ಕಟಪಾಡಿ:ಡಿಸೆಂಬರ್ 10: ವಿಶ್ವಬ್ರಾಹ್ಮಣ ಯುವಸಂಘಟನೆ ಕಾಪು ಉಡುಪಿ ಜಿಲ್ಲೆ ಇವರ ಚತುರ್ಥ ಬಾರಿಯ ಸಾಮೂಹಿಕ ವಿವಾಹ ಸಮಾರಂಭವು ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ದ ಪ್ರಾಂಗಣದ ಸುತ್ತ ಪ್ರತ್ಯೇಕ 12 ಮಂಟಪಗಳಲ್ಲಿ ಪ್ರತ್ಯೇಕ ಪುರೋಹಿತರು ಶಾಸೋಕ್ತವಾಗಿ ವಿವಾಹವನ್ನು ಇಂದು ಡಿ. 10 ರಂದು ನೆರವೇರಿಸಿದರು
ಕಾರ್ಯಕ್ರಮದಲ್ಲಿ ಸಮಾಜದ ಕುಲಗು ರುಗಳಾದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಕುತ್ಯಾರು,ಹಾಗೂ ಶ್ರೀ ಶಿವ ಸುಜ್ಞಾನ ತೀರ್ಥ ಮಹಾಸ್ವಾಮೀಜಿ ಹಾಸನರವರು ಆಶೀರ್ವದಿಸಿದರು.
ಸಂಘಟನೆ ಅಧ್ಯಕ್ಷರಾದ ಸುಧಾಕರ ಆಚಾರ್ಯ ಬಿಳೆಯಾರು, ದಾನಿಗಳು, ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸುಮಾರು 5000 ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದು ಸಾಮೂಹಿಕ ವಿವಾಹ ಸಮಾರಂಭಕ್ಕೆ ಸಾಕ್ಷಿಯಾದ್ರು







