ಭಾರತ, 13 ಜನವರಿ 2026: ಭಾರತದ ಪ್ರಮುಖ ಗ್ರಾಹಕ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆದ ವಿ-ಗಾರ್ಡ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯು ತನ್ನ ಇಂಡಕ್ಷನ್ ಕುಕ್‌ಟಾಪ್ ಮಾದರಿ ವಿಐಸಿ06ವಿ1 ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದು, ಈ ಮಾಡೆಲ್ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ) ಯಿಂದ 5- ಸ್ಟಾರ್ (★★★★★) ಇಂಧನ ದಕ್ಷತೆಯ ರೇಟಿಂಗ್ ಪಡೆದ ಭಾರತದ ಮೊದಲ ಇಂಡಕ್ಷನ್ ಕುಕ್‌ಟಾಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಮನ್ನಣೆಯು ಇಂಧನ-ದಕ್ಷತೆ ಆವಿಷ್ಕಾರ, ಆಂತರಿಕ ಉತ್ಪಾದನಾ ಶ್ರೇಷ್ಠತೆ ಮತ್ತು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ವಿ-ಗಾರ್ಡ್ ನ ಬದ್ಧತೆಯನ್ನು ಸಾರುತ್ತದೆ. ವಿಐಸಿ06ವಿ1 ಇಂಡಕ್ಷನ್ ಕುಕ್‌ಟಾಪ್ ಅನ್ನು ವಿ- ಗಾರ್ಡ್‌ನ ಪೆರುಂದುರೈನಲ್ಲಿರುವ ಅತ್ಯಾಧುನಿಕ ಘಟಕದಲ್ಲಿ ವಿನ್ಯಾಸಗೊಳಿಸಿ ತಯಾರಿಸಲಾಗಿದ್ದು, ಇದು ಬ್ರಾಂಡ್ ನ ಸ್ವದೇಶಿ ವಿನ್ಯಾಸದ ಮೇಲಿನ ಗಮನವನ್ನು ತೋರಿಸುತ್ತದೆ. ಇದಲ್ಲದೆ, ಈ ಮಾದರಿಯು ಗ್ರಾಹಕರಿಗೆ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ವೇಗವಾದ ಹಾಗೂ ಪರಿಸರ ಸ್ನೇಹಿ ವಿಧಾನದಲ್ಲಿ ಅಡುಗೆ ಮಾಡಲು ಅನುವುಮಾಡಿಕೊಡುತ್ತದೆ. ಕಾರ್ಯಕ್ಷಮತೆ ಅಥವಾ ಅನುಕೂಲತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುದಿಲ್ಲ.
ವಿಐಸಿ06ವಿ1 (5- ಸ್ಟಾರ್ ಬಿಇಇ ರೇಟಿಂಗ್ ಹೊಂದಿರುವ) ಇಂಡಕ್ಷನ್ ಕುಕ್‌ಟಾಪ್ ಗರಿಷ್ಠ 1600 ವ್ಯಾಟ್ ಪವರ್ ಔಟ್ ಪುಟ್ ನೀಡುತ್ತದೆ. ಇದು ಎಂಟು ವಿವಿಧ ಪವರ್ ಮತ್ತು ತಾಪಮಾನ ಹಂತಗಳನ್ನು ಹಾಗೂ ಎಂಟು ಪ್ರೀಸೆಟ್ ಅಡುಗೆ ಮೋಡ್ ಗಳನ್ನು ಹೊಂದಿದ್ದು, ದೈನಂದಿನ ಅಡುಗೆ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಇದರ ಸಾಫ್ಟ್- ಟಚ್ ಸ್ವಿಚ್ ಕಂಟ್ರೋಲ್ ಗಳು, ಡಿಜಿಟಲ್ ಡಿಸ್‌ಪ್ಲೇ, 4-ಗಂಟೆಗಳ ಟೈಮರ್, 24-ಗಂಟೆಗಳ ಪ್ರೀಸೆಟ್ ಫಂಕ್ಷನ್ ಮತ್ತು ವೋಲ್ಟೇಜ್ ಇಂಡಿಕೇಟರ್ ಗಳು ಕಾರ್ಯನಿರ್ವಹಣೆಯನ್ನು ಅತ್ಯಂತ ಸರಳಗೊಳಿಸುತ್ತವೆ.
ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಗಮನದಲ್ಲಿಟ್ಟುಕೊಂಡು, ಈ ಕುಕ್‌ಟಾಪ್ ಅನ್ನು 3 ಕೆವಿ ಸರ್ಜ್ ಪ್ರೊಟೆಕ್ಷನ್, ಹೈ- ಲೋ ವೋಲ್ಟೇಜ್ ಕಟ್-ಆಫ್ ಮತ್ತು ಬಿಐಎಸ್ ಪ್ರಮಾಣೀಕರಣದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದರ ಗ್ರೇಡ್-ಎ ಕ್ರಿಸ್ಟಲಿನ್ ಗ್ಲಾಸ್ ಪ್ಯಾನಲ್ ದೀರ್ಘ ಬಾಳಿಕೆ ಒದಗಿಸುತ್ತದೆ ಮತ್ತು ಪ್ರೀಮಿಯಂ ಫಿನಿಶ್ ಹೊಂದಿದೆ. ಈ ಉತ್ಪನ್ನಕ್ಕೆ 1 ವರ್ಷದ ವಾರಂಟಿ ಮತ್ತು ಇಂಡಕ್ಷನ್ ಕಾಯಿಲ್ ಮೇಲೆ 3 ವರ್ಷಗಳ ವಾರಂಟಿ ಲಭ್ಯವಿದೆ.
*ಈ ಕುರಿತು ಮಾತನಾಡಿದ ವಿ- ಗಾರ್ಡ್ ಇಂಡಸ್ಟ್ರೀಸ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮಿಥುನ್ ಚಿಟ್ಟಿಲಪ್ಪಿಳ್ಳಿ* ಅವರು, “ಈ ಮನ್ನಣೆಯು ಸ್ವದೇಶಿ ವಿನ್ಯಾಸ, ಉತ್ಪಾದನಾ ಶ್ರೇಷ್ಠತೆ ಮತ್ತು ಗುಣಮಟ್ಟದ ಮಾನದಂಡಗಳ ಮೇಲೆ ನಾವು ಹೊಂದಿರುವ ಗಮನವನ್ನು ತೋರಿಸುತ್ತದೆ. ಈ ಮೈಲಿಗಲ್ಲು ಸಾಧನೆಯು ಉದ್ಯಮದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ ಮತ್ತು ಇಂಧನ- ದಕ್ಷತೆಯ ಗೃಹೋಪಯೋಗಿ ಉಪಕರಣಗಳಲ್ಲಿ ವಿ- ಗಾರ್ಡ್‌ನ ನಾಯಕತ್ವವನ್ನು ಮತ್ತಷ್ಟು ಬಲಪಡಿಸಿದೆ” ಎಂದು ಹೇಳಿದರು.
ಈ ಮಹತ್ವದ ಸಾಧನೆಯೊಂದಿಗೆ, ವಿ- ಗಾರ್ಡ್‌ನ ವಿಐಸಿ06ವಿ1 ಭಾರತದ ಇಂಡಕ್ಷನ್ ಕುಕಿಂಗ್ ವಿಭಾಗದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದು, ಆಧುನಿಕ ಭಾರತೀಯ ಕುಟುಂಬಗಳಿಗೆ ಸುಸ್ಥಿರ ಮತ್ತು ಉನ್ನತ-ಕಾರ್ಯಕ್ಷಮತೆಯ ಅಡುಗೆ ಉಪಕರಣಗಳನ್ನು ಒದಗಿಸುವಲ್ಲಿ ಕಂಪನಿಯ ಮಹತ್ವದ ಪಾತ್ರವನ್ನು ಸಾರಿದೆ.






