ಮಂಗಳೂರು ಅಕ್ಟೋಬರ್ 28: ಮೀನುಸಾಗಾಟದ ಪಿಕಪ್ ವಾಹನವೊಂದು ಪಲ್ಟಿಯಾಗಿ ಮೂವರು ಗಾಯಗೊಂಡ ಘಟನೆ ಜೆಪ್ಪಿನಮೊಗರು ನೇತ್ರಾವತಿ ಸೇತುವೆ ಬಳಿ ಸಂಭವಿಸಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಚಾಲಕನ ನಿರ್ಲಕ್ಷ್ಯದಿಂದಾಗಿ ವಾಹನವು ಸಮತೋಲನ ಕಳೆದುಕೊಂಡು ರಸ್ತೆಯಲ್ಲಿ ಪಲ್ಟಿಯಾಗಿದೆ.
ಗಾಯಗೊಂಡವರನ್ನು ಚಾಲಕ ರತೀಶ್ (38) ಮತ್ತು ಇಬ್ಬರು ಪ್ರಯಾಣಿಕರು – ಶೈಲಜಾ (57) ಮತ್ತು ಶಾರದಾ (60) ಎಂದು ಗುರುತಿಸಲಾಗಿದೆ. ಮೂವರನ್ನೂ ತಕ್ಷಣ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಬೆಳಿಗ್ಗೆ 6 ಗಂಟೆ ಸುಮಾರಿಗೆ ಮೀನು ತುಂಬಿದ ಪಿಕಪ್ ಟ್ರಕ್ ಮಂಗಳೂರಿನಿಂದ ಕೇರಳದ ತಲಪಾಡಿ ಕಡೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.








