ಕಾರ್ಕಳ :ಸೆಪ್ಟೆಂಬರ್ 29: ಶಿರ್ಲಾಲು ಬಳಿ ಮಹಿಳೆಯೋರ್ವರ ಮನೆಯ ಹಟ್ಟಿಗೆ ನುಗ್ಗಿದ ದನ ಕಳ್ಳರು ಮಾರಕಾಯುಧ ತೋರಿಸಿ 3 ದನಗಳನ್ನು ಕಳ್ಳತನ ಮಾಡಿದ ಘಟನೆ ವರದಿ ಆಗಿದೆ.
ಶಿರ್ಲಾಲು ಗ್ರಾಮದ ಜಯಶ್ರೀ ಎಂಬ ಮಹಿಳೆ ನಿನ್ನೆ ರಾತ್ರಿ ಮನೆಯಲ್ಲಿ ಒಂಟಿ ಆಗಿದ್ದಾಗ ವಾಹನವೊಂದರಲ್ಲಿ ಬಂದ ದುಷ್ಟರು ಹಟ್ಟಿಯಿಂದ 3 ದನ ಕಳ್ಳತನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಶಬ್ದ ಆಗಿ ಮಹಿಳೆ ಎಚ್ಚೆತ್ತಾಗ ಮಾರಕ ಆಯುಧ ತೋರಿಸಿ ಆಕೆಯನ್ನು ಬೆದರಿಸಿ ಬಳಿಕ ಆ ದನಗಳನ್ನು ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಅಲ್ಲಿನ ಜನರು ಆತಂಕ ದಲ್ಲಿದ್ದಾರೆ. ಕಳೆದ 3 ವರ್ಷಗಳ ಹಿಂದೆ ಕೂಡಾ ಈ ಮನೆಯಿಂದ ದನ ಕಳ್ಳತನ ಮಾಡಲಾಗಿತ್ತು
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








