ಮಣಿಪಾಲ: ಡಿಸೆಂಬರ್ 03:“ಅಡ್ವಾನ್ಸ್ಡ್ ಆಪ್ಟಿಕಲ್ ಮೈಕ್ರೋಸ್ಕೋಪಿ: ಬೇಸಿಕ್ಸ್ ಮತ್ತುಅಪ್ಲಿಕೇಶನ್ಸ್” ಕಾರ್ಯಾಗಾರವನ್ನು ಮಣಿಪಾಲ ಸ್ಕೂಲ್ ಆಫ್ ಲೈಫ್ ಸೈನ್ಸಸ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಹಾಗೂ ಮಣಿಪಾಲ OPTICA ವಿದ್ಯಾರ್ಥಿ ಘಟಕದ ಸಹಯೋಗದಲ್ಲಿ ಮಣಿಪಾಲ ಸ್ಕೂಲ್ ಆಫ್ ಲೈಫ್ ಸೈನ್ಸಸ್‌ನಲ್ಲಿ ಡಿಸೆಂಬರ್ 1, 2025 ರಂದು ಡಾ. ಶರತ್ ಕೆ. ರಾವ್, ಪ್ರೋ ವೈಸ್ ಚಾನ್ಸಲರ್ (ಹೆಲ್ತ್ ಸೈನ್ಸಸ್) ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಮಣಿಪಾಲ, ಹಾಗೂ ಪ್ರೊ. ಅಮ್ಮಾಸಿ ಪೆರಿಯಾಸಾಮಿ, ಪ್ರೊಫೆಸರ್ ಮತ್ತು ಸ್ಥಾಪಕ ನಿರ್ದೇಶಕ, ಡಬ್ಲ್ಯು.ಎಂ. ಕೆಕ್ ಸೆಂಟರ್ ಫಾರ್ ಸೆಲ್ಲ್ಯುಲರ್ ಇಮೇಜಿಂಗ್, ಯುನಿವರ್ಸಿಟಿ ಆಫ್ ವರ್ಜೀನಿಯಾ, ಯುಎಸ್‌ಎ ಅವರಿಂದ ಉದ್ಘಾಟಿಸಲಾಯಿತು.
ಕಾರ್ಯಾಗಾರದಲ್ಲಿಅತಿಥಿ ಉಪನ್ಯಾಸಕರಾಗಿ ಡಾ. ಸ್ವಾತಿ ಶರ್ಮಾ (ಡಿಪಾರ್ಟ್‌ಮೆಂಟ್ ಆಫ್ ಪ್ಯಾಥಾಲಜಿ, ಕೆಎಂಸಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಮಣಿಪಾಲ), ಡಾ. ಕೆ. ಕೆ. ಮಹತೋ, ಡಾ. ಶಾಮ ಪ್ರಸಾದ ಕೆ., ಡಾ. ಮನಶ್ ಪಾಲ್ ಮತ್ತು ಡಾ. ವಿದು ಶಂಕರ್ ಬಾಬು, ತಮ್ಮ ಉಪನ್ಯಾಸಗಳನ್ನು ನೀಡುತ್ತಿದ್ದಾರೆ. ಜೊತೆಯಲ್ಲಿ ಲೈಕಾ ಮೈಕ್ರೋಸಿಸ್ಟಮ್ಸ್, ಝೈಸ್, ಡಿ.ಎಸ್.ಎಸ್. ಇಮೇಜ್‌ಟೆಕ್, ರೆವಿಟ್ಟಿ ಮತ್ತು ಬಯೋಟ್ರಾನ್ ಹೆಲ್ತ್‌ಕೇರ್ ಮುಂತಾದ ಕೈಗಾರಿಕಾ ಸಹಯೋಗಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಇದಲ್ಲದೆ, 3DOptix ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಟಿಓ ಆಗಿರುವ ಹಾಗೂ ತೆಲ್ ಅವೀವ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ಪ್ರೊಫೆಸರ್ ಆಗಿರುವ ಪ್ರೊ. ಹೈಮ್ ಸುಕೊವ್ಸ್ಕಿ ಅವರು ವರ್ಚುವಲ್ ಉಪನ್ಯಾಸ ವನ್ನು ನೀಡಲಿದ್ದಾರೆ.
ಉದ್ಘಾಟನಾ ಸಮಾರಂಭದ ವೇಳೆ ಗಣ್ಯರು ಲೇಸರ್ ಮೈಕ್ರೋಡಿಸೆಕ್ಷನ್ ಮೈಕ್ರೋಸ್ಕೋಪ್ ಸೌಲಭ್ಯ ಹಾಗೂ ಮಣಿಪಾಲ ಸ್ಕೂಲ್ ಆಫ್ ಲೈಫ್ ಸೈನ್ಸಸ್ ಸೆಂಟ್ರಲ್ ಇನ್‌ಸ್ಟ್ರುಮೆಂಟ್ ಫೆಸಿಲಿಟಿಯನ್ನು ವಿದ್ಯುನ್ಮಾನವಾಗಿ ಉದ್ಘಾಟಿಸಿದರು. ಈ ಮೂಲಭೂತ ಸೌಕರ್ಯಗಳ ಸೇರ್ಪಡೆ, ವಿಜ್ಞಾನ ಕ್ಷೇತ್ರದಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಸಂಸ್ಥೆಯ ಸಮಗ್ರ ಅಭಿವೃದ್ಧಿ ಮತ್ತು ಪ್ರಗತಿಯನ್ನು ಇನ್ನಷ್ಟು ಬಲಪಡಿಸುವುದಲ್ಲದೆ, ವಿಶ್ವಮಟ್ಟದಲ್ಲಿ ಅದರ ಗೌರವವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಕುಮಾರಿ ಚಿನ್ಮಯಿ ಬಿ. ಎಸ್. ಅವರಿಂದ ಪ್ರಾರ್ಥನೆಯೊಂದಿಗೆ ಸಮಾರಂಭ ಪ್ರಾರಂಭಗೊಂಡು, ನಂತರ ಸಂಚಾಲಕ ಹಾಗೂ ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್, ಬಯೋಫಿಸಿಕ್ಸ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ನಿರ್ಮಲ್ ಮಜುಮ್ದಾರ್ ಅವರು ಸ್ವಾಗತ ಭಾಷಣ ನೀಡಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ, ಡಾ. ಶರತ್ ಕೆ. ರಾವ್ ಅವರು ಕಾರ್ಯಾಗಾರದಲ್ಲಿ ಭಾಗವಹಿಸುವವರು ಈ ವಿಶಿಷ್ಟ ವೇದಿಕೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು ಮತ್ತು ಮೈಕ್ರೋಸ್ಕೋಪಿ ಹಾಗೂ ಇಮೇಜಿಂಗ್ ತಂತ್ರಜ್ಞಾನಗಳಲ್ಲಿ ಉತ್ತಮ ಗುಣಮಟ್ಟದ ತರಬೇತಿಯನ್ನು ಉತ್ತೇಜಿಸುವ ಮಣಿಪಾಲ ಸ್ಕೂಲ್ ಆಫ್ ಲೈಫ್ ಸೈನ್ಸಸ್ ನ ಪ್ರಯತ್ನಗಳನ್ನು ಪ್ರಶಂಸಿಸಿದರು. ಪ್ರೊ. ಅಮ್ಮಾಸಿ ಪೆರಿಯಾಸಾಮಿ ಅವರು ಸೆಲ್ಯೂಲರ್ ಇಮೇಜಿಂಗ್‌ಗಾಗಿ ಫ್ಲೂರೆಸೆನ್ಸ್ ಮೈಕ್ರೋಸ್ಕೋಪಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿಗಳು ಮತ್ತು ಸುಧಾರಿತ ಮೈಕ್ರೋಸ್ಕೋಪಿಯಲ್ಲಿ ಜಾಗತಿಕ ಸಹಯೋಗಗಳ ಪಾತ್ರವನ್ನು ವಿವರಿಸಿದರು.
ಸೆಲ್ ಮತ್ತು ಮೊಲಿಕ್ಯು ಲಾರ್ ಬಯಾಲಜಿ ವಿಭಾಗದ ಪ್ರೊಫೆಸರ್ , ವಿಭಾಗದ ಮುಖ್ಯಸ್ಥ ಮತ್ತು ಸಂಯೋಜಕರಾದ ಡಾ. ಶಾಮ ಪ್ರಸಾದ ಕೆ. ಅವರು ಕಾರ್ಯಾಗಾರದ ಸಮಗ್ರ ಅವಲೋಕನವನ್ನು ಮಂಡಿಸಿ, ಆಪ್ಟಿಕಲ್ ಮೈಕ್ರೋಸ್ಕೋಪಿಯ ಮೂಲಭೂತ ಹಾಗೂ ಪ್ರಗತಿಪರ ಜ್ಞಾನ ವೃದ್ಧಿಸುವುದೇ ಕಾರ್ಯಾಗಾರದ ಉದ್ದೇಶವೆಂದು ವಿವರಿಸಿದರು. ಉದ್ಘಾಟನಾ ಅಧಿವೇಶನದ ಕೊನೆಯಲ್ಲಿ ಮಣಿಪಾಲ ಸ್ಕೂಲ್ ಆಫ್ ಲೈಫ್ ಸೈನ್ಸಸ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ನ ರೇಡಿಯೇಶನ್ ಬಯಾಲಜಿ ಹಾಗೂ ಟಾಕ್ಸಿಕಾಲಜಿ ವಿಭಾಗದ ಸಹ ಪ್ರಾಧ್ಯಾಪಕ ಮತ್ತು ಸಂಯೋಜಕರಾದ ಡಾ. ಮನಶ್ ಕೆ. ಪಾಲ್ ಅವರು ಧನ್ಯವಾದ ಸಮರ್ಪಿಸಿದರು.
ಈ ಕಾರ್ಯಾಗಾರವು ಡಿಸೆಂಬರ್ 3, 2025 ರವರೆಗೆ ನಡೆಯಲಿದ್ದು, ಆಪ್ಟಿಕಲ್ ಮೈಕ್ರೋಸ್ಕೋಪಿ ಮತ್ತು ಇಮೇಜಿಂಗ್ ಕ್ಷೇತ್ರದ ಪ್ರಮುಖ ತಜ್ಞರು, ವಿಜ್ಞಾನಿಗಳು ಮತ್ತು ಯುವ ಸಂಶೋಧಕರನ್ನು ಒಟ್ಟುಗೂಡಿಸಿ ಉಪನ್ಯಾಸಗಳು ಹಾಗೂ ತರಬೇತಿ ಕಾರ್ಯಾಗಾರದ ಮೂಲಕ ಸಂಶೋಧನೆಯನ್ನು ಉತ್ತೇಜಿಸುವುದನ್ನು ಗುರಿಯಾಗಿಸಿಕೊಂಡಿದೆ.








