ಕಾರ್ಕಳ :ನವೆಂಬರ್ 02:ಕಾರ್ಕಳ ಪಡು ತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತೀಕ ಏಕಾದಶಿ ,ಅಖಂಡ ಏಕಾಹ ಭಜನಾ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯುತ್ತಿದ್ದು ಬೆಳಿಗ್ಗೆ 6.30 ಘಂಟೆ ಗೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಗೋ ಪೂಜೆ , ನಂತರ ದೀಪ ಪ್ರಜ್ವಲನ ವಾಗಿ ನಂತರ ಏಕಾಹ ಅಖಂಡ ಭಜನಾ ಸುಮಾರು 50 ಭಜನಾ ಮಂಡಳಿ ಗಳು ಭಜನಾ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ,ಎಂದು ಈ ಕುರಿತು ಡಾಕ್ಟರ್ ಕಲ್ಯಾ ವಿನಾಯಕ್ ಶೆಣೈ ಶ್ರೀ ವೆಂಕಟರಮಣ ಭಜನಾ ಮಂಡಳಿಯ ಸದಸ್ಯರು ವಿವರವಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಬೋರ್ಕಟ್ಟೆ ಗಣಪತಿ ಹೆಗ್ಡೆ ಮತ್ತು ಕಮಲಾಕ್ಷ ಕಾಮತ್ ಅವರು ಉಪಸ್ಥಿತರಿದ್ದರು.
ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸರ್ವ ಸದಸ್ಯರು ಭಜಕರು ಭಜನಾ ಕಾರ್ಯಕ್ರಮ ದಲ್ಲಿ ಭಾಗವಹಿಸಿದರು.








