ಬ್ರಹ್ಮಾವರ: ಜನವರಿ 08 : ನೀಲಾವರ ಮಟಪಾಡಿ ರಸ್ತೆಯ ಜೆನಿತ್ ಡೈ ಮೇಕರ್ಸ್ ಹಿಂಬಾಗದಲ್ಲಿ ಇಂದು ಭೀಕರ ಬೆಂಕಿ ದುರಂತ ಸಂಭವಿಸಿದ್ದು ಬೆಂಕಿಯ ಕೆನ್ನಾಲಿಗೆಗೆ ಹತ್ತಾರು ಎಕ್ರೆ ಮಾವು, ಹಲಸು, ಪರಂಗಿ , ತೆಂಗು, ಅಡಿಕೆ ತೋಟ ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ
ಬೆಂಕಿ ಬಿದ್ದಿರುವ ಮಾಹಿತಿ ತಿಳಿದ ತಕ್ಷಣ ನೀಲಾವರ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹೇಂದ್ರ ಕುಮಾರ್ ನೀಲಾವರ, ಜೆನಿತ್ ಡೈ ಮೇಕರ್ಸ್ ಸಿಬ್ಬಂದಿಗಳು , ಸ್ಥಳೀಯರಾದ ಸಿದ್ಧಾರ್ಥ್ ಇನ್ನಿತರರು ಸೇರಿ ತಕ್ಷಣ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿ, ತಾವು ಬೆಂಕಿ ನಂದಿಸುವ ಕಾರ್ಯದಲ್ಲಿ ನೆರವಾದರು.






