ಬೆಂಗಳೂರು:ಜನವರಿ 12:ಬಿಗ್ ಬಾಸ್ ಕನ್ನಡ’ 12ನೇ ಸೀಸನ್ನ ಫೈನಲ್ ಮುಂದಿನ ವಾರ ನಡೆಯಲಿದ್ದು ಈಗ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿರುವ ಏಳು ಜನರಿಗೆ ಜಿಯೋ ಹಾಟ್ಸ್ಟಾರ್ನಲ್ಲಿ ವೋಟ್ ಹಾಕಲು ಅವಕಾಶ ನಿಡಲಾಗಿದೆ. ಈ ವೋಟಿಂಗ್ ಲೈನ್ ಜನವರಿ 13ರ ಸಂಜೆವರೆಗೆ ತೆರೆದಿರಲಿದೆ.
ಈ ಮತಗಳು ಪರಿಗಣನೆಗೆ ಬರೋದು ಕೇವಲ ಮಿಡ್ ವೀಕ್ ಎಲಿಮಿನೇಷನ್ಗೆ ಮಾತ್ರ. ಆ ಬಳಿಕ ಬುಧವಾರ ರಾತ್ರಿ ಫಿನಾಲೆ ವಾರಕ್ಕೆ ವೋಟಿಂಗ್ ಲೈನ್ ಮತ್ತೆ ಆರಂಭ ಆಗುವ ಸಾಧ್ಯತೆ ಇದೆ.
ಸದ್ಯ ವೋಟಿಂಗ್ ಲೈನ್ ಓಪನ್ ಆಗಿದ್ದು, ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಕಾವ್ಯಾ ಶೈವ, ಧ್ರುವಂತ್, ರಘು ಹಾಗೂ ಅಶ್ವಿನಿ ಗೌಡ ಹೆಸರು ಇದೆ. ಇವರಿಗೆ ವೋಟ್ ಮಾಡಬೇಕು. ಮಂಗಳವಾರ ಸಂಜೆ 6 ಗಂಟೆವರೆಗೆ ಮಾತ್ರ ವೋಟ್ ಮಾಡಲು ಅವಕಾಶ ಇದೆ.





