ಕಾರ್ಕಳ,: ಡಿಸೆಂಬರ್ 24: ಬಿಜೆಪಿಗೆ ಭದ್ರಬುನಾದಿ ಹಾಕಿದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಾಬ್ದಿ ಪ್ರಯುಕ್ತ ಇವರ ತತ್ವ ಮತ್ತು ಆದರ್ಶಗಳನ್ನು ಇಂದಿನ ತಲೆಮಾರಿಗೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಕಳ ಬಿಜೆಪಿ ವತಿಯಿಂದ ಅಟಲ್ ಸ್ಮರಣೆ ಕಾರ್ಯಕ್ರಮ ಡಿಸೆಂಬರ್ 25 ರಂದು ತಾಲೂಕು ಕಚೇರಿ ಬಳಿ ಅಟಲ್ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ನಾಯಕ್ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ ಐದು ಗಂಟೆಗೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ವಾಜಪೈಯ ವರ ಜೀವನ ಚರಿತ್ರೆಯನ್ನು ಬಿಂಬಿಸುವ ವಿಡಿಯೋ ಪ್ರದರ್ಶನ ಏರ್ಪಡಿಸಲಾಗಿದೆ. ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ದೇಶಭಕ್ತಿ ಬಿಂಬಿಸುವ ಸಮಯ ಗೀತೆಗಳ ಗಾಯನ ನಡೆಯಲಿದೆ.
ಸಂಜೆ 4:30ಕ್ಕೆ ಪಾರ್ಕ್ ನಲ್ಲಿರುವ ಅಟಲ್ ಅವರ ಮೂರ್ತಿಗೆ ಪುಷ್ಪಾರ್ಚನೆ ನಡೆಯಲಿದೆ.
ಸಂಜೆ 5:00ಗೆ ಸಭಾ ಕಾರ್ಯಕ್ರಮ ಆರಂಭವಾಗಿವಾಗಲಿದ್ದು ವಿವಿಧ ಭಾವ ಭಕ್ತಿ ಕಾರ್ಯಕ್ರಮ ಜರಗಲಿದೆ.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಶಾಸಕ ಸುನಿಲ್ ಕುಮಾರ್ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಸೇರಿದಂತೆ ಹಿರಿಯ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಕಳ ತಾಲೂಕು ವ್ಯಾಪ್ತಿಯ ಬೂತ್ ಮಟ್ಟದಿಂದ ಹಿಡಿದು ತಳಮಟ್ಟದ ಹಿರಿಯ ಕಾರ್ಯಕರ್ತರು ಈ ಸಂಭ್ರಮದಲ್ಲಿ ಭಾಗವಹಿಸಲಿದ್ದು ಪರಿಸರ ಪ್ರೇಮಿಯಾಗಿದ್ದ ಅಟಲ್ ಅವರ ನೆನಪಿನ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ವರ್ಷಪೂರ್ತಿ ಅಭಿಯಾನ ಮುಂದುವರೆಯಲಿದ್ದು ವಿಶೇಷವಾಗಿ ಎಂಟನೇ ತರಗತಿಯ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಗಿಡಗಳನ್ನು ನೀಡಿ ಅವುಗಳನ್ನು ಪೋಷಿಸುವ ಜವಾಬ್ದಾರಿ ನೀಡಲಾಗುವುದು ಎಂದು ಮಾಹಿತಿ ನೀಡಿದರು2500 ಅಧಿಕ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ದೋಸೆ ಕ್ಯಾಂಪ್ ಆಯೋಜಿಸಲಾಗಿದ್ದು ಉಪಹಾರದಲ್ಲಿ ದೋಸೆಯನ್ನು ವಿತರಿಸಲಾಗುವುದು ಎಂದು ನವೀನ್ ನಾಯಕ್ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಉಪಾಧ್ಯಕ್ಷ ಮಹಾವೀರ ಹೆಗಡೆ ಕಾರ್ಕಳ ಬಿಜೆಪಿ ಪ್ರಮುಖರಾದಳಬೋಳ ಸತೀಶ್ ಪೂಜಾರಿ, ವಿಖ್ಯಾತ್ ಶೆಟ್ಟಿ, ರಾಕೇಶ್ ಶೆಟ್ಟಿ, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.






