ಉಡುಪಿ:ನವೆಂಬರ್ 24:ಉಡುಪಿಯಲ್ಲಿ ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಅಂಗವಾಗಿ ನ. 28ರಂದು ನಡೆಯುವ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ಪರಿಶೀಲನೆಗೆ ಇಂದು (ನವೆಂಬರ್ 24) ವಿಶೇಷ ಭದ್ರತ ಪಡೆ (ಎಸ್‌ಪಿಜಿ) ತಂಡ ಭೇಟಿ ನೀಡಿ ಆದಿಉಡುಪಿ ಹೆಲಿಪ್ಯಾಡ್‌ನಿಂದ ಶ್ರೀ ಕೃಷ್ಣ ಮಠ ಪರಿಸರ, ಪಾರ್ಕಿಂಗ್ ಪ್ರದೇಶದ ಸಮೀಪದಲ್ಲಿ ನಡೆಯಲಿರುವ ಲಕ್ಷಕಂಠ ಗೀತಾ ಪಾರಾಯಣ ಕಾರ್ಯಕ್ರಮದ ಸ್ಥಳ ವೀಕ್ಷಣೆ ನಡೆಸಲಿದ್ದಾರೆ.
ಈ ವೇಳೆ ಈಗಾಗಲೇ ನಮೂದಾಗಿಸುವ ಪ್ರಧಾನಿಗಳ ಕಾರ್ಯಕ್ರಮಗಳಲ್ಲಿ ತುಸು ಮಾರ್ಪಾಡು ಮಾಡುವ ಸಾಧ್ಯತೆಗಳೂ ಇವೆ. ಅಲ್ಲದೆ ಕಾರ್ಯಕ್ರಮಕ್ಕೆ ಯಾವ ರೀತಿಯ ಸ್ವಾಗತ ಹಾಗೂ ಬಳಕೆ ಮಾಡುವ ವಸ್ತುಗಳ ಬಗ್ಗೆಯೂ ಸಂಘಟಕರಿಂದ ವಿಶೇಷ ಭದ್ರತ ಪಡೆ ಪಡೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ








