Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ – ಏಕದಾರು ಬಿಂಬದಲ್ಲಿ ಕಾಮಧೇನು ಸ್ಥಾಪನೆ..!!

Dhrishya News by Dhrishya News
25/10/2025
in ಸುದ್ದಿಗಳು
0
ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ – ಏಕದಾರು ಬಿಂಬದಲ್ಲಿ ಕಾಮಧೇನು ಸ್ಥಾಪನೆ..!!
0
SHARES
23
VIEWS
Share on FacebookShare on Twitter

ಉಡುಪಿ, ಅ. 24: ದೊಡ್ಡಣಗುಡ್ಡೆೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಗಾಯತ್ರಿ ಧ್ಯಾನಪೀಠದ ಶ್ರೀ ಕಪಿಲ ಮಹರ್ಷಿ ಸಾನ್ನಿಧ್ಯದಲ್ಲಿ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಪುರಾಣ ಕಾಲದಲ್ಲಿ ಋಷಿ ಮುನಿಗಳು ತಮ್ಮ ತಪ:ಶಕ್ತಿಯಿಂದ ಒಲಿಸಿಕೊಂಡ ಕಾಮಧೇನುವಿನ ಪ್ರತಿರೂಪವನ್ನು ಸ್ಥಾಪನೆ ಗಳಿಸಲಾಯಿತು…

 ಬೇಡಿದ್ದನ್ನು ಕರುಣಿಸುವಂತಹ ಮಹಾನ್ ಶಕ್ತಿಯುಳ್ಳ, ಗತಕಾಲದ ಇತಿಹಾಸವನ್ನು ಸಾರುವಂತೆ ಒಂದೇ ಹಲಸಿನ ಮರದಲ್ಲಿ ಕೆತ್ತಲ್ಪಟ್ಟ ಐದು ಮುಕ್ಕಾಲು ಅಡಿ ಎತ್ತರದ ಕಾಮಧೇನುವಿನ ಸ್ಥಾಪನೆ ಬುಧವಾರ ಗೋ ಪೂಜೆಯ ಪರ್ವಕಾಲದಲ್ಲಿ ನೆರವೇರಿತು.

ಸ್ಥಾಪನಾ ಪೂರ್ವಭಾವಿ ಧಾರ್ಮಿಕ ಕಾರ್ಯಕ್ರಮವಾಗಿ ಮಂಗಳವಾರ ರಾತ್ರಿ ಭೂ ಶುದ್ದಿ ಪ್ರಕ್ರಿಯೆಯಾಗಿ ವಾಸ್ತು ಹೋಮ, ಭೂ ವರಾಹ ಹೋಮ, ರಜತ ಕಲಶ ಪ್ರತಿಷ್ಠಾಪನೆ, ಅಧಿವಾಸ ಪೂಜೆ ನೆರವೇರಿಸಿ ಮಾರನೆ ದಿನ ಬೆಳಗ್ಗೆ ಆದ್ಯ ಗಣಪತಿಯಾಗ , ಸ್ವಸ್ತಿ ಪುಣ್ಯಹ ವಾಚನ, ಗೋ ಸೂಕ್ತ ಹೋಮ, ನವಕಲಶ ಪ್ರಧಾನ ಹೋಮ, ಕಲಶಾ ಅಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ ಪ್ರಸನ್ನ ಪೂಜೆ ಪ್ರಸಾದ ವಿತರಣೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರಗಿತು…

ಗೋವನ್ನು ನಿತ್ಯ ನೋಡುವುದರಿಂದ, ಅವುಗಳ ಸೇವೆ ಮಾಡುವುದರಿಂದ ದೇವಾನುದೇವತೆಗಳು ನಮ್ಮನ್ನು ಆಶೀರ್ವದಿಸುವುದರ ಮೂಲಕ ನಮ್ಮ ದುಃಖ-ದುಮ್ಮಾನಗಳು ದೂರವಾಗುತ್ತದೆ. ಸನಾತನ ಧಾರ್ಮಿಕ ನಂಬಿಕೆಗಳ ಪ್ರಕಾರ ಮುಕ್ಕೋೋಟಿ ದೇವಾನುದೇವತೆಗಳು ಗೋವಿನ ಮೈಯಲ್ಲಿ ನೆಲೆಸಿದ್ದಾರೆ. ಈ ನೆಲೆಯಲ್ಲಿ ಗೋಪೂಜೆಯ ಪರ್ವಕಾಲದಲ್ಲಿ ಮುಖದಲ್ಲಿ ಸ್ತ್ರೀರೂಪವನ್ನು ಹೋಲುವ, ಗೋಮಾತೆಯ ದೇಹವಿರುವ ಮನೋವಾಂಛೆಯನ್ನು ಈಡೇರಿಸಲಿರುವ ಕರು ಸಹಿತವಾದ ಆಕಳಾದ ಕಾಮಧೇನುವನ್ನು ವೇಮೂ ವಿಖ್ಯಾತ್ ಭಟ್, ವೇಮೂ ರಾಘವೇಂದ್ರ ಭಟ್, ಶ್ರೀನಿವಾಸ ಹೆಕ್ಕಡ್ಕ, ವಿಜಯ ಭಟ್ ನೇತೃತ್ವದಲ್ಲಿ ಸ್ಥಾಪನೆ ಮಾಡಲಾಯಿತು. 

ಕ್ಷೇತ್ರದ ಅಲಂಕಾರ ತಜ್ಞ ಆನಂದ ಬಾಯರಿ ಕಾಮಧೇನುವನ್ನು ಅಲಂಕರಿಸಿದ್ದರು. ಪ್ರಧಾನ ಅರ್ಚಕ ಅನೀಶ್ ಆಚಾರ್ಯ, ಸ್ವಸ್ತಿಕ್ ಆಚಾರ್ಯ, ವೇಮೂ ಡಾ ಶ್ರೀವತ್ಸ ಅಡಿಗ ಪೂಜಾ ಪ್ರಕ್ರಿಯೆಯಲ್ಲಿ ಸಹಕರಿಸಿದ್ದರು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.

Previous Post

ಉಡುಪಿ : ರೆಡ್‌ಕ್ರಾಸ್ ಭವನದಲ್ಲಿ ಅ.26, 27ರಂದು ಉಚಿತ ಶ್ರವಣ ತಪಾಸಣಾ ಶಿಬಿರ..!!

Next Post

ಚಾರ್ಮಾಡಿ ಘಾಟಿ ರಸ್ತೆ ಮಧ್ಯೆ ಅಡ್ಡಲಾಗಿ ನಿಂತ ಟ್ಯಾಂಕರ್‌ :ಸಂಚಾರ ಅಸ್ತವ್ಯಸ್ತ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಚಾರ್ಮಾಡಿ ಘಾಟಿ ರಸ್ತೆ ಮಧ್ಯೆ ಅಡ್ಡಲಾಗಿ ನಿಂತ ಟ್ಯಾಂಕರ್‌ :ಸಂಚಾರ ಅಸ್ತವ್ಯಸ್ತ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಲ್ಪೆ ಸಮುದ್ರದಲ್ಲಿ ಕಾಲು ಜಾರಿ ಬಿದ್ದು ಮೀನುಗಾರ ನಾಪತ್ತೆ..!

ಕಾಲೇಜಿಗೆ ಹೋದ 20 ವರ್ಷದ ಯುವಕ ನಾಪತ್ತೆ: ಪ್ರಕರಣ ದಾಖಲು..!

01/10/2026
ಉಡುಪಿ ಉಚ್ಚಿಲ ದಸರಾ ಪ್ರಯುಕ್ತ ರಾಜ್ಯಮಟ್ಟದ ನೃತ್ಯೋತ್ಸವ–2026

ಉಡುಪಿ ಉಚ್ಚಿಲ ದಸರಾ ಪ್ರಯುಕ್ತ ರಾಜ್ಯಮಟ್ಟದ ನೃತ್ಯೋತ್ಸವ–2026

01/10/2026
ಟೈಮ್ಸ್‌ ಹೈಯರ್‌ ಎಜುಕೇಶನ್‌ ಜಾಗತಿಕ ವಿ. ವಿ. ಗಳ ಶ್ರೇಯಾಂಕ-2027ರಲ್ಲಿ ಮಾಹೆಯ ಸ್ಥಾನ ಏರಿಕೆ

ಟೈಮ್ಸ್‌ ಹೈಯರ್‌ ಎಜುಕೇಶನ್‌ ಜಾಗತಿಕ ವಿ. ವಿ. ಗಳ ಶ್ರೇಯಾಂಕ-2027ರಲ್ಲಿ ಮಾಹೆಯ ಸ್ಥಾನ ಏರಿಕೆ

01/10/2026
ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ₹2.2 ಲಕ್ಷ ನೆರವು 

ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ₹2.2 ಲಕ್ಷ ನೆರವು 

01/10/2026

Recent News

imunify-bot-check