ಕಾರ್ಕಳ: ಅಕ್ಟೋಬರ್ 14:ಬೀಡಿ ಕಾರ್ಮಿಕರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲು ಒತ್ತಾಯಿಸಿ ದ.ಕ ಮತ್ತು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಸಂಘಗಳ ಜಂಟಿ ಕ್ರೀಯಸಮಿತಿ ನೇತ್ರತ್ವದಲ್ಲಿ 7/10/25 ರಿಂದ 17/10/25 ವರೆಗೆ ಎರಡು ಜಿಲ್ಲೆಯ ಎಲ್ಲಾ ಕಂಪನಿಗಳ ಮುಂದೆ ಹಕ್ಕೊತ್ತಾಯ ಚಳುವಳಿಗೆ ಕರೆ ನೀಡಿದ್ದು ಕಾರ್ಕಳದಲ್ಲಿ ಇಂದು ಭಾರತ್ ಬೀಡಿ ಕಂಪನಿ ಮುಂದೆ ಬ್ರಹತ್ ಪ್ರತಿಭಟನೆ ನಡೆಸಿ 2018 ರಿಂದ 2024 ವರೆಗೆ ಬಾಕಿಇರುವ ಹೆಚ್ಚಳ ವಾದ ಕನಿಷ್ಟಕೂಲಿ 40 ರೂ ಹಾಗೂ ತುಟ್ಟಿಭತ್ಯೆ ಹಣ ಕೂಡಲೇ ನೀಡಲು ಒತ್ತಾಯಿಸಿ ಹಕ್ಕೊತ್ತಾಯ ಚಳುವಳಿ ನಡೆಸಿದರು.ಕರ್ನಾಟಕ ರಾಜ್ಯ ಬೀಡಿ ಫೆಡರೇಶನ್ ಉಪಾಧ್ಯಕ್ಷ ವಸಂತ ಆಚಾರಿ ಮಾತಾಡಿ ಕಾರ್ಮಿಕರಿಗೆ ಕಾನೂನು ಬದ್ದ ವಾಗಿ ಸಿಗಬೇಕಾದ ತುಟ್ಟಿಭತ್ಯೆ, ಬಾಕಿ ಇಟ್ಟುಕೊಂಡಿರುವ. ಕಾರ್ಮಿಕರ ಸಾವಿರಾರು ಕೋಟಿ ಹಣ ಕೂಡಲೇ ನೀಡದಿದ್ದಲ್ಲಿ ಕಂಪನಿ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ಕಾರ್ಮಿಕರು ತಯಾರಾಗ ಬೇಕೆಂದು ಪ್ರತಿಭಟನೆಯಲ್ಲಿ ಕರೆ ನೀಡಿದರು. ಇವತ್ತು ಭಾರತ್ ಬೀಡಿ ಮಾಲೀಕರು ಬೀಡಿ ಉದ್ಯಮ ಹಣದಿಂದ ಬೇರೆ ಬೇರೆ ಕಂಪನಿ ಗಳನ್ನು ಆರಂಬಿಸಿದ್ದು ಬೀಡಿ ಕಾರ್ಮಿಕರು ಬೇವರು ಸುರಿಸಿ ದುಡಿದ ಹಣದಿಂದ ಇತ್ತೀಚಿಗೆ ಭಾರತ್ ಬೀಡಿ ಮಾಲಿಕರು 30 ನಂಬ್ರ ಹೆಸರಿನಲ್ಲಿ ಟೀ ಪುಡಿ ಉದ್ಯಮ ಆರಂಭಿಸಿದ್ದಾರೆ

ಪ್ರತಿಭಟನಾ ಸಭೆಯಲ್ಲಿ ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಅಧ್ಯಕ್ಷ ರಾದ ವಹಾಬಲ ಹೊಡೆಯರ ಹೋಬಳಿ,ಕಾರ್ಯದರ್ಶಿ ಉಮೇಶ್ ಕುಂದರ್,ಮುಖಂಡರಾದ ಬಲ್ಕೀಸ್,ನಳಿನಿ.ಎಸ್ ,ಸಿಐಟಿಯು ಉಡುಪಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ,ಮುಖಂಡರಾದ ಮೋಹನ್, ನಾಗೇಶ್ ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಸುನೀತಾ ಶೆಟ್ಟಿ, ಕೋಶಾಧಿಕಾರಿ ಸುಮತಿ,ಎಸ್,ಮುಖಂಡರಾದ ವಿಲಾಸಿನಿ,ಶಕುಂತಲಾ, ಜಯಂತಿ, ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಕವಿರಾಜ್. ರಸ್.ಕಾಂಚನ್ ಸ್ವಾಗತಿಸಿ ,ಕಾರ್ಯಕ್ರಮ ನಿರೂಪಣೆ ಮಾಡಿ ಕೊನೆಯಲ್ಲಿ ಧನ್ಯವಾದ ನೀಡಿದರು.








