ಉಡುಪಿ, ಸೆಪ್ಟೆಂಬರ್ 23, 2025: ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯು 18 ವರ್ಷ ವಯಸ್ಸಿನ ಒಳಗಿನ ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಸೆಪ್ಟೆಂಬರ್ 25 ರಿಂದ 27, 2025 ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ನಡೆಸುತ್ತಿದೆ.
ಈ ಸೇವೆಗಳು ವಿಶೇಷವಾಗಿ ಆಗಾಗ್ಗೆ ತಲೆನೋವು ಇರುವ ಮಕ್ಕಳು , ಅತಿಯಾದ ಮೊಬೈಲ್ ಫೋನ್, ಕಂಪ್ಯೂಟರ್ ಬಳಸುವ ಮಕ್ಕಳು, ಟಿವಿಯ ತೀರಾ ಹತ್ತಿರ ಕುಳಿತುಕೊಳ್ಳುವವರು , ಪುಸ್ತಕಗಳನ್ನು ಬಹಳ ಹತ್ತಿರದಲ್ಲಿ ಹಿಡಿದುಕೊಂಡು ಓದುವ ಮಕ್ಕಳು, ಕಣ್ಣು ಮಿಟುಕಿಸುವ ಮಕ್ಕಳು, ತಲೆ ಎತ್ತುವ ಅಥವಾ ಆಗಾಗ್ಗೆ ಕಣ್ಣು ಉಜ್ಜುವ ಮಕ್ಕಳು, ಕೌಟುಂಬಿಕವಾಗಿ ಕನ್ನಡಕ ಮತ್ತು ಕಣ್ಣಿನಲ್ಲಿ ದೋಷ ಇತ್ಯಾದಿಗಳ ಇತಿಹಾಸ ಹೊಂದಿರುವ ಮಕ್ಕಳಿಗೆ ಪ್ರಯೋಜನಕಾರಿಯಾಗಿದೆ.
ಈ ಉಪಕ್ರಮದ ಕುರಿತು ಮಾತನಾಡಿದ ಉಡುಪಿಯ ಡಾ. ಟಿಎಂಎ. ಪೈ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ. ರಾಜಾರಾಮ್ ಪೈ, ಪ್ರಸ್ತುತ ದಿನಗಳಲ್ಲಿ ಮಕ್ಕಳು ಇಲೆಕ್ಟ್ರಾನಿಕ್ ಉಪಕರಣಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುವುದರಿಂದ ಕಣ್ಣಿನ ಸಂಬಂಧಿತ ಸಮಸ್ಯೆಗಳನ್ನು ಸಾಧ್ಯವಾದಷ್ಟು ಬೇಗ ಪತ್ತೆಹಚ್ಚುವುದು ಮತ್ತು ಚಿಕಿತ್ಸೆ ನೀಡುವುದು ಬಹಳ ಮುಖ್ಯ ಎಂದು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ, 7338343777 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ








