ಬೆಂಗಳೂರು : ಅಕ್ಟೋಬರ್ 18: ಜಾತಿ ಗಣತಿ’ ಸಮೀಕ್ಷೆಯಲ್ಲಿ ನಿಮ್ಮ ಮನೆ ಬಿಟ್ಟು ಹೋಗಿದ್ದರೆ ಈ ಸಂಖ್ಯೆಗೆ ಕರೆ ಮಾಡಿರಾಜ್ಯದ ಜನತೆಯ ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ಆರ್ಥಿಕ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಅತ್ಯಂತ ಮಹತ್ವದ್ದಾಗಿದೆ. ಸಂಗ್ರಹವಾಗುವ ದತ್ತಾಂಶದಿಂದ ನೂತನ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ರೂಪಿಸಲು ರಾಜ್ಯ ಸರ್ಕಾರಕ್ಕೆ ಅನುಕೂಲವಾಗಲಿದೆ.
ಹೀಗಾಗಿ ಮನೆಗೆ ಭೇಟಿ ನೀಡುವ ಸಮೀಕ್ಷಾದಾರರಿಗೆ ನಿಮ್ಮ ಕುಟುಂಬದ ಕುರಿತಾದ ನಿಖರ ಮಾಹಿತಿ ನೀಡಿ. ಮುಂದಿನ ಪೀಳಿಗೆಗೆ ಶಿಕ್ಷಣ ಮತ್ತು ಉದ್ಯೋಗದ ಭದ್ರ ಭವಿಷ್ಯಕ್ಕಾಗಿ ಸಹಕರಿಸಿ.
ಸಮೀಕ್ಷೆಯಲ್ಲಿ ನಿಮ್ಮ ಮನೆ ಬಿಟ್ಟು ಹೋಗಿದ್ದರೆ ಕೂಡಲೇ 8050770004ಕ್ಕೆ ಕರೆ ಮಾಡಿ. ಸಮೀಕ್ಷೆ ಯಶಸ್ವಿಯಾಗಿಸುವಂತೆ ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.








