ಬೆಂಗಳೂರು – ಡಿಸೆಂಬರ್ 5, 2025 -ಭಾರತದ ಅತಿ ದೊಡ್ಡ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆಗಿರುವ ಸ್ಯಾಮ್‌ಸಂಗ್ ಇಂದು ಎಲ್ಲಾ ವಯಸ್ಸಿನವರಿಗೂ ಇಷ್ಟವಾಗುವ ಮನರಂಜನಾ ಸೌಲಭ್ಯ, ಸುಗಮ ಕಾರ್ಯಕ್ಷಮತೆ ಮತ್ತು ಬಹುಮುಖ ಸಾಮರ್ಥ್ಯವನ್ನು ಹೊಂದಿರುವ ಗ್ಯಾಲಕ್ಸಿ ಟ್ಯಾಬ್ ಎ11 ಅನ್ನು ಬಿಡುಗಡೆ ಮಾಡಿದೆ.
ಗ್ಯಾಲಕ್ಸಿ ಟ್ಯಾಬ್ ಎ11 ನಲ್ಲಿ 8.7 ಇಂಚಿನ ಡಿಸ್‌ಪ್ಲೇ ಇದ್ದು, 90ಹರ್ಟ್ಜ್ ರಿಫ್ರೆಶ್ ರೇಟ್ ಹೊಂದಿದೆ. ವೆಬ್ ಬ್ರೌಸ್ ಮಾಡುತ್ತಿರಲಿ, ಸೋಷಿಯಲ್ ಮೀಡಿಯಾ ನೋಡುತ್ತಿರಲಿ ಅಥವಾ ನೆಚ್ಚಿನ ಶೋಗಳನ್ನು ವೀಕ್ಷಣೆ ಮಾಡುತ್ತಿರಲಿ ಹೀಗೆ ಎಲ್ಲಾ ಸಂದರ್ಭದಲ್ಲಿಯೂ ಎಷ್ಟೇ ಬೆಳಕಿದ್ದರೂ ಅದ್ಭುತ ವೀಕ್ಷಣಾ ಸಾಮರ್ಥ್ಯ ಹೊಂದಿದೆ ಮತ್ತು ಸುಗಮವಾದ ಸ್ಕ್ರಾಲಿಂಗ್ ಅನುಭವ ನೀಡುತ್ತದೆ. ಇದರ ಜೊತೆಗೆ ಡಾಲ್ಬಿ ತಂತ್ರಜ್ಞಾನದ ಡ್ಯುಯಲ್ ಸ್ಪೀಕರ್ ಗಳು ಶ್ರೀಮಂತ ಮತ್ತು ಬಹು ಆಯಾಮದ ಆಡಿಯೋ ಸೌಲಭ್ಯ ನೀಡುತ್ತವೆ. ಹಾಗಾಗಿ ಸಿನಿಮಾ, ಸಂಗೀತ ಅಥವಾ ವೀಡಿಯೊ ಕಾಲ್‌ಗಳಿಗೆ ಪರ್ಫೆಕ್ಟ್ ಆಗಿದೆ.
6ಎನ್ಎಂ ಆಧಾರಿತ ಆಕ್ಟಾ-ಕೋರ್ ಪ್ರೊಸೆಸರ್ ನಿಂದ ಚಾಲಿತವಾದ ಗ್ಯಾಲಕ್ಸಿ ಟ್ಯಾಬ್ ಎ11 ವೇಗವಾದ ಮತ್ತು ವಿದ್ಯುಚ್ಛಕ್ತಿ ಉಳಿತಾಯದ ಸಾಮರ್ಥ್ಯ ಹೊಂದಿದೆ. ಬ್ರೌಸಿಂಗ್, ಗೇಮಿಂಗ್ ಮತ್ತು ಸತತವಾಗಿ ವೆಬ್ ಸೀರೀಸ್ ವೀಕ್ಷಣೆಗೆ ನೆರವಾಗುವ 5100ಎಂಎಎಚ್ ಬ್ಯಾಟರಿ ಇದೆ.
ವೀಡಿಯೊ ಕಾಲ್‌ಗಳಿಗೆ 5ಎಂಪಿಯ ಫ್ರಂಟ್ ಕ್ಯಾಮೆರಾ ಇದ್ದು, ಹೆಚ್ಚು ಸ್ಪಷ್ಟ ಮತ್ತು ಸೊಗಸಾದ ಚಿತ್ರಣ ನೀಡುತ್ತದೆ. ಕುಟುಂಬದೊಂದಿಗೆ ಮಾತಾಡುತ್ತಿರಲಿ ಅಥವಾ ತಂಡದೊಂದಿಗೆ ಕೆಲಸ ಮಾಡುತ್ತಿರಲಿ ಹೀಗೆ ಎಲ್ಲಾ ಸಂದರ್ಭದಲ್ಲಿ ಪ್ರತಿಯೊಬ್ಬರ ಭಾವನೆಯೂ ಸ್ಪಷ್ಟವಾಗಿ ತಿಳಿಯುವಂತಹ ಸಾಮರ್ಥ್ಯ ಹೊಂದಿದೆ.
ಕ್ಲಾಸಿಕ್ ಗ್ರೇ ಮತ್ತು ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿರುವ ಗ್ಯಾಲಕ್ಸಿ ಟ್ಯಾಬ್ ಎ11, 8ಜಿಬಿ ವರೆಗೆ ರಾಮ್ ಹೊಂದಿದ್ದು, ವೇಗವಾದ ಮತ್ತು ಸುಗಮ ಮಲ್ಟಿಟಾಸ್ಕಿಂಗ್ ಸಾಧ್ಯವಾಗಿಸುತ್ತದೆ. 12 8ಜಿಬಿ ಸ್ಟೋರೇಜ್ ಇದ್ದು, ದೊಡ್ಡ ಫೈಲ್‌ಗಳಿಗೆ ಸಾಕಷ್ಟು ಜಾಗವಿದೆ. ಇದಲ್ಲದೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 2 ಟಿಬಿವರೆಗೆ ಸ್ಟೋರೇಜ್ ವಿಸ್ತರಿಸಬಹುದು.
*ಬೆಲೆ ಮತ್ತು ಲಭ್ಯತೆ:*
ಗ್ಯಾಲಕ್ಸಿ ಟ್ಯಾಬ್ ಎ11 Samsung.com, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಆಯ್ದ ರಿಟೇಲ್ ಮಳಿಗೆಗಳಲ್ಲಿ ಲಭ್ಯವಿದೆ.
ಉತ್ಪನ್ನ ಕನೆಕ್ಟಿವಿಟಿ ರಾಮ್ ಸ್ಟೋರೇಜ್ ಬೆಲೆ ಬ್ಯಾಂಕ್ ಕ್ಯಾಶ್ ಬ್ಯಾಕ್
ಗ್ಯಾಲಕ್ಸಿ ಟ್ಯಾಬ್ ಎ11 ವೈಫೈ 4ಜಿಬಿ 64ಜಿಬಿ ರೂ. 12999 ರೂ. 1000
ಗ್ಯಾಲಕ್ಸಿ ಟ್ಯಾಬ್ ಎ11 ಎಲ್ ಟಿ ಇ 4ಜಿಬಿ 64ಜಿಬಿ ರೂ. 15999 ರೂ. 1000
ಗ್ಯಾಲಕ್ಸಿ ಟ್ಯಾಬ್ ಎ11 ವೈಫೈ 8ಜಿಬಿ 128ಜಿಬಿ ರೂ. 17999 ರೂ. 1000
ಗ್ಯಾಲಕ್ಸಿ ಟ್ಯಾಬ್ ಎ11 ಎಲ್ ಟಿ ಇ 8ಜಿಬಿ 128ಜಿಬಿ ರೂ. 20999 ರೂ. 1000








