ಉಡುಪಿ: ಡಿಸೆಂಬರ್ 24:’ ಒನ್ ವರ್ಲ್ಡ್ ಒನ್ ಫ್ಯಾಮಿಲಿ’ ಮಿಷನ್ನಿನ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ್ ಸಾಯಿಯವರು, ಮುದ್ದೇನಹಳ್ಳಿಯ ತಮ್ಮ ಆಶ್ರಮ ಸತ್ಯಸಾಯಿ ಗ್ರಾಮದಲ್ಲಿ ಶಿರೂರು ಪರ್ಯಾಯದ ಆಮಂತ್ರಣ ಪತ್ರಿಕೆಯನ್ನು 21.12.2025ರಂದು ಬಿಡುಗಡೆ ಮಾಡಿ ಶುಭ ಹಾರೈಸಿದರು ಬಳಿಕ ಮಾತನಾಡಿದ ಶ್ರೀ ಮಧುಸೂದನ್ ಸಾಯಿಯವರು ಶ್ರೀ ಶ್ರೀ ವೇದವರ್ಧನ ಶ್ರೀಗಳ ಪ್ರಥಮ ಪರ್ಯಾಯ ಅತ್ಯಂತ ಯಶಸ್ವಿಯಾಗಲಿ. ಶ್ರೀಗಳ ಮಹಾ ಸಂಕಲ್ಪಗಳು ಭಕ್ತರ ಸಹಕಾರದಿಂದ ಸಂಪನ್ನಗೊಳ್ಳಲಿ, ಕೃಷ್ಣ ಮಠಕ್ಕೆ ಆಗಮಿಸುವ ಭಕ್ತರಿಗೆ ಶೀರೂರು ಪರ್ಯಾಯದಲ್ಲಿ ಅತ್ಯತ್ತಮ ಸೇವೆ ಲಭಿಸಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಡಾ. ಬಿ. ಎನ್ . ನರಸಿಂಹ ಮೂರ್ತಿ, ನಿಕಟಪೂರ್ವ ಕುಲಾಧಿಪತಿಗಳು, ಶ್ರೀ ಸತ್ಯಸಾಯಿ ಮಾನವಾಭ್ಯುದಯ ವಿಶ್ವವಿದ್ಯಾಲಯ ಮತ್ತು ಟ್ರಸ್ಟೀ, ಪ್ರಶಾಂತಿ ಬಾಲ ಮಂದಿರ ಟ್ರಸ್ಟ,ಆನಂದ ಬಳಗದ ರಾಮಚಂದ್ರ ಉಪಾಧ್ಯಾಯ,ಪರ್ಯಾಯ ಸ್ವಾಗತ ಸಮಿತಿ ಕಾರ್ಯದರ್ಶಿ ಮೋಹನ್ ಭಟ್, ವಿಷ್ಣುಮೂರ್ತಿ ಆಚಾರ್ಯ,ಪ್ರಚಾರ ಸಮಿತಿ ಸಂಚಾಲಕ ನಂದನ್ ಜೈನ್, ಮಧುಕರ್ ಮುದ್ರಾಡಿ, ಮೊದಲಾದವರು ಉಪಸ್ಥಿತರಿದ್ದರು






