ನವೆಂಬರ್ 06: ರಸ್ತೆ ಬದಿಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಕಾರು ಡಿಕ್ಕಿ ಹೊಡೆದು ಮೃತ ಪಟ್ಟ ಘಟನೆ ಬೆಳ್ಳಣ್ ಸಮೀಪದ ಕಾಂಜರಕಟ್ಟೆ ಪೆರಳ್‌ಪಾದೆಯಲ್ಲಿ ನವೆಂಬರ್ 05 ಬುಧವಾರ ಸಂಜೆ ನಡೆದಿದೆ
ಮೃತ ಪಾದಚಾರಿ ಕಾಂಜರಕಟ್ಟೆ ಬಳಿಯ ನಿವಾಸಿ ಸುರೇಶ್ (45) ಎಂದು ತಿಳಿದು ಬಂದಿದೆ
ಕಾರು ಪಲ್ಟಿಯಾದ ಕಾರಣ ಕಾರಿನಲ್ಲಿದ್ದ ಐವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ
ಕಾರಿನಲ್ಲಿ ನಿಟ್ಟೆ ವಿದ್ಯಾಸಂಸ್ಥೆಯ ಐವರು ಎಂಬಿಎ ವಿದ್ಯಾರ್ಥಿಗಳು ಮಂಗಳೂರಿನತ್ತ ಪ್ರಯಾಣಿಸುತ್ತಿದ್ದರು. ನಡೆದುಕೊಂಡು ಹೋಗುತ್ತಿದ್ದ ಸುರೇಶ್ ಅವರಿಗೆ ಕಾರು ಢಿಕ್ಕಿ ಹೊಡೆದಿದ್ದು ಗಂಭೀರ ಗಾಯಗೊಂಡ ಅವರು ಆಸ್ಪತ್ರೆಗೆ ಕರೆದೊಯ್ಯುತ್ತಿರುವ ದಾರಿಯಲ್ಲಿ ಕೊನೆಯುಸಿರೆಳೆದರು.
ಸ್ವಯಂ ಶೆಟ್ಟಿ, ರಿಯಾನ್, ರಕ್ಷಣ್, ಅಮನ್, ಸಮರ್ಥ ಗಾಯಗೊಂಡವರು. ಅವರಲ್ಲಿ ಸ್ವಯಂ ಶೆಟ್ಟಿ ಹಾಗೂ ರಕ್ಷಣ್ ಗಂಭೀರ ಗಾಯಗೊಂಡಿದ್ದು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.








