ಉಡುಪಿ:ಅಕ್ಟೋಬರ್ 28:ಭಾರತ ವಿದ್ಯಾರ್ಥಿ ಫೆಡರೇಶನ್ (SFI) ರಾಜ್ಯ ಮಟ್ಟದ ಶೈಕ್ಷಣಿಕ ಜಾಥ ರಾಜ್ಯಾದ್ಯಂತ ಸುತ್ತಾಡಿ ಇಂದು ಮಧ್ಯಾಹ್ನ ಉಡುಪಿಗೆ ಆಗಮಿಸಿದೆ.
ಉಡುಪಿ ಬೋರ್ಡ್ ಹೈಸ್ಕೂಲ್ ವಠಾರದಲ್ಲಿ ಜಾಥವನ್ನು ಸ್ವಾಗತಿಸಿ ನಂತರ ಸಭೆಯನ್ನು ಉದ್ದೇಶಿಸಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕಾರದ ಸುಂದರ್ ಮಾಸ್ಟರ್, ಹಾಗೂ ಪ್ರಗತಿಪರು,ಚಿಂತಕರು ಆದ ಫ್ರೋ ಫಣಿರಾಜ್ ಮಾತನಾಡಿದರು. ಜಾಥ ತಂಡದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ ರಾಜ್ಯ ಅಧ್ಯಕ್ಷ ರಾದ ಶಿವಪ್ಪ, ರಾಜ್ಯ ಕಾರ್ಯದರ್ಶಿ ವಿಜಯ, ರಾಜ್ಯ ಸಮಿತಿ ಸದಸ್ಯರಾದ ಅರ್ಪಿತ,ಮಣಿಭಾರತಿ,ವನಿತ್ ತಂಡದಲ್ಲಿ ಇದ್ದರು.
SFI ನ ಉಡುಪಿ ತಾಲೂಕು ಕಾರ್ಯದರ್ಶಿ ಕಾರ್ತಿಕ್ ,DYFI ಮಾಜಿ ಮುಖಂಡರಾದ ಸುರೇಶ್ ಕಲ್ಲಾಗಾರ್,ಕಾರ್ಮಿಕ ಮುಖಂಡರಾದ ಉಮೇಶ್ ಕುಂದರ್, ಶಧಿಧರ ಗೊಲ್ಲ, ನಳಿನಿ.ಎಸ್,ರಂಗನಾಥ,ಕ್ರಷ್ಣ ಜನವಾದಿ ಮಹಿಳಾ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷ ರಾದ ಸರೋಜ.ಎಸ್ ಉಪಸ್ಥಿತರಿದ್ದರು
ಕಾರ್ಯಕ್ರಮ ನಿರೂಪಣೆ ಹಾಗೂ ಸ್ವಾಗತವನ್ನು SFI ಉಡುಪಿ ಜಿಲ್ಲಾ ಮಾಜಿ ಕಾರ್ಯದರ್ಶಿ ಕವಿರಾಜ್. ಎಸ್.ಕಾಂಚನ್ ಮಾಡಿದರು.
ಕೊನೆಯಲ್ಲಿ SFI ರಾಜ್ಯ ಸಮಿತಿ ಸದಸ್ಯರು ಉಡುಪಿ ಜಿಲ್ಲಾ ಮುಖಂಡರಾದ ಕ್ರತಿಕಾ ಧನ್ನವಾದ ನೀಡಿದರು








