ಮೂಡಿಗೆರೆ: ಜನವರಿ 10: ಚಾರ್ಮಾಡಿ ಘಾಟಿಯ 2ನೇ ಮತ್ತು 3ನೇ ತಿರುವಿನ ನಡುವೆ ರಸ್ತೆ ಮಧ್ಯದಲ್ಲೇ ಓಡಾಡುತ್ತಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಶುಕ್ರವಾರ ಮಧ್ಯರಾತ್ರಿ ಕೂಡ ಇದೇ ಸ್ಥಳದಲ್ಲಿ ಆನೆ ನಿಂತು ಒಂದೂವರೆ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಶನಿವಾರ ಬೆಳಿಗ್ಗೆ ಮತ್ತೆ ಅದೇ ಸ್ಥಳಕ್ಕೆ ಆನೆ ಬಂದಿದ್ದು, ಕಾಡಾನೆಗೆ ಹೆದರಿ ಪ್ರಯಾಣಿಕರು ಅಲ್ಲೇ ನಿಂತಿದ್ದರು.






