ಉಡುಪಿ : ಸೆಪ್ಟೆಂಬರ್ 23:ಮಳೆಗಾಲದಲ್ಲಿ ಕಡಲು ಪ್ರಕ್ಷುಬ್ದ ಗೊಳ್ಳುವ ಕಾರಣದಿಂದಾಗಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಮಲ್ಪೆ ಬೀಚ್ ನಲ್ಲಿ ‘ಅಪಾಯ’, ‘ಪ್ರವೇಶವಿಲ್ಲ’ ಎಂಬ ಎಚ್ಚರಿಕೆಯ ಚಿಹ್ನೆಯೊಂದಿಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಫಲಕಗಳನ್ನು ಅಳವಡಿಸಿ ತಡೆ ಬೇಲಿಯನ್ನು ನಿರ್ಮಿಸಲಾಗಿತ್ತು ಸಮುದ್ರದ ಪರಿಸ್ಥಿತಿಗಳನ್ನು ಅವಲಂಬಿಸಿ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಸೆಪ್ಟೆಂಬರ್ 21ರ ವರೆಗೆ ಮುಂದುವರೆಸಲಾಗಿತ್ತು
ಇದೀಗ ಮಲ್ಪೆ ಬೀಚ್ ನಲ್ಲಿ ಕಡಲಿಗಿಳಿಯದಂತೆ ಬೀಚ್‌ನ ಉದ್ದಕ್ಕೂ ಹಾಕಲಾಗಿದ್ದ ತಡೆಬೇಲಿಯನ್ನು ತೆರವುಗೊಳಿಸಲಾಗಿದ್ದು ಮಲ್ಪೆ ಬೀಚ್ ಪ್ರವಾಸಿಗರಿಗೆ ಮುಕ್ತ ವಾಗಿದೆ
ಹೌದು ಸೆಪ್ಟೆಂಬರ್ 22 ರಿಂದ ಮತ್ತೆ ಮಲ್ಪೆ ಬೀಚ್‌ನಲ್ಲಿ ಜಲ ಕ್ರೀಡೆ ಗಳಾದ ಜೆಸ್ಕಿ, ಪ್ಯಾರಸೈಲಿಂಗ್, ಬನಾನ ರೈಡ್, ಬಂಪಿ ರೈಡ್, ಝೋರ್ಬಿಂಗ್, ಬೋಟ್ ರೌಂಡ್ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳು ಆರಂಭಗೊಂಡಿದೆ
ಪ್ರವಾಸಿಗರು ಕಡಲಿನ ಜತೆ ದುಸ್ಸಾಹಸಕ್ಕಿಳಿಯದೆ ಎಲ್ಲರೂ ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮನವಿ ಮಾಡಿದ್ದಾರೆ.








