Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಉದ್ಯೋಗ/ಶಿಕ್ಷಣ

ʼತಂತ್ರಜ್ಞಾನ ಮತ್ತು ಮಾನವೀಯತೆ ಸದಾ ಜೊತೆಯಾಗಿರಲಿʼ: ಮಾಹೆಯ 33ನೇ ಘಟಿಕೋತ್ಸವದಲ್ಲಿ ಪ್ರತಿಧ್ವನಿಸಿದ ಆಶಯ..!!

Dhrishya News by Dhrishya News
24/11/2025
in ಉದ್ಯೋಗ/ಶಿಕ್ಷಣ, ಸುದ್ದಿಗಳು
0
ʼತಂತ್ರಜ್ಞಾನ ಮತ್ತು ಮಾನವೀಯತೆ ಸದಾ ಜೊತೆಯಾಗಿರಲಿʼ: ಮಾಹೆಯ 33ನೇ ಘಟಿಕೋತ್ಸವದಲ್ಲಿ ಪ್ರತಿಧ್ವನಿಸಿದ ಆಶಯ..!!
0
SHARES
20
VIEWS
Share on FacebookShare on Twitter

• ಘಟಿಕೋತ್ಸವದ ಮೂರನೇ ದಿನ, 1,645 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ.

• 58 ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ. 

• ಅತ್ಯತ್ತಮ 3 ವಿದ್ಯಾರ್ಥಿಗಳಿಗೆ ಡಾ. ಟಿ.ಎಂ.ಎ. ಪೈ ಚಿನ್ನದ ಪದಕ. 

ಮಣಿಪಾಲ:ನವೆಂಬರ್ 23: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯ 33ನೇ ಘಟಿಕೋತ್ಸವದ ಮೂರನೇ ದಿನದ ಸಮಾರಂಭವು ಸಮರ್ಥ ಪದವೀಧರರನ್ನು ರೂಪಿಸುವ, ಹೊಸ ಆಲೋಚನೆಗಳನ್ನು ಪ್ರೋತ್ಸಾಹಿಸುವ ಮಾಹೆಯ ಬದ್ಧತೆಯನ್ನು ಎತ್ತಿ ಹಿಡಿಯಿತು.

 

ಮೂರನೇ ದಿನದ ಘಟಿಕೋತ್ಸವದಲ್ಲಿ, 58 ಪಿಎಚ್‌ಡಿ ಪದವೀಧರರು ಸೇರಿ ಒಟ್ಟು 1,645 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡಿದ 3 ವಿದ್ಯಾರ್ಥಿಗಳು ಪ್ರತಿಷ್ಠಿತ ಡಾ. ಟಿ.ಎಂ.ಎ. ಪೈ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

 

ಘಟಿಕೋತ್ಸವ ಉದ್ದೇಶಿಸಿ ಮಾತನಾಡಿದ, ಗ್ಲಾಸ್ಗೊದ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಅಂಡ್ ಸರ್ಜನ್ಸ್‌ನ ಅಧ್ಯಕ್ಷರಾದ ಪ್ರೊಫೆಸರ್ ಹ್ಯಾನಿ ಎಟೀಬಾ, ತಂತ್ರಜ್ಞಾನಾಧಾರಿತ ಪ್ರಪಂಚದಲ್ಲಿ ಅನುಕಂಪಪೂರಿತ ಸಂವಹನದ ಮಹತ್ವವನ್ನು ಒತ್ತಿ ಹೇಳಿದರು. ಜ್ಞಾನವು ಕಾಳಜಿ ಧನಾತ್ಮಕ ಪರಿಣಾವಾಗಿ ಪರಿವರ್ತನೆಯಾಗಲು ಅನುಕಂಪಪೂರಿತ ಸಂವಹನ ಬಲು ಮಹತ್ವದ ಸೇತುವೆಯಾಗುತ್ತದೆ ಎಂದರು. ಮಾನವೀಯತೆ, ಕೇಳಿಸಿಕೊಳ್ಳುವ ಸೂಕ್ಷ್ಮತೆ ಮತ್ತು ಉತ್ತಮ ಬಾಂಧವ್ಯವು ಮಿಳಿತಗೊಂಡಾಗಲೇ ಜ್ಞಾನ ಮತ್ತು ವಿಜ್ಞಾನಕ್ಕೆ ಅರ್ಥ ಬರುತ್ತದೆʼ ಎಂದು ಅವರು ಅಭಿಪ್ರಾಯ ಪಟ್ಟರು.

 

ʼಯಾವುದೇ ಮಹತ್ವದ ಕಾರ್ಯವನ್ನು ಏಕಾಂಗಿಯಾಗಿ ಸಾಧಿಸಲು ಸಾಧ್ಯವಿಲ್ಲ. ಎಲ್ಲರನ್ನು ಒಳಗೊಂಡು ಹೆಜ್ಜೆಯಿಟ್ಟಾಗಲೇ ಸಾಧನೆ ಶಿಖರ ತಲುಪಲು ಸಾಧ್ಯ. ವಿದ್ಯಾರ್ಥಿಗಳು ಮುಂದಿನ ತಮ್ಮ ವೃತ್ತಿಜೀವನಲ್ಲಿ ಸಹೋದ್ಯೋಗಿಗಳನ್ನು ಮಾತ್ರವಲ್ಲದೇ ಎಲ್ಲರನ್ನೂ ಗೌರವದಿಂದ ಕಾಣುವ ಮತ್ತು ಅವರಿಂದ ಕಲಿಯುವ ಮನೋಭಾವವನ್ನು ಅಳವಡಿಕೊಳ್ಳಬೇಕು. ವಿಶ್ವಾಸ, ಆತ್ಮಗೌರವ ಮತ್ತು ಮಾನವೀಯತೆ ಕೇಂದ್ರೀಕರಿಸಿದ ನಾಯಕತ್ವದ ಅಡಿಪಾಯದ ಮೇಲೆ ತಮ್ಮ ವೃತ್ತಿಬದುಕನ್ನು ಕಟ್ಟಬೇಕು. ಭವಿಷ್ಯದ ಒಳಿತಿಗಾಗಿ ತಂತ್ರಜ್ಞಾನ ಮತ್ತು ಮಾನವೀಯತೆ ಒಂದಾಗಿ ಸಾಗಬೇಕು. ಇದನ್ನು ಸಾಧಿಸಬೇಕಾದರೆ, ಜ್ಞಾನ, ಸಮಗ್ರತೆ, ಕರುಣೆ ಮತ್ತು ಗೌರವದೊಂದಿಗೆ ಮುನ್ನಡೆಯುವುದು ಅತ್ಯಗತ್ಯʼ ಎಂದು ಅವರು ತಿಳಿಸಿದರು.

 

ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್, ವಿಎಸ್‌ಎಂ (ನಿವೃತ್ತ) ಅವರು ಮಾತನಾಡಿ, ʼಸ್ಥಳೀಯ ಸಮುದಾಯಕ್ಕೆ ಸೇವೆ ಸಲ್ಲಿಸಲು ಮತ್ತು ನಮ್ಮ ಸುತ್ತಲಿನ ಸಂಸ್ಕೃತಿಗಳನ್ನು ಉಳಿಸಲು ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾಳಜಿ, ಮಾನವೀಯತೆ ಮತ್ತು ಜವಾಬ್ದಾರಿಯನ್ನು ವಿದ್ಯಾರ್ಥಿಗಳಲ್ಲಿ ಪೋಷಿಸಲು, ಶೈಕ್ಷಣಿಕ ವಿಷಯಗಳನ್ನು ಮೀರಿ ವಿಸ್ತರಿಸುವ ಮಹತ್ವವನ್ನು’ ಅವರು ಒತ್ತಿ ಹೇಳಿದರು.

 

ನಿಧಿ ಎಸ್. (ಎಂಇ, ಬಿಗ್ ಡೇಟಾ ಅನಲಿಟಿಕ್ಸ್, ಎಂಎಸ್‌ಐಎಸ್), ಕಾಶಿಕಾ ಅನಿಲ್ ಕಿಣಿ (ಬಿ.ಕಾಂ ಪ್ರೊಫೆಷನಲ್, ಎಂಎಸ್‌ಸಿಇ) ಮತ್ತು ಝರಾ ಮೊಹಿದ್ದಿನ್ (ಐಪಿಎಂ, ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ) ಇವರಿಗೆ ತಮ್ಮ ಕ್ಷೇತ್ರಗಳಲ್ಲಿನ ಅಸಾಧಾರಣ ಸಾಧನೆಗಾಗಿ ಪ್ರತಿಷ್ಠಿತ ಡಾ. ಟಿ.ಎಂ.ಎ. ಪೈ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

 

ಚಿನ್ನದ ಪದಕ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿಗಳು, ʼಇದು ನಮ್ಮ ಪಾಲಿನ ಅತ್ಯಂತ ಭಾವನಾತ್ಮಕ ಕ್ಷಣವಾಗಿದ್ದು, ನಮ್ಮ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಕಲ್ಲಾಗಿದ್ದ ನಮ್ಮನ್ನು ಒಂದು ಶಿಲೆಯಂತೆ ರೂಪಿಸಿರುವ ಈ ಸಂಸ್ಥೆಗೆ ಸದಾ ಕೃತಜ್ಞರಾಗಿರುತ್ತೇವೆ. ಜತೆಗೆ ಸಂಸ್ಥೆ ಮತ್ತು ಸಮಾಜಕ್ಕೆ ಏನನ್ನಾದರೂ ಮರಳಿ ನೀಡುವ ಸಮಯ ಈಗ ಬಂದಿದೆ. ಹಾಗಾಗಿ, ಈ ಸಾಧನೆ ಅಂತ್ಯವಲ್ಲ, ಬದಲಿಗೆ ಹೊಸ ಜವಾಬ್ದಾರಿ ಮತ್ತು ಕೊಡುಗೆ ನೀಡುವ ಅಧ್ಯಾಯದ ಮುನ್ನುಡಿಯಾಗಿದೆʼ ಎಂದು ಅಭಿಪ್ರಾಯಪಟ್ಟರು.

 

33ನೇ ಘಟಿಕೋತ್ಸವದ ಮೂರನೇ ದಿನದಂದು, ಮಾಹೆ ಪದವೀಧರರ ಗಮನಾರ್ಹ ಸಾಧನೆಗಳನ್ನು ಸಂಭ್ರಮಿಸಿತು. ತಂತ್ರಜ್ಞಾನ ಯುಗದಲ್ಲಿ ಜವಾಬ್ದಾರಿಯುತ, ಸಂವೇದನಾಶೀಲ ಮತ್ತು ಮಾನವ ಕೇಂದ್ರಿತ ನಾಯಕರನ್ನು ರೂಪಿಸುವ ಮಾಹೆಯ ಉದ್ದೇಶವನ್ನು ಈ ಸಮಾರಂಭವು ಪ್ರತಿನಿಧಿಸಿತು. ವಿದ್ಯಾರ್ಥಿಗಳು, ಪೋಷಕರು, ಅಧ್ಯಪಕ ಖುಷಿಯ ಕ್ಷಣಗಳೊಂದಿಗೆ ಮಣಿಪಾಲ ಕ್ಯಾಂಪಸ್‌ನ ಘಟಿಕೋತ್ಸವ ಕಾರ್ಯಕ್ರಮ ತೆರೆಕಂಡಿತು. ಮಾಹೆ ಘಟಿಕೋತ್ಸವದ ಮುಂದಿನ ಹಂತವಾಗಿ ಇದೇ ನವೆಂಬರ್ 29 ಮತ್ತು 30 ರಂದು ಬೆಂಗಳೂರು ಕ್ಯಾಂಪಸ್‌ನಲ್ಲಿ ಮುಂದುವರಿಸಲಿದೆ.

 

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಬಗ್ಗೆ:

 

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯಾಗಿದೆ. ಮಾಹೆ ಆರೋಗ್ಯ ವಿಜ್ಞಾನ (HS), ಮ್ಯಾನೇಜ್‌ಮೆಂಟ್, ಕಾನೂನು, ಮಾನವಿಕ ಮತ್ತು ಸಮಾಜ ವಿಜ್ಞಾನ (MLHS), ಮತ್ತು ತಂತ್ರಜ್ಞಾನ ಮತ್ತು ವಿಜ್ಞಾನ (T&S) ಸ್ಟ್ರೀಮ್‌ಗಳಾದ್ಯಂತ ಮಣಿಪಾಲ, ಮಂಗಳೂರು, ಬೆಂಗಳೂರು, ಜೆಮ್‌ಷೆಡ್‌ಪುರ ಮತ್ತು ದುಬೈನಲ್ಲಿರುವ ತನ್ನ ಘಟಕ ಘಟಕಗಳ ಮೂಲಕ 400 ವಿಶೇಷತೆಗಳನ್ನು ನೀಡುತ್ತದೆ. ಶೈಕ್ಷಣಿಕ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಸಂಶೋಧನೆಗೆ ಗಮನಾರ್ಹ ಕೊಡುಗೆಗಳಲ್ಲಿ ಗಮನಾರ್ಹವಾದ ದಾಖಲೆಯೊಂದಿಗೆ, MAHE ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಮತ್ತು ಮೆಚ್ಚುಗೆಯನ್ನು ಗಳಿಸಿದೆ. ಅಕ್ಟೋಬರ್ 2020 ರಲ್ಲಿ, ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಮಾಹೆಗೆ ಪ್ರತಿಷ್ಠಿತ ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಸ್ಥಾನಮಾನವನ್ನು ನೀಡಿತು. ಪ್ರಸ್ತುತ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನಲ್ಲಿ (NIRF) 4 ನೇ ಸ್ಥಾನದಲ್ಲಿದೆ, ಮಾಹೆ ಪರಿವರ್ತಕ ಕಲಿಕೆಯ ಅನುಭವ ಮತ್ತು ಶ್ರೀಮಂತ ಕ್ಯಾಂಪಸ್ ಜೀವನವನ್ನು ಬಯಸುವ ವಿದ್ಯಾರ್ಥಿಗಳಿಗೆ ಆದ್ಯತೆಯ ಆಯ್ಕೆಯಾಗಿದೆ, ಹಾಗೆಯೇ ಉನ್ನತ ಪ್ರತಿಭೆಗಳನ್ನು ಹುಡುಕುತ್ತಿರುವ ರಾಷ್ಟ್ರೀಯ ಮತ್ತು ಬಹು-ರಾಷ್ಟ್ರೀಯ ಕಾರ್ಪೊರೇಟ್‌ಗಳಿಗೆ.

Previous Post

ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಉಡುಪಿಗೆ ಭೇಟಿ ನೀಡಲಿದೆ ವಿಶೇಷ ಭದ್ರತ ಪಡೆ..!!

Next Post

ಉಡುಪಿ :ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ, ಶ್ರೀಮತ್ ಜಗದ್ಗುರು ಆನೆಗುಂದಿ ಸಂಸ್ಥಾನ, ಕಟಪಾಡಿ ಇವರಿಂದ ಸಂತ ಸಂದೇಶ..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಉಡುಪಿ :ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ, ಶ್ರೀಮತ್ ಜಗದ್ಗುರು ಆನೆಗುಂದಿ ಸಂಸ್ಥಾನ, ಕಟಪಾಡಿ ಇವರಿಂದ ಸಂತ ಸಂದೇಶ..!

ಉಡುಪಿ :ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ, ಶ್ರೀಮತ್ ಜಗದ್ಗುರು ಆನೆಗುಂದಿ ಸಂಸ್ಥಾನ, ಕಟಪಾಡಿ ಇವರಿಂದ ಸಂತ ಸಂದೇಶ..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಣಿಪಾಲ :ಯುವಕ ನಾಪತ್ತೆ ಪ್ರಕರಣ ದಾಖಲು

ಕೊಡವೂರು :ವ್ಯಕ್ತಿ ನಾಪತ್ತೆ..!

15/06/2026
ಗೃಹಲಕ್ಷ್ಮಿ ಯೋಜನೆ : ಅನರ್ಹರ ಖಾತೆಗಳಿಗೆ ಹಣ ಸ್ಥಗಿತ..!

ಗೃಹಲಕ್ಷ್ಮಿ ಯೋಜನೆ : ಅನರ್ಹರ ಖಾತೆಗಳಿಗೆ ಹಣ ಸ್ಥಗಿತ..!

15/06/2026
ಉಡುಪಿಯಲ್ಲಿ  ತಿಗಳಾರಿ ಲಿಪಿ ಮತ್ತು ಮೋಡಿ ಕನ್ನಡ ಲಿಪಿಯಲ್ಲಿರುವ ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಕಾರ್ಯಾಗಾರ

ಉಡುಪಿಯಲ್ಲಿ  ತಿಗಳಾರಿ ಲಿಪಿ ಮತ್ತು ಮೋಡಿ ಕನ್ನಡ ಲಿಪಿಯಲ್ಲಿರುವ ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಕಾರ್ಯಾಗಾರ

15/06/2026
ಸನ್ಮಾನ ಅಂತ್ಯವಾಗುವುದಲ್ಲ, ಇನ್ನಷ್ಟು ಬೆಳೆಯುವುದಕ್ಕೆ ಅವಕಾಶ : ಫಾ. ಅನಿಲ್ ಡಿಸೋಜಾ

ಸನ್ಮಾನ ಅಂತ್ಯವಾಗುವುದಲ್ಲ, ಇನ್ನಷ್ಟು ಬೆಳೆಯುವುದಕ್ಕೆ ಅವಕಾಶ : ಫಾ. ಅನಿಲ್ ಡಿಸೋಜಾ

14/06/2026

Recent News

ಮಣಿಪಾಲ :ಯುವಕ ನಾಪತ್ತೆ ಪ್ರಕರಣ ದಾಖಲು

ಕೊಡವೂರು :ವ್ಯಕ್ತಿ ನಾಪತ್ತೆ..!

15/06/2026
ಗೃಹಲಕ್ಷ್ಮಿ ಯೋಜನೆ : ಅನರ್ಹರ ಖಾತೆಗಳಿಗೆ ಹಣ ಸ್ಥಗಿತ..!

ಗೃಹಲಕ್ಷ್ಮಿ ಯೋಜನೆ : ಅನರ್ಹರ ಖಾತೆಗಳಿಗೆ ಹಣ ಸ್ಥಗಿತ..!

15/06/2026
ಉಡುಪಿಯಲ್ಲಿ  ತಿಗಳಾರಿ ಲಿಪಿ ಮತ್ತು ಮೋಡಿ ಕನ್ನಡ ಲಿಪಿಯಲ್ಲಿರುವ ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಕಾರ್ಯಾಗಾರ

ಉಡುಪಿಯಲ್ಲಿ  ತಿಗಳಾರಿ ಲಿಪಿ ಮತ್ತು ಮೋಡಿ ಕನ್ನಡ ಲಿಪಿಯಲ್ಲಿರುವ ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಕಾರ್ಯಾಗಾರ

15/06/2026
ಸನ್ಮಾನ ಅಂತ್ಯವಾಗುವುದಲ್ಲ, ಇನ್ನಷ್ಟು ಬೆಳೆಯುವುದಕ್ಕೆ ಅವಕಾಶ : ಫಾ. ಅನಿಲ್ ಡಿಸೋಜಾ

ಸನ್ಮಾನ ಅಂತ್ಯವಾಗುವುದಲ್ಲ, ಇನ್ನಷ್ಟು ಬೆಳೆಯುವುದಕ್ಕೆ ಅವಕಾಶ : ಫಾ. ಅನಿಲ್ ಡಿಸೋಜಾ

14/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved