ಮಂಗಳೂರು :ನವೆಂಬರ್ 06:ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವುದು ಅಪರಾಧ ಅಂತ ತಿಳಿದರೂ ಕೂಡ ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇರುತ್ತದೆ
ಇತ್ತೀಚಿಗೆ ಅಪ್ರಾಪ್ತ ಬಾಲಕ ದ್ವಿಚಕ್ರ ವಾಹನ ಸವಾರ ಮಾಡಿದ ಆರೋಪದ ಹಿನ್ನಲೆಯಲ್ಲಿ ಮಂಗಳೂರಿನ ನಾಲ್ಕನೆ ಜೆಎಂಎಫ್‌ಸಿ ನ್ಯಾಯಾಲಯ ವಾಹನದ ಮಾಲಕಿಗೆ ದಂಡ ವಿಧಿಸಿದೆ.
ದ್ವಿಚಕ್ರ ವಾಹನವನ್ನು ಅದರ ಮಾಲಕಿ ಅತಿಜಮ್ಮರ ಅಪ್ರಾಪ್ತ ವಯಸ್ಸಿನ ಪುತ್ರ ಅ.10ರಂದು ಬೈಕಂಪಾಡಿಯಲ್ಲಿ ಚಲಾಯಿಸುತ್ತಿದ್ದ ಎನ್ನಲಾಗಿದ್ದು ಈ ಬಗ್ಗೆ ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ನ್ಯಾಯಾಲಯವು ವಿಚಾರಣೆ ನಡೆಸಿ ಅಪ್ರಾಪ್ತ ಬಾಲಕನಿಗೆ ವಾಹನ ಚಲಾಯಿಸಲು ನೀಡಿದ್ದಕ್ಕೆ ವಾಹನದ ಮಾಲಕಿಗೆ 26,000 ರೂ.ದಂಡ ವಿಧಿಸಿ ಅದೇಶ ನೀಡಿದೆ








