀನತೆಯ ವಾತಾವರಣವನ್ನು ಸೃಷ್ಟಿಸಿದವು, ಅಲ್ಲಿ ಆಧುನಿಕ ರಿದಮ್‌ಗಳಿ ಪ್ರಾದೇಶಿಕತೆಯೊಂದಿಗೆ ಮಿಳಿತವಾದವು, ಈ ಮೂಲಕ ಕೋಕ್ ಸ್ಟುಡಿಯೋ ಭಾರತ್ ಲೈವ್‌ನ ಭಾರತದ ಸಂಗೀತ ವೈವಿಧ್ಯತೆಗೆ ಬದ್ಧತೆಯನ್ನು ಬಲಪಡಿಸಿತು. ಎಲ್ಲಾ ಕಲಾವಿದರು ಒಟ್ಟಾಗಿ ‘ಅರ್ಜ್ ಕಿಯಾ ಹೈ’ ಅನ್ನು ಪ್ರದರ್ಶಿಸಿದಾಗ ಮತ್ತು ಆಯ್ದ ಅಭಿಮಾನಿಗಳನ್ನು ವೇದಿಕೆಗೆ ಆಹ್ವಾನಿಸಿದಾಗ, ನಂತರ ಅವರಿಗೆ ವಿಶೇಷ ಅನ್‌ಪ್ಲಗ್ಡ್ ಬ್ಯಾಕ್‌ಸ್ಟೇಜ್ ಕಾರ್ಯಕ್ರಮವು, ಸಂಪೂರ್ಣ ಕಾರ್ಯಕ್ರಮಕ್ಕೆ ರಂಗು ತಂದುಕೊಟ್ಟಿತು. ಅಭಿಮಾನಿಗಳನ್ನು ಸಾಮಾಜಿಕ ಮಾಧ್ಯಮ ಮತ್ತು ಪ್ರತ್ಯಕ್ಷ ಚಟವಟಿಕೆಯ ಮೂಲಕ ಆಯ್ಕೆ ಮಾಡಲಾಯಿತು, ಸಂಗೀತದ ಮೇಲಿನ ಅವರ ಪ್ರೀತಿಯನ್ನು ಮರೆಯಲಾಗದ ಲೈವ್ ಅನುಭವಗಳಾಗಿ ಪರಿವರ್ತಿಸಲಾಯಿತು.
ಸಂಗೀತ ಮತ್ತು ಕ್ರೀಡೆಗಳ ಜೊತೆಗೆ, ಕೋಕ್ ಸ್ಟುಡಿಯೋ ಭಾರತ್ ಲೈವ್ ವಿವಿಧ ಪಾಕಪದ್ಧತಿಗಳಿಂದ ವಿವಿಧ ಆಹಾರಗಳನ್ನು ನೀಡಿತು, ಇದು ಕೋಕ್ ಜೊತೆಗೆ ಕಾರ್ಯಕ್ರಮವನ್ನು ಸಂಪೂರ್ಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಅನುಭವವನ್ನಾಗಿ ಮಾಡಿತು.
*ಜವಾಬ್ದಾರಿಯುತ ಆಚರಣೆಗಳಿಗೆ ಬದ್ಧತೆ*
ಕೋಕ್ ಸ್ಟುಡಿಯೋ ಭಾರತ್ ಲೈವ್‌ನಲ್ಲಿ, ಕೋಕಾ-ಕೋಲಾ ಇಂಡಿಯಾ ತನ್ನ #ಮೈದಾನ್‌ಸಾಫ್ ಉಪಕ್ರಮವನ್ನು ಪರಿಚಯಿಸಿತು. ಮರುಬಳಕೆ ಕೇಂದ್ರಗಳು, ತರಬೇತಿ ಪಡೆದ ಸ್ವಯಂಸೇವಕರು ಮತ್ತು ಸ್ಪಷ್ಟ ಸೂಚನೆಗಳೊಂದಿಗೆ, ಈ ಉಪಕ್ರಮವು ತ್ಯಾಜ್ಯವನ್ನು ಸರಿಯಾಗಿ ಸಂಗ್ರಹಿಸಲು ಮತ್ತು ಬೇರ್ಪಡಿಸಲು ಸಹಾಯ ಮಾಡಿತು, ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳನ್ನು ಜವಾಬ್ದಾರಿಯುತವಾಗಿ ನಡೆಸಬಹುದು ಎಂದು ಎತ್ತಿತೋರಿಸಿತು.






