ಉಡುಪಿ: ಡಿಸೆಂಬರ್ 01: ಒಣ ಹುಲ್ಲಿಗೆ ಇಟ್ಟ ಬೆಂಕಿಗೆ ಶಾಲಾ ಮಕ್ಕಳ ಖಾಸಗಿ ಬಸ್ಸು ಸುಟ್ಟು ಕರಕಲಾದ ಘಟನೆ ಅಲೆವೂರು ಪ್ರಗತಿ ನಗರದ ಕೇಂದ್ರೀಯ ವಿದ್ಯಾಲಯ ಪರಿಸರದಲ್ಲಿ ನಡೆದಿದ್ದು ಬೆಂಕಿ ಪರಿಸರವಿಡಿ ಆವರಿಸಿದೆ.
ಗಮನಿಸಿದ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಅಗ್ನಿಶಾಮಕದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ಮಕ್ಕಳನ್ನು ಮನೆಗೆ ಕರೆದೊಯ್ದ ನಂತರ ಬಸ್ಸನ್ನು ನಿಲ್ಲಿಸಿರುವುದರಿಂದ ಬಸ್ಸಿನಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಬಾರಿ ದುರಂತ ತಪ್ಪಿದೆ.








