Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಕಾರ್ಕಳ ನಗರ ವ್ಯಾಪ್ತಿಯಲ್ಲಿ ಕರ್ಕಶ ಹಾರ್ನ್‌ ಹಾವಳಿ- ಸಾರ್ವಜನಿಕರಿಗೆ ನಿತ್ಯ ಕಿರಿಕಿರಿ..!!

Dhrishya News by Dhrishya News
19/05/2023
in ಕರಾವಳಿ, ಸುದ್ದಿಗಳು
0
0
SHARES
15
VIEWS
Share on FacebookShare on Twitter

ಕಾರ್ಕಳ: ಕಾರ್ಕಳ ನಗರ ವ್ಯಾಪ್ತಿಯಲ್ಲಿ ಕರ್ಕಶ ಹಾರ್ನ್ ಹಾವಳಿ ಹೆಚ್ಚಿದ್ದು ಸಾರ್ವಜನಿಕರು ಇದರಿಂದ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ, ಕಾರ್ಕಳ ನಗರ ಬೆಳೆಯುತ್ತಿದೆ. ವಾಹನಗಳ ಸಂಚಾರವೂ ಅಧಿಕವಾಗುತ್ತಿದೆ.

ಬಂಡಿಮಠದಿಂದ ಕಾರ್ಕಳ ಬಸ್‌ ನಿಲ್ದಾಣದ ವರೆಗೆ ವಾಹನಗಳ ಓಡಾಟ ಹೆಚ್ಚಿದೆ. ವಾಹನಗಳು ನಗರ ಪ್ರವೇಶಿಸುತ್ತಲೇ ಕರ್ಕಶ ಹಾರ್ನ್ ಮೊಳಗುವುದಕ್ಕೆ ಆರಂಭವಾಗುತ್ತದೆ. ಇದರಿಂದ ರಸ್ತೆ ಬದಿ ವ್ಯಾಪಾರಿಗಳು, ಪಾದಚಾರಿಗಳಿಗೆ ಕಿರಿಕಿರಿ ಅನುಭವವಾಗುತ್ತದೆ. ಇದನ್ನು ತಡೆಗಟ್ಟುವಲ್ಲಿ ಸಾರಿಗೆ ಇಲಾಖೆ ವಿಫ‌ಲವಾಗಿದೆ. ಇದರಿಂದಾಗಿ ನಿತ್ಯವೂ ಶಬ್ಧ ಮಾಲಿನ್ಯದಿಂದ ನಾಗರಿಕರೂ ಹಿಡಿಶಾಪ ಹಾಕುತ್ತಿರುತ್ತಾರೆ.

ಜಿಲ್ಲಾ ಕೇಂದ್ರ ಉಡುಪಿ ಕಡೆಯಿಂದ ಹಾಗೂ ಮಂಗಳೂರು ರಸ್ತೆಯ ಮೂರು ಮಾರ್ಗವಾಗಿ ಅತೀ ಹೆಚ್ಚು ವಾಹನಗಳು ನಗರದ ಬಸ್‌ ನಿಲ್ದಾಣ ತಲುಪುತ್ತವೆ. ಉಡುಪಿ, ಮಂಗಳೂರು ನಗರಗಳಿಗೆ ತೆರಳುವ ಸರ್ವಿಸ್‌ ಬಸ್‌, ಹೆಬ್ರಿ, ಬಜಗೋಳಿ, ನಿಟ್ಟೆ, ಹೀಗೆ ಗ್ರಾಮಿಣ ಭಾಗಕ್ಕೆ ಸಂಚಾರ ಕೈಗೊಳ್ಳುವ ಬಸ್‌ಗಳು ಸೇರಿ ಸುತ್ತಲಿನಿಂದ ವಾಹನಗಳು ಪೇಟೆ ತಲುಪುತ್ತಿದ್ದಂತೆ ವಾಹನಗಳಿಂದ ತುಂಬಿ ಟ್ರಾಫಿಕ್‌ ಜಾಮ್‌ ಉಂಟಾಗುತ್ತದೆ.

ನಗರ ಬೆಳೆದಂತೆ ಕಿರಿದಾದ ರಸ್ತೆಗಳು ವಾಹನ ಒತ್ತಡಕ್ಕೆ ಒಳಗಾಗುತ್ತವೆ. ಅದರಲ್ಲೂ ವಿವಿಧ ಊರುಗಳಿಂದ ನಗರ ಬಸ್‌ಸ್ಟಾಂಡ್‌ಗೆ ಬಂದು ಹೋಗುವ ಬಸ್‌ಗಳಲ್ಲಿ ಸರ್ವೀಸ್‌ ಬಸ್‌ಗಳೇ ಅಧಿಕ. ಮೂರು ರಸ್ತೆಗಳಲ್ಲಿ ಲಘು ವಾಹನ, ದ್ವಿಚಕ್ರ ವಾಹನ ಅಡ್ಡ ಬಂದಾಗೆಲ್ಲ ಕರ್ಕಶವಾಗಿ ಹಾರ್ನ್ ಮೊಳಗಿಸಿಕೊಂಡು ಹೋಗುವುದು ಇಲ್ಲಿ ಸರ್ವೇ ಸಾಮಾನ್ಯವಾಗಿದೆ.

ಮೂರು ಮಾರ್ಗದಲ್ಲಿ ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್‌ ಸಿಬಂದಿ ರಸ್ತೆ ಮೇಲೆ ಓಡಾಡುವ ವಾಹನಗಳ ಮೇಲೆ ನಿಗಾ ವಹಿಸುತ್ತಾರೆ. ಟ್ರಾಫಿಕ್‌ ಜಾಮ್‌ ಆದಾಗಲೆಲ್ಲ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಸಿಸಿ ಕೆಮರಾ ಕೂಡ ಇದ್ದು ಹೆಲ್ಮೆಟ್‌ ಧರಿಸದೇ ಓಡಾಡುವವರನ್ನು ಪತ್ತೆ ಹಚ್ಚಿ ದಂಡ ವಿಧಿಸುವ ಕಾರ್ಯಗಳು ಇಲ್ಲಿ ಪೊಲೀಸ್‌ ಇಲಾಖೆಯಿಂದ ನಡೆಯುತ್ತಿದೆ. ಆದರೆ ಪೊಲೀಸರ ಕಣ್ಣೆದುರೇ ಕರ್ಕಶ ಹಾರ್ನ್ ಹಾಕಿಕೊಂಡು ಸಾರ್ವಜನಿಕರಿಗೆ ತೊಂದರೆ ಮಾಡುವ ಬಸ್‌ನವರ ವಿರುದ್ಧ ಕ್ರಮ ವಹಿಸಲು ಇವರಿಗೂ ಅಧಿಕಾರವಿಲ್ಲ.

ಕಾರ್ಕಳ ನಗರ ತೀರಾ ಕಿರಿದಾಗಿದೆ. ನಗರದೊಳಗೆ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆಗಳಿಲ್ಲ. ನಗರಕ್ಕೆ ಬರುವ ಸಾರ್ವಜನಿಕರು ರಸ್ತೆ ಬದಿ, ಅಂಗಡಿಗಳ ಮುಂದೆ ರಸ್ತೆಯಲೇ ವಾಹನ ನಿಲ್ಲಿಸಿ ತೆರಳುತ್ತಾರೆ. ರಸ್ತೆ ಕಿರಿದಾದ್ದರಿಂದ ಲಘು ವಾಹನಗಳು, ದ್ವಿಚಕ್ರ ಸವಾರರು, ಪಾದಚಾರಿಗಳು ಪೇಟೆಯಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿರುತ್ತಾರೆ. ಆಗ ಬಸ್‌ನವರು ಹಲವು ನಿಮಿಷಗಳ ಕಾಲ ಹಾರ್ನ್ ಮೊಳಗಿಸುತ್ತಾರೆ. ಇದು ಇಲ್ಲಿ ದೊಡ್ಡ ಸಮಸ್ಯೆಯಾಗಿದೆ.

ಕಾರ್ಕಳದಲ್ಲಿ ಟ್ರಾಫಿಕ್‌ ಪೊಲೀಸ್‌ ಠಾಣೆಯಿಲ್ಲ. ನಗರ ಠಾಣೆ ಪೊಲೀಸ್‌ ಸಿಬಂದಿ ಇಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆ ನಿವಾರಣೆ ನಡೆಸುತ್ತಾರೆ. ವಾಹನ ಸಂಚಾರ ಕಾನೂನು ಸುವ್ಯವಸ್ಥೆ ಬಗ್ಗೆಯೂ ಅವರೇ ಇಲ್ಲಿ ನೋಡಿಕೊಳ್ಳುತ್ತಿದ್ದಾರೆ. ಸಾರಿಗೆ ಇಲಾಖೆ ಕರ್ಕಶ ಹಾರ್ನ್ಗಳಿಗೆ ಕಡಿವಾಣ ಹಾಕುವಲ್ಲಿ ವಿಫ‌ಲವಾಗಿದೆ. ಜಾಗೃತಿಯೂ ಇಲ್ಲದಾಗಿದೆ. ಹಾರ್ನ್ ಕಿರಿಕಿರಿಯಿಂದ ಅಪಘಾತಗಳು ಸಂಭವಿಸುತ್ತವೆ. ನಗರದಲ್ಲಿ ವ್ಯಾಪಕವಾಗಿರುವ ವಾಹನ ಮಾಲಿನ್ಯ ತಡೆಗೆ ಶಿಸ್ತು ಕಾನೂನು ಕ್ರಮದ ಅಗತ್ಯವಿದ್ದು ಸಾರಿಗೆ ಇಲಾಖೆ ಕಾರ್ಯಾಚರಣೆ ನಡೆಸಿ ನಿಯಂತ್ರಿಸಬೇಕಿದೆ.

ನಗರದಲ್ಲಿ ವಾಹನ ಶಬ್ದ ಮಾಲಿನ್ಯವಿರುವ ಬಗ್ಗೆ ದೂರುಗಳಿವೆ. ಟ್ರಾಫಿಕ್‌ ಸಮಸ್ಯೆ ಉಂಟಾದಾಗ ನಮ್ಮ ಸಿಬಂದಿ ಕ್ರಮ ವಹಿಸುತ್ತಾರೆ. ವಾಹನಗಳ ಶಬ್ದ ಮಾಲಿನ್ಯಕ್ಕೆ ಸಂಬಂದಿಸಿ ಆರ್‌ಟಿಒ ಇಲಾಖೆ ಅಧಿಕಾರಿಗಳೇ ಕ್ರಮವಹಿಸಬೇಕು  ಎಂದು  ಕಾರ್ಕಳ ನಗರ ಠಾಣೆ ಸಬ್‌ಇನ್‌ಸ್ಪೆಕ್ಟರ್‌ ಪ್ರಸನ್ನಕುಮಾರ್‌ ತಿಳಿಸಿದ್ದಾರೆ

Previous Post

ರಮಾನಾಥ ರೈ ಚುನಾವಣಾ ರಾಜಕೀಯದಿಂದ ನಿವೃತ್ತಿ..!!

Next Post

ಕಟೀಲು ದುರ್ಗಾಪರಮೇಶ್ವರಿ ದೇಗುಲ ಮುಂಭಾಗದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಏಕಾಏಕಿ ಹೊತ್ತಿ ಉರಿದ ಬಸ್..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಕಟೀಲು ದುರ್ಗಾಪರಮೇಶ್ವರಿ ದೇಗುಲ ಮುಂಭಾಗದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಏಕಾಏಕಿ ಹೊತ್ತಿ ಉರಿದ ಬಸ್..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಕಳ: ಬಿಜೆಪಿ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಭಾರಿ ಪ್ರತಿಭಟನೆ – ಅಭಿವೃದ್ಧಿ ಕಾಮಗಾರಿಗಳ ಹಂಗಾಮಿ ಸ್ಥಗಿತಕ್ಕೆ ಆಕ್ಷೇಪ

ಕಾರ್ಕಳ: ಬಿಜೆಪಿ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಭಾರಿ ಪ್ರತಿಭಟನೆ – ಅಭಿವೃದ್ಧಿ ಕಾಮಗಾರಿಗಳ ಹಂಗಾಮಿ ಸ್ಥಗಿತಕ್ಕೆ ಆಕ್ಷೇಪ

15/03/2026
ಉಡುಪಿ: ಆಯಾತಪ್ಪಿ ಬಿದ್ದ ಗಾಂಧೀಜಿ ವೇಷಧಾರಿ ವೃದ್ಧರಿಗೆ ಸಮಾಜಸೇವಕರ ನೆರವು

ಉಡುಪಿ: ಆಯಾತಪ್ಪಿ ಬಿದ್ದ ಗಾಂಧೀಜಿ ವೇಷಧಾರಿ ವೃದ್ಧರಿಗೆ ಸಮಾಜಸೇವಕರ ನೆರವು

14/03/2026
ಮಾ.15 : ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ‘ಶಿವಾಜಿ ಸಂಗಮ’ ಕಾರ್ಯಕ್ರಮ

ಮಾ.15 : ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ‘ಶಿವಾಜಿ ಸಂಗಮ’ ಕಾರ್ಯಕ್ರಮ

14/03/2026
Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ 3 ಪಾನೀಯಗಳು ಸಹಕಾರಿ….!

Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ 3 ಪಾನೀಯಗಳು ಸಹಕಾರಿ….!

14/03/2026

Recent News

ಕಾರ್ಕಳ: ಬಿಜೆಪಿ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಭಾರಿ ಪ್ರತಿಭಟನೆ – ಅಭಿವೃದ್ಧಿ ಕಾಮಗಾರಿಗಳ ಹಂಗಾಮಿ ಸ್ಥಗಿತಕ್ಕೆ ಆಕ್ಷೇಪ

ಕಾರ್ಕಳ: ಬಿಜೆಪಿ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಭಾರಿ ಪ್ರತಿಭಟನೆ – ಅಭಿವೃದ್ಧಿ ಕಾಮಗಾರಿಗಳ ಹಂಗಾಮಿ ಸ್ಥಗಿತಕ್ಕೆ ಆಕ್ಷೇಪ

15/03/2026
ಉಡುಪಿ: ಆಯಾತಪ್ಪಿ ಬಿದ್ದ ಗಾಂಧೀಜಿ ವೇಷಧಾರಿ ವೃದ್ಧರಿಗೆ ಸಮಾಜಸೇವಕರ ನೆರವು

ಉಡುಪಿ: ಆಯಾತಪ್ಪಿ ಬಿದ್ದ ಗಾಂಧೀಜಿ ವೇಷಧಾರಿ ವೃದ್ಧರಿಗೆ ಸಮಾಜಸೇವಕರ ನೆರವು

14/03/2026
ಮಾ.15 : ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ‘ಶಿವಾಜಿ ಸಂಗಮ’ ಕಾರ್ಯಕ್ರಮ

ಮಾ.15 : ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ‘ಶಿವಾಜಿ ಸಂಗಮ’ ಕಾರ್ಯಕ್ರಮ

14/03/2026
Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ 3 ಪಾನೀಯಗಳು ಸಹಕಾರಿ….!

Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ 3 ಪಾನೀಯಗಳು ಸಹಕಾರಿ….!

14/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved