ಕಾರ್ಕಳ: ಡಿಸೆಂಬರ್ 02:ವಿದ್ಯಾರ್ಥಿಗಳು ಜ್ಞಾನ ಸಂಪಾದನೆ ಮಾಡಬೇಕಾದರೆ ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು ಹಾಗೂ ಗುರುಗಳಿಗೆ ಸಂಪೂರ್ಣ ಶರಣಾಗತರಾಗಬೇಕು. ಇದನ್ನೇ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಭಗವದ್ಗೀತೆಯು ಜೀವನದ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ. ವಿದ್ಯಾರ್ಥಿಗಳು ಭಗವದ್ಗೀತೆಯನ್ನು ಪ್ರತಿದಿನ ಪಠಣ ಮಾಡಿದರೆ ಉತ್ತಮ ಸಾಧನೆ ಮಾಡಲು ಪ್ರೇರಣೆಯಾಗುವುದು ಎಂದು ಶ್ರೀಮತಿ ಪೂಜಾ ಪ್ರಕಾಶ್ ಭಟ್ ಇವರು ಹೇಳಿದರು. ಅವರು ಕಾರ್ಕಳದ ಶ್ರೀ ವ್ಯಾಸ ರಘುಪತಿ ಸಂಸ್ಕೃತ ವಿದ್ಯಾಶಾಲಾ ಫಂಡಿನ ವತಿಯಿಂದ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ ನಡೆದ 85ನೇ ವರ್ಷದ ಗೀತಾ ಜಯಂತಿ ಆಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಎಸ್. ನಿತ್ಯಾನಂದ ಪೈ ವಹಿಸಿದ್ದರು. ಶಾಲಾ ಸಂಚಾಲಕ ನರೇಂದ್ರ ಕಾಮತ್ ಕೆ., ಆಡಳಿತ ಮಂಡಳಿ ಸದಸ್ಯ ವೈ. ಮೋಹನ್ ಶೆಣೈ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಿದ್ಯಾ ಕಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೌಢಶಾಲಾ ಮುಖ್ಯ ಶಿಕ್ಷಕ ಆರ್. ನಾರಾಯಣ ಶೆಣೈ ಸ್ವಾಗತಿಸಿದರು.ನಯನ ಶೆಣೈ ಎಂ. ಗತವರ್ಷದ ವರದಿ ವಾಚಿಸಿದರು. ಪೂರ್ಣಿಮಾ ಪ್ರಭು ಇವರು ಗೀತೆಯ ಶ್ಲೋಕಗಳ ಕಂಠಪಾಠ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ವಾಚಿಸಿದರು. ಸುಧಾ ಮೋಹನ್ ಇವರು ವಂದಿಸಿದರು. ವಿದ್ಯಾರ್ಥಿನಿಯರಾದ ಧಾರಿಣಿ ಉಪಾಧ್ಯ ಪ್ರಾರ್ಥಿಸಿದರು ಹಾಗೂ ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು
ವರದಿ ಅರುಣ್ ಭಟ್ ಕಾರ್ಕಳ








