ಉಡುಪಿ:ನವೆಂಬರ್ 27:ಸನ್ಮಾನ್ಯ ಭಾರತದ ಪ್ರಧಾನಮಂತ್ರಿಗಳ 28/11/2025 ರಂದು ರೋಡ್ ಶೋನಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಉಡುಪಿ ಜಿಲ್ಲಾ ಪೊಲೀಸ್ ನೀಡಿರುವ ಸೂಚನೆ ಗಳು ಹೀಗಿವೆ
1. ರೋಡ್ ಶೋ ಕಾರ್ಯಕ್ರಮಕ್ಕೆ ಬರುವವರು ಬೆಳಿಗ್ಗೆ 10:30 ಗಂಟೆಯ ಒಳಗಾಗಿ ಆಗಮಿಸಿ ನಿಗಧಿತ ಸ್ಥಳ ಸೇರುವುದು. ತಡವಾಗಿ ಬಂದವರನ್ನು ನಿರ್ಬಂಧಿಸಲಾಗುವುದು.
2. ರೋಡ್ ಶೋ ಮಾರ್ಗದ ಎರಡೂ ಬದಿಯಲ್ಲಿ ಅಳವಡಿಸಲಾಗಿರುವ ಪೊಲೀಸ್ ಬ್ಯಾರಿಕೇಡ್ ದಾಟಬಾರದು.
3. ರೋಡ್ ಶೋ ಮಾರ್ಗದಲ್ಲಿ ನೀರಿನ ಬಾಟಲ್, ಬ್ಯಾಗ್‌ಗಳು, ಹೂವಿನ ಬೊಕ್ಕೆ, ನೆನಪಿನ ಕಾಣಿಕೆ, ಕ್ಯಾಮರಾ, ಬಾಕ್ಸ್‌ಗಳನ್ನು, ಯಾವುದೇ ಹರಿತವಾದ ಆಯುಧಗಳು, ಚಾಕು, ಬೆಂಕಿ ಸಾಮಗ್ರಿಗಳು, ಡೋನ್‌ಗಳು, ಸ್ಪೋಟಕ ವಸ್ತುಗಳು, ಲೇಸರ್ ಲೈಟ್, ಧ್ವಜದ ಕಂಬಗಳು ಇತ್ಯಾದಿ ನಿಷೇಧಿಸಲಾಗಿದೆ.
4. ಎಲ್ಲಾ ಸಾರ್ವಜನಿಕರು ಕಡ್ಡಾಯವಾಗಿ ಪೊಲೀಸ್ ಪರಿಶೀಲನೆಗೆ ಒಳಗಾಗುವುದು.
5. ರೋಡ್ ಶೋ ಮಾರ್ಗದ ಯಾವುದೇ ಕಟ್ಟಡಗಳ ಮೇಲೆ ಹತ್ತಬಾರದು .
6.ಹಿರಿಯ ನಾಗರೀಕರು, ಮಕ್ಕಳು ಮತ್ತು ಮಹಿಳೆಯರಿಗೆ ಆದ್ಯತೆ ನೀಡಿ ಸಹಕರಿಸಬೇಕು. 3 ವರ್ಷದ ಕೆಳಗಿನ ಮಕ್ಕಳನ್ನು ಕರೆತರಬಾರದು.
7. ಯಾವುದೇ ಸಂಶಯಾಸ್ಪದ ವ್ಯಕ್ತಿ ಅಥವಾ ವಸ್ತು ಕಂಡಲ್ಲಿ ತಕ್ಷಣ ಹತ್ತಿರದ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಬೇಕು.
8. ಹೆಚ್ಚುವರಿಯಾಗಿ ಯಾವುದೇ ಧ್ವಜ, ಚಿತ್ರಪಟ ತರಕೂಡದು.
9. ಸಾರ್ವಜನಿಕರು ಯಾವುದೇ ಉದ್ವೇಗಕ್ಕೆ ಒಳಗಾಗಿ, ನೂಕುನುಗ್ಗಲು ಮಾಡತಕ್ಕದ್ದಲ್ಲ.
10. ಎಲ್ಲಾ ಸಂಧರ್ಭಗಳಲ್ಲಿ ಪೊಲೀಸರೊಂದಿಗೆ ತಾಳ್ಮೆಯಿಂದ ಸಹಕರಿಸುವುದು.








