ಉಡುಪಿ : ಡಿಸೆಂಬರ್ 29:ಉಡುಪಿಯ ಶ್ರೀಕೃಷ್ಣಮಠದ ಪರಿಸರದಲ್ಲಿಯಾತ್ರಾರ್ಥಿ ಭಕ್ತಾದಿಗಳಿಗೆ ತುರ್ತಾಗಿ ವೈದ್ಯಕೀಯ ಚಿಕಿತ್ಸೆ ಲಭ್ಯವಾಗಿ ಅನುಕೂಲ ಕಲ್ಪಿಸಲು ಸಾರ್ವಜನಿಕರ ಅಪೇಕ್ಷೆಯಂತೆ ರಥಬೀದಿಯಲ್ಲಿ ಸದಾ ಸೇವೆಗೆ ಲಭ್ಯವಾಗುವಂತೆ ತಯಾರಾದ ಆಂಬ್ಯುಲೆನ್ಸ್ ಅನ್ನು ಡಿಸೆಂಬರ್ 28ರಂದು ಪರ್ಯಾಯ ಶ್ರೀಪಾದರು ಅದಮಾರು ಮಂತ್ರಾಲಯ ,ಸುಬ್ರಹ್ಮಣ್ಯ ಮಠಾಧೀಶರೊಂದಿಗೆ ಕೂಡಿ ದೀಪ ಬೆಳಗಿಸುವ ಮೂಲಕ ಲೋಕಾರ್ಪಣೆ ಗೊಳಿಸಿದರು.
ಕೆಲವೊಂದು ಉಪಕ್ರಮಗಳ ನಂತರ ಜನವರಿ ಮೊದಲ ದಿನ ದಂದು ಸಾರ್ವಜನಿಕ ಸೇವೆಗೆ ಲಭ್ಯವಿದೆ
ಹೈದರಾಬಾದಿನ ರಾಮೋಜಿ ಫಿಲ್ಮ್ ಸಿಟಿಯ ಮಾಲಕರು ಈ ಸೇವೆಯ ದಾನಿಗಳಾಗಿರುವರು





