Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಪುಣ್ಯಸ್ಮರಣೆ..!!

Dhrishya News by Dhrishya News
31/10/2025
in ಸುದ್ದಿಗಳು
0
ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಪುಣ್ಯಸ್ಮರಣೆ..!!
0
SHARES
15
VIEWS
Share on FacebookShare on Twitter

ಕಾರ್ಕಳ :ಅಕ್ಟೋಬರ್ 31:ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮವು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಹಾಗೂ ಕಾರ್ಕಳ ನಗರ ಮಹಿಳಾ ಕಾಂಗ್ರೆಸ್ ಆಶ್ರಯದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.

ಕಾರ್ಕಳ ಹಿರಿಯಂಗಡಿ ನಿವಾಸಿ, ಹಿರಿಯ ಕಾಂಗ್ರೆಸಿಗ ಶಂಕರ ದೇವಾಡಿಗ ಅವರು ಇಂದಿರಾಗಾಂಧಿಯವರ ಭಾವಚಿತ್ರಕ್ಕೆ ದೀಪ ಬೆಳಗಿ ಪುಷ್ಪಾರ್ಚನೆಗೈಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಪ್ರಸಿದ್ದ ವಕೀಲರು ಹಿರಿಯ ಕಾಂಗ್ರೆಸಿಗರಾದ ಶೇಖರ ಮಡಿವಾಳ ಅವರು ಮಾತನಾಡಿ ಶತ್ರುರಾಷ್ಟ್ರ ಪಾಕಿಸ್ತಾನದ 90 ಸಾವಿರ ಸೈನಿಕರ ಶರಣಾಗತಿ ಮಾಡಿಸಿದ ಧೀರ ಪ್ರಧಾನಿ ಇಂದಿರಾ ಗಾಂಧಿಯವರ ದಿಟ್ಟತನವನ್ನು ಸ್ಮರಿಸುತ್ತಾ ಇಂದಿನ ದಿನಗಳಲ್ಲಿ ಆಡಳಿತಗಾರರು ಯಾವುದೋ ದೇಶದ ಅಧ್ಯಕ್ಷನ ಸೂಚನೆಗೆ ಯುದ್ದ ನಿಲ್ಲಿಸುವುದು ದೇಶದ ದುರಂತ ಎಂದರು. ತುರ್ತು ಪರಿಸ್ಥಿತಿಯನ್ನು ವಿರೋದಿಸುವವರು ಬಡವರ ವಿರೋದಿಗಳು, ತುರ್ತುಪರಿಸ್ಥಿತಿಯ ಬಗ್ಗೆ ದೇಶದ ಜನರಿಗೆ ನಿಜವಾಗಿಯೂ ಆಕ್ರೋಶವಿದ್ದರೆ ತುರ್ತುಪರಿಸ್ಥಿತಿ 18 ತಿಂಗಳ ನಂತರ ಮತ್ತೆ ಇಂದಿರಾ ಗಾಂಧಿಯವರನ್ನು ಈ ದೇಶದ ಜನ ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡುತ್ತಿದ್ದರೇ ಎಂದು ಪ್ರಶ್ನಿಸಿದರು. 

ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಬಿಪಿನ್ ಚಂದ್ರ ಪಾಲ್ ನಕ್ರೆ ಅವರು ಮಾತನಾಡಿ ದೇಶದ ಭೂ ಸಂಪತ್ತಿನ ಬಹುಪಾಲು ಭಾಗ ದೇಶದ 2‌ ಶೇಕಡಾ ಜನರಲ್ಲಿದ್ದು ಉಳಿದ‌ 98 ಶೇಕಡಾ ಜನರು ಭೂರಹಿತರಾಗಿದ್ದರು, ಭೂ ಸಂಪತ್ತಿನ ಸಮಾನ ಹಂಚಿಕೆಗಾಗಿ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸಿ ಜನ ಸಾಮಾನ್ಯರು ಸ್ವಾಭಿಮಾನದ ಜೀವನ ಸಾಗಿಸುವಂತೆ ಮಾಡಿದರು ಎಂದರು. ಇಂದಿರಾಗಾಂಧಿ ಅವರು ತನ್ನ 66 ವರ್ಷದಲ್ಲಿ ವಿರೋದಿಗಳ ಗುಂಡಿಗೆ ಬಲಿಯಾಗಿದ್ದು ದೇಶದ ದುರ್ದೈವ, ಅವರು ಇನ್ನೂ ಸ್ವಲ್ಪ ವರ್ಷಗಳ ಕಾಲ ಬದುಕಿದ್ದರೆ ದೇಶದ ಆರ್ಥಿಕ ಪರಿಸ್ಥಿತಿಯ ಸುಧಾರಣೆಯಾಗುತ್ತಿತ್ತು ಎಂದರು. 

ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದ ರಾವ್ ಮಾತನಾಡಿ ಇಂದಿರಾ ಗಾಂಧಿಯವರು ಕಾರ್ಕಳ ವಿಧಾನಸಭಾ ಕ್ಷೇತ್ರವನ್ನೂ ಒಳಗೊಂಡ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಸ್ಪರ್ದಿಸಿ ನಮ್ಮ ಸಂಸದರಾಗಿದ್ದರು ಎನ್ನುವುದೇ ಕಾಂಗ್ರೆಸಿಗರಾದ ನಮಗೆ ಹೆಮ್ಮೆಯ ವಿಚಾರ, ಅವರ ಸ್ಮರಣೆಯಲ್ಲಿ ಕಾರ್ಕಳದಲ್ಲಿ ಭವ್ಯವಾದ ಕಾಂಗ್ರೆಸ್ ಕಚೇರಿ ಇಂಧಿರಾ ಭವನ ನಿರ್ಮಾಣವಾಗಲಿದೆ ಎಂದರು. 

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಾಯಕರು ಹಾಗೂ ಕಾರ್ಯಕರ್ತರು ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಗೌರವನಮನ ಸಲ್ಲಿಸಿದರು. 

ನಗರ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಶ್ರೀಮತಿ ರೀನಾ ಡಿಸೋಜ ಅವರು ಇಂದಿರಾ ಗಾಂಧಿಯವರ ಆಡಳಿತ ಶ್ರೇಷ್ಟತೆ, ಜೀವನ ಮೌಲ್ಯಗಳ ಸಂಕ್ಷಿಪ್ತ ಮಾಹಿತಿಯನ್ನು ವಾಚಿಸಿ ಅತಿಥಿಗಳನ್ನು ಸ್ವಾಗತಿಸಿದರು. 

ಈ ಕಾರ್ಯಕ್ರಮದಲ್ಲಿ ಬ್ಲಾಕ್ ಉಪಾದ್ಯಕ್ಷ ಜಾರ್ಜ್ ಕ್ಯಾಸ್ತಲಿನೊ, ಜಿಲ್ಲಾ ಕಾಂಗ್ರೆಸಿನ ಸಿರಿಯಣ್ಣ ಶೆಟ್ಟಿ, ಮಾಲಿನಿ ರೈ, ಮಹಿಳಾ ಒಕ್ಕೂಟದ ಅದ್ಯಕ್ಷೆ ಶ್ರೀಮತಿ ಯಶೋದಾ ಶೆಟ್ಟಿ, ಸೇವಾದಳದ ಅಬ್ದುಲ್ ಸಾಣೂರು, ಭೂನ್ಯಾಯ ಮಂಡಳಿಯ ಸುನೀಲ್ ಭಂಡಾರಿ, ಅಕ್ರಮ ಸಕ್ರಮ ಸಮಿತಿ ಸದಸ್ಯೆ ಸುನಿತಾ ಶೆಟ್ಟಿ, ಪುರಸಭಾ ಮಾಜಿ ಅಧ್ಯಕ್ಷರಾದ ಪ್ರತಿಮಾ ರಾಣೆ, ರೆಹಮತ್, ಸದಸ್ಯರಾದ ಪ್ರಭಾ, ವಿನ್ನಿ ಬೋಲ್ಡ್, ಶೋಭಾ ಪ್ರಸಾದ್, ಯುವ ಕಾಂಗ್ರೆಸಿನ ಸೂರಜ್ ಶೆಟ್ಟಿ, ಮಂಜುನಾಥ ಜೋಗಿ, ಮಲಿಕ್ ಅತ್ತೂರು, ಯೋಗೀಶ್ ಇನ್ನಾ ಹಾಗೂ ಗ್ಯಾರಂಟಿ ಸಮಿತಿಯ ‌ಸದಸ್ಯರು, ಚುನಾಯಿತ ಜನಪ್ರತಿನಿದಿಗಳು, ನಾಮನಿರ್ದೇಶಿತ ಸದಸ್ಯರು, ವಿವಿಧ ಘಟಕಗಳ ಅದ್ಯಕ್ಷರು, ಗ್ರಾಮೀಣ ಕಾಂಗ್ರೆಸ್ ಅದ್ಯಕ್ಷರುಗಳು ಮೊದಲಾದವರು ಉಪಸ್ಥಿತರಿದ್ದರು. 

ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿ ಹಿರಿಯ ಕಾಂಗ್ರೆಸಿಗ ಪ್ರಭಾಕರ ಬಂಗೇರ ಧನ್ಯವಾದ ಸಮರ್ಪಣೆಗೈದರು.

Previous Post

ಮಂಗಳೂರು ವಿವಿ: ವಾಣಿಜ್ಯ ವಿಭಾಗದಿಂದ ಸಂಶೋಧನ ಕೌಶಲ್ಯಗಳ ಕುರಿತ ಕಾರ್ಯಗಾರ..!!

Next Post

ಮಣಿಪಾಲ : ಮಾಹೆಯ ಆರೋಗ್ಯ ವೃತ್ತಿಪರರ ಮಹಾವಿದ್ಯಾಲಯದ ಭಾರತೀಯ ಉಸಿರಾಟದ ಆರೈಕೆ ಸಂಘದ  ವಾರ್ಷಿಕ ಸಮ್ಮೇಳನ RESCARE 2025..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಮಣಿಪಾಲ : ಮಾಹೆಯ ಆರೋಗ್ಯ ವೃತ್ತಿಪರರ ಮಹಾವಿದ್ಯಾಲಯದ ಭಾರತೀಯ ಉಸಿರಾಟದ ಆರೈಕೆ ಸಂಘದ  ವಾರ್ಷಿಕ ಸಮ್ಮೇಳನ RESCARE 2025..!!

ಮಣಿಪಾಲ : ಮಾಹೆಯ ಆರೋಗ್ಯ ವೃತ್ತಿಪರರ ಮಹಾವಿದ್ಯಾಲಯದ ಭಾರತೀಯ ಉಸಿರಾಟದ ಆರೈಕೆ ಸಂಘದ  ವಾರ್ಷಿಕ ಸಮ್ಮೇಳನ RESCARE 2025..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

13/08/2026
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

13/08/2026
ಬ್ರಹ್ಮಾವರದ ವೃದ್ಧಾಶ್ರಮದಿಂದ ಯುವಕ ನಾಪತ್ತೆ..!

ಬ್ರಹ್ಮಾವರದ ವೃದ್ಧಾಶ್ರಮದಿಂದ ಯುವಕ ನಾಪತ್ತೆ..!

13/08/2026
ಇನ್ನಾ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಕಳ್ಳತನ: ₹1.20 ಲಕ್ಷ ನಗದು ಕಳವು..!

ಇನ್ನಾ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಕಳ್ಳತನ: ₹1.20 ಲಕ್ಷ ನಗದು ಕಳವು..!

13/08/2026

Recent News