ಮಂಗಳೂರು, ಡಿಸೆಂಬರ್ 04 :ಶಬರಿಮಲೆ ತೆರಳುವ ಭಕ್ತರಿಗಾಗಿ ಮಂಗಳೂರು ಜಂಕ್ಷನ್ ಮತ್ತು ತಿರುವನಂತಪುರ ನಾರ್ತ್ ನಿಲ್ದಾಣ ಗಳ ನಡುವೆ ಶಬರಿಮಲೆ ಯಾತ್ರಾರ್ಥಿಗಳ ದಟ್ಟಣೆಯ ಹಿನ್ನೆಲೆಯಲ್ಲಿ ವಿಶೇಷ ರೈಲುಗಳು ಸೇವೆ ಆರಂಭಿಸಲಿದೆ
ಮಂಗಳೂರು ಜಂಕ್ಷನ್-ತಿರುವನಂತಪುರ ನಾರ್ತ್ ವೀಕ್ಲಿ ಎಕ್ಸ್ ಪ್ರೆಸ್ ಸ್ಪೆಷಲ್ (ನಂ. 06041) ರೈಲು ಡಿ.7ರಿಂದ ಜ.18ರ ವರಗೆ ಪ್ರತಿ ರವಿವಾರ ಸಂಜೆ 6ಕ್ಕೆ ಮಂಗಳೂರು ಜಂಕ್ಷನ್ನಿಂದ ಹೊರಟು ಮರುದಿನ ಬೆಳಗ್ಗೆ 6.30ಕ್ಕೆ ತಿರುವನಂತಪುರ ನಾರ್ತ್ ತಲುಪಲಿದೆ.
ಅದೇ ರೀತಿ ತಿರುವನಂತಪುರ ನಾರ್ತ್-ಮಂಗಳೂರು ಜಂಕ್ಷನ್ ವೀಕ್ಲಿ ಎಕ್ಸ್ಪ್ರೆಸ್ ಸ್ಪೆಷಲ್ (ನಂ.06042) ರೈಲು ಡಿ.8ರಿಂದ ಜ.19ರ ವರಗೆ ಪ್ರತಿ ಸೋಮ ವಾರ ಬೆಳಗ್ಗೆ 8.30ಕ್ಕೆ ತಿರುವನಂತಪುರ ನಾರ್ತ್ ನಿಂದ ಹೊರಟು ಅದೇ ದಿನ ರಾತ್ರಿ 8.30ಕ್ಕೆ ಸೆಂಟ್ರಲ್ ತಲುಪಲಿದೆ.
ಮಂಡಲ- ಮಕರಮಾಸ ಋತುವಿನ 18 ದಿನಗಳು ಪೂರ್ಣಗೊಂಡಿದ್ದು, ಶಬರಿಮಲೆ ತಲುಪಿದ ಒಟ್ಟು ಯಾತ್ರಾರ್ಥಿಗಳ ಸಂಖ್ಯೆ 15 ಲಕ್ಷ ದಾಟಿದೆ.








