Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ನವರಾತ್ರಿ ಆಚರಣೆ, ಒಂಭತ್ತು ದಿನಗಳ ವಿಶೇಷತೆ..!!

Dhrishya News by Dhrishya News
23/09/2025
in ಮುಖಪುಟ
0
ನವರಾತ್ರಿ ಆಚರಣೆ, ಒಂಭತ್ತು ದಿನಗಳ ವಿಶೇಷತೆ..!!
0
SHARES
31
VIEWS
Share on FacebookShare on Twitter

ಉಡುಪಿ: ಸೆಪ್ಟೆಂಬರ್ 23:ನವರಾತ್ರಿಯ ಸಮಯದಲ್ಲಿ ದುರ್ಗಾದೇವಿಯನ್ನು ಒಂಭತ್ತು ರೂಪಗಳಲ್ಲಿ ಪೂಜಿಸಿ ಆರಾಧಿಸಲಾಗುತ್ತದೆ.. ದುರ್ಗಾ ಮಾತೆಯ ಒಂಬತ್ತುರೂಪಗಳೆಂದರೆ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ.

ನವರಾತ್ರಿಯ ಮೊದಲನೆಯ ದಿನ ಕಳಸ ಬೆಳಗುವುದರೊಂದಿಗೆ ಅರಂಭವಾಗುತ್ತದೆ. ಶಕ್ತಿ ದೇವತೆಯಾದ ದುರ್ಗಾ ಮಾತೆಗೆ ಕಳಸ ಬೆಳಗುವುದರೊಂದಿಗೆ ದೀಪ ಹಚ್ಚಿ ಪೂಜೆ ಮಾಡುತ್ತಾರೆ. ಶಕ್ತಿ ದೇವತೆಯರನ್ನು ಪ್ರತಿಷ್ಟಾಪಿಸುತ್ತಾರೆ. ಒಂಭತ್ತು ದಿನಗಳ ಕಾಲ ಶಕ್ತಿ ದೇವತೆಯನ್ನು ನಿಯಮ ಬದ್ಧವಾಗಿ ಪೂಜಿಸಲಾಗುತ್ತದೆ. ನಂದಾದೀಪ ಹಚ್ಚಿ 9 ದಿನಗಳ ಕಾಲ ಆರದಂತೆ ನೋಡಿಕೊಳ್ಳಬೇಕು.

ಎರಡನೆಯ ದಿನದಂದು ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಲಕ್ಷ್ಮಿ ದೇವಿಗೆ ಇಷ್ಟವಾದ ನೈವೇದ್ಯವನ್ನು ನೀಡಿ ಆಷ್ಟೋತ್ತರಗಳಿಂದ ಪೂಜೆ ಮಾಡಲಾಗುತ್ತದೆ.

ಮೂರನೆಯ ದಿನದಂದು ಮಹಿಶಾಸುರ ಮರ್ದಿನಿ ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ.. ಕಾಳಿ ಮಾತೆಯನ್ನು ವಿವಿಧ ರೂಪಗಳಲ್ಲಿ ಪೂಜಿಸುವುದರಿಂದ ಒಂಭತ್ತನೆಯ ದಿನ ಮಹಾ ಮಾತೆಯು ಸಂಪನ್ನಳಾಗಿ ಎಲ್ಲರನ್ನೂ ಅನುಗ್ರಹಿಸುತ್ತಾಳೆ. ಒಂಬತ್ತು ಈ ದಿನಗಳಲ್ಲಿ ಶಕ್ತಿ ದೆವತೆಯನ್ನು ಪೂಜಿಸಿ ಏನೇ ಕೆಲಸ ಕೈಗೊಂಡರೂ ನೆರವೇರುತ್ತವೆ ಎಂಬ ನಂಬಿಕೆ ಕೂಡ ಇವೆ.

 ನಾಲ್ಕನೆಯ ದಿನದಂದು ಸಿಂಹವನ್ನು ವಾಹನವನ್ನಾಗಿಸಿಕೊಂಡ ಚಾಮುಂಡೇಶ್ವರಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನದಂದು ಕಾಳಿ ದೇವತೆಯ ಮಂದಿರಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಕೊಲ್ಲೂರು ಮೂಕಾಂಬಿಕೆ, ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಹೋಮಗಳನ್ನು ಮಾಡಲಾಗುತ್ತದೆ.

ಐದನೇ ದಿನದಲ್ಲಿ ಧೂಮ್ರಾಹ ಎಂಬ ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. 5ನೇ ದಿನವಾದ್ದರಿಂದ, ಪಂಚರಾತ್ರೋತ್ಸವವನ್ನು ಅಚರಿಸಬೇಕು ಮತ್ತು ಲಕ್ಷ್ಮಿ ಪೂಜೆ ಮಾಡಿಸುವುದು ಈ ದಿನದಲ್ಲಿ ಉತ್ತಮವಾಗಿರುತ್ತದೆ

ಆರನೆಯ ದಿನದಂದು ಧನ ಲಕ್ಷ್ಮಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಧನ ಲಕ್ಷ್ಮಿಯನ್ನು ಪೂಜಿಸುವಾಗ, ಹಣದಿಂದ ಮಾಡಿದ ಹಾರವನ್ನು ದೇವಿಗೆ ಹಾರದ ರೂಪದಲ್ಲಿ ಹಾಕುವ ಪದ್ಧತಿಯೂ ಇದೆ. ದೀಪಗಳಿಂದ ಮಹಾ ಮಾತೆಯನ್ನು ಬೆಳಗಿ, ಅಷ್ಟ ಲಕ್ಷ್ಮಿಯೂ ಮನೆಯಲ್ಲಿ ನೆಲೆಸಲಿ ಎಂದು ಪ್ರಾರ್ಥಿಸುತ್ತಾರೆ

 ಏಳನೆಯ ದಿನದಂದು ವಿದ್ಯೆಯನ್ನು ಕರುಣಿಸುವ ಸರಸ್ವತಿ ಮಾತೆಯ ರೂಪದಲ್ಲಿ ಪೂಜಿಸಲಾಗುತ್ತದೆ. ಈ ದಿನದಲ್ಲಿ ಶಾರದ ಪೂಜೆಯನ್ನು ಮಾಡುವುದರ ಮೂಲಕ ಶಾರದೆಯ ಕೃಪೆಗೆ ಜನರು ಪಾತ್ರರಾಗುತ್ತಾರೆ. ಶಾಂತ ಸ್ವರೂಪದಲ್ಲಿರುವ ಶಾರದಾ ಮಾತೆಯು ಏಳನೆಯ ದಿನದಿಂದ ಒಂಭತ್ತನೆಯ ದಿನಗಳ ಸಮಯದಲ್ಲಿ ತನ್ನ ಭಕ್ತರಿಗೆ ಬೇಡಿದ ವರವನ್ನು ಶಾಂತಿಯಿಂದ ಅನುಗ್ರಹಿಸುವಳು ಎಂಬ ನಂಬಿಕೆಯಿದೆ.

ಎಂಟನೆಯ ದಿನವನ್ನು ದುರ್ಗಾಷ್ಟಮಿ ಎಂದು ಕರೆಯುತ್ತಾರೆ. ಅಂದರೆ, ದುರ್ಗಾದೇವಿಯನ್ನು ಪೂಜಿಸುವ ಎಂಟನೆಯ ದಿನವಾದ್ದರಿಂದ ಈ ದಿನವನ್ನು ದುರ್ಗಾಷ್ಟಮಿ ಎಂದೂ ಕರೆಯುತ್ತಾರೆ. ಈ ದಿನದಂದು ದುರ್ಗಾ ಮಾತೆಯನ್ನು ಪೂಜಿಸಲಾಗುತ್ತದೆ. ದೇವಿಗೆ ಪೂಜಿಸಿ, ಉಪವಾಸ ವ್ರತ ಮಾಡುತ್ತಾರೆ. ಈ ದಿನಗಳಲ್ಲಿ ಕುಂಕುಮಾರ್ಚನೆ ನಡೆಯುತ್ತದೆ.

ದೇವಾನುದೇವತೆಗಳಿಗೆ ವಿಪರೀತವಾಗಿ ಕಾಟ ಕೊಡುತ್ತಿದ್ದ ಮಹಿಷಾಸುರನನ್ನು ಚಾಮುಂಡೇಶ್ವರಿ, ದುರ್ಗೆ, ಬನಶಂಕರಿ ಎಂದು ಮೊದಲಾದ ನಾಮಾವಳಿಗಳಿಂದ ಸ್ತುತಿಸಲಾಗುವ ದೇವಿ ನವರಾತ್ರಿಯ ಒಂಬತ್ತನೇ ದಿನದಂದು ಸಂಹರಿಸಿ ಲೋಕಕ್ಕೆ ಶಾಂತಿಯನ್ನು ತಂದಳೆಂಬ ನಂಬಿಕೆಯ ದ್ಯೋತಕವಾಗಿ ಒಂಬತ್ತನೇ ದಿನದಂದು ಆಯುಧ ಪೂಜೆ ಮಾಡಲಾಗುತ್ತದೆ. ಈ ದಿನ ಮನೆಗಳಲ್ಲಿ ಇರುವಂಥ ವಾಹನಗಳು, ವಿವಿಧ ಬಗೆಯ ಅಸ್ತ್ರಗಳು, ಎತ್ತುಗಳು, ಬಿತ್ತನೆಗೆ ಬಳಸುವ ನೇಗಿಲು ಸೇರಿದಂತೆ ವಿವಿಧ ಬಗೆಯ ವಸ್ತುಗಳನ್ನು ದೇವರ ಮನೆಯಲ್ಲಿಟ್ಟು, ಅವುಗಳಿಗೆ ನಿಯಮಬದ್ಧವಾಗಿ ಪೂಜೆ ಸಲ್ಲಿಸಲಾಗುತ್ತದೆ. ಈ ವೇಳೆ ಮೈಸೂರಿನಲ್ಲಿನ ಚಿನ್ನದ ಅಂಬಾರಿಯನ್ನು ವಿಧಿವತ್ತಾಗಿ ರಾಜ ಮನೆತನದವರಿಂದ ಪೂಜಿಸಲಾಗುತ್ತದೆ..

ಹತ್ತನೆಯ ದಿನ, ಅಂದರೆ ವಿಜಯದಶಮಿಯಂದು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವಿಜಯದ ಸಂಕೇತವಾದ ಶಮೀವೃಕ್ಷವನ್ನು ಪೂಜಿಸಿದರೆ ಶತ್ರುಜಯ ಪಾಪ-ಪರಿಹಾರ, ಮುಖ್ಯ ಕಾರ್ಯಗಳಲ್ಲಿ ವಿಜಯ ದೊರೆಯುತ್ತದೆ. ವಿಜಯ ದಶಮಿಯ ದಿನ ಎಲ್ಲರೂ ಶಮೀ(ಬನ್ನಿ)ವೃಕ್ಷಕ್ಕೆ ಕುಟುಂಬ ಸಮೇತ ಹೋಗಿ ಶ್ರದ್ಧಾಭಕ್ತಿಯಿಂದ ಪೂಜಿಸಬೇಕು. ವಿಜಯ ದಶಮಿಯ ಸಮಯದಲ್ಲಿ ಮೈಸೂರಿನಲ್ಲಿ ಜಂಬೂ ಸವಾರಿ ನಡೆಯುತ್ತದೆ. ಆ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯ ವಿಗ್ರಹವಿರುತ್ತದೆ.

ಒಂದೊಂದು ದಿನ 9 ರೂಪಗಳಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ. 10 ನೇ ದಿನ ವಿಜಯ ದಶಮಿಯನ್ನು ಆಚರಿಸಲಾಗುತ್ತದೆ. ನವರಾತ್ರಿ ಪೂಜೆ ಮಾಡಿದರೇ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬ ನಂಬಿಕೆ ಇದೆ.

ಮೈಸೂರಿನಲ್ಲಿ ನಡೆಯುವ ವಿಜಯ ದಶಮಿಗೆ ಪಾರಂಪರಿಕ ಇತಿಹಾಸವಿದೆ. ಮಹಿಶಾಸುರನೆಂಬ ರಾಕ್ಷಸನಿಂದ ಮೈಸೂರಿನ ಜನೆತೆ ವಿವಿಧ ತೊಂದರೆಗೀಡಾಗಿದ್ದರು. ತಪಸ್ಸು ಮಾಡಿ ದೇವರಿಂದ ಮಹೋನ್ನತ ವರವನ್ನು ಪಡೆದ ಮಹಾಷಾಸುರ ಗರ್ವದಿಂದ ಎಲ್ಲರಿಗೂ ಉಪದ್ರವ ಕೊಡೋಕೆ ಶುರು ಮಾಡಿದ. ಆಗ ಎಲ್ಲರೂ ಸೇರಿ ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿ ಮಹಿಷಾಸುರನ ಉಪಟಳದಿಂದ ಪಾರು ಮಾಡುವಂತೆ ಕೇಳಿದ್ರು. ಅಗ ತಾಯಿ ಚಾಮುಂಡೇಶ್ವರಿಯು ಮಹಿಶಾಸುರನನ್ನು ಕೊಂದು ಪ್ರಜೆಗಳನ್ನು ಕಾಪಾಡಿದ್ದಳು.. ಇದೇ ಮೈಸೂರಿನ ವಿಜಯ ದಶಮಿ ಆಚರಣೆಯ ಸಾರಾಂಶವಾಗಿದೆ.

ಒಂಭತ್ತು ದಿನಗಳ ಕಾಲ ಶ್ರೀರಾಮ ಸೇನೆಯು ರಾವಣ ಸೇನೆಯೊಂದಿಗೆ ಯುದ್ಧ ಮಾಡಿ, ಕೊನೆಗೆ ಹತ್ತನೆಯ ದಿನದಂದು ಅಂದ್ರೆ ‘ದಶಮಿಯಂದು ದಶಕಂಠ ರಾವಣನನ್ನು ಸಂಹರಿಸುವುದರ ಮೂಲಕ ವಿಜಯೋತ್ಸವನ್ನು ಅಚರಿಸಲಾಯ್ತು. ಈ ವಿಜಯೋತ್ಸವವನ್ನೇ ವಿಜಯ ದಶಮಿ ಎಂದು ಆಚರಿಸುತ್ತಾರೆ ಎಂಬ ಪ್ರತೀತಿ ಇದೆ.

ಇನ್ನು ಈ ವಿಜಯ ದಶಮಿಯನ್ನು ಕರ್ನಾಟಕದಲ್ಲಿ ಆಚರಣೆಗೆ ತಂದವರು ಮೈಸೂರು ರಾಜರು ಎಂಬ ನಂಬಿಕೆ ಇದೆ. ಆದ್ರೆ ಮೂಲತಃವಾಗಿ ಈ ಆಚರಣೆಯನ್ನು ತಂದವರು ವಿಜಯ ನಗರ ಸಾಮ್ರಾಜ್ಯದ ಅರಸರು. ಅಂದರೆ ಕ್ರಿ.ಶ 1565 ರಲ್ಲಿ ತಾಳಿಕೋಟೆ ಯುದ್ದದಲ್ಲಿ ವಿಜಯನಗರ ಸಾಮ್ರಾಜ್ಯ ಅಂತ್ಯವಾದಮೇಲೆ ಮೈಸೂರಿನ ರಾಜ ಒಡೆಯರ್ ರವರು 1610 ರಲ್ಲಿ ಆ ಸಂಪ್ರದಾಯವನ್ನು ಮೈಸೂರಿನ ಸಂಸ್ಥಾನದಲ್ಲಿ ಮುಂದುವರಿಸಿಕೊಂಡು ಬಂದರು.

Previous Post

ಕೃಷ್ಣಾಷ್ಟಮಿಯ ಸಂದರ್ಭದಲ್ಲಿ ಸುಷ್ಮಾ ಬಂಟ್ವಾಳ ಅವರು ವೇಷ ಧರಿಸಿ ಸಂಗ್ರಹಿಸಿದ 2,50,764 ರೂಪಾಯಿ ವಿಜಯಲಕ್ಷ್ಮಿ ಸಿ ಬಂಗೇರ ಕುಟುಂಬಕ್ಕೆ ಹಸ್ತಾಂತರ..!!

Next Post

ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ನವರಾತ್ರಿ ಮಹೋತ್ಸವಕ್ಕೆ ಚಾಲನೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ನವರಾತ್ರಿ ಮಹೋತ್ಸವಕ್ಕೆ ಚಾಲನೆ..!!

ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ನವರಾತ್ರಿ ಮಹೋತ್ಸವಕ್ಕೆ ಚಾಲನೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023
ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಂಗಳೂರು-ನವಿ ಮುಂಬೈ ನಡುವೆ ಡಿ.25ರಿಂದ ಇಂಡಿಗೋ ವಿಮಾನ ಸೇವೆ ಆರಂಭ..!!

ಸಾವಿರಕ್ಕೂ ಅಧಿಕ ಇಂಡಿಗೊ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ – ಪ್ರಯಾಣಿಕರ ತೀವ್ರ ಪರದಾಟ..!!

05/12/2025
ದಿನನಿತ್ಯದ ಬಳಕೆಗೆ ಒದಗುವ ತೆಳುವಾದ ಮತ್ತು ಸೊಗಸಾದ ಟ್ಯಾಬ್ಲೆಟ್ ಗ್ಯಾಲಕ್ಸಿ ಟ್ಯಾಬ್ ಎ11 ಬಿಡುಗಡೆ ಮಾಡಿದ ಸ್ಯಾಮ್‌ಸಂಗ್..!!

ದಿನನಿತ್ಯದ ಬಳಕೆಗೆ ಒದಗುವ ತೆಳುವಾದ ಮತ್ತು ಸೊಗಸಾದ ಟ್ಯಾಬ್ಲೆಟ್ ಗ್ಯಾಲಕ್ಸಿ ಟ್ಯಾಬ್ ಎ11 ಬಿಡುಗಡೆ ಮಾಡಿದ ಸ್ಯಾಮ್‌ಸಂಗ್..!!

05/12/2025
ಇನ್ಮುಂದೆ ಗೃಹ ಸಾಲ, ವಾಹನದ ಮೇಲಿನ ಸಾಲಗಳ ಮೇಲೆ ಕಡಿಮೆ ಬಡ್ಡಿ ದರ :RBI ನಿಂದ ರೆಪೋ ದರ ಶೇ.5.25ಕ್ಕೆ ಇಳಿಕೆ..!!

ಇನ್ಮುಂದೆ ಗೃಹ ಸಾಲ, ವಾಹನದ ಮೇಲಿನ ಸಾಲಗಳ ಮೇಲೆ ಕಡಿಮೆ ಬಡ್ಡಿ ದರ :RBI ನಿಂದ ರೆಪೋ ದರ ಶೇ.5.25ಕ್ಕೆ ಇಳಿಕೆ..!!

05/12/2025
ಉಡುಪಿ: ಹಾಸ್ಟೆಲ್‌ನಿಂದ ಕಾಣೆಯಾಗಿದ್ದ ಬಾಲಕ ಕಾರವಾರದಲ್ಲಿ ಪತ್ತೆ..!!

ಉಡುಪಿ: ಹಾಸ್ಟೆಲ್‌ನಿಂದ ಕಾಣೆಯಾಗಿದ್ದ ಬಾಲಕ ಕಾರವಾರದಲ್ಲಿ ಪತ್ತೆ..!!

05/12/2025

Recent News

ಮಂಗಳೂರು-ನವಿ ಮುಂಬೈ ನಡುವೆ ಡಿ.25ರಿಂದ ಇಂಡಿಗೋ ವಿಮಾನ ಸೇವೆ ಆರಂಭ..!!

ಸಾವಿರಕ್ಕೂ ಅಧಿಕ ಇಂಡಿಗೊ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ – ಪ್ರಯಾಣಿಕರ ತೀವ್ರ ಪರದಾಟ..!!

05/12/2025
ದಿನನಿತ್ಯದ ಬಳಕೆಗೆ ಒದಗುವ ತೆಳುವಾದ ಮತ್ತು ಸೊಗಸಾದ ಟ್ಯಾಬ್ಲೆಟ್ ಗ್ಯಾಲಕ್ಸಿ ಟ್ಯಾಬ್ ಎ11 ಬಿಡುಗಡೆ ಮಾಡಿದ ಸ್ಯಾಮ್‌ಸಂಗ್..!!

ದಿನನಿತ್ಯದ ಬಳಕೆಗೆ ಒದಗುವ ತೆಳುವಾದ ಮತ್ತು ಸೊಗಸಾದ ಟ್ಯಾಬ್ಲೆಟ್ ಗ್ಯಾಲಕ್ಸಿ ಟ್ಯಾಬ್ ಎ11 ಬಿಡುಗಡೆ ಮಾಡಿದ ಸ್ಯಾಮ್‌ಸಂಗ್..!!

05/12/2025
ಇನ್ಮುಂದೆ ಗೃಹ ಸಾಲ, ವಾಹನದ ಮೇಲಿನ ಸಾಲಗಳ ಮೇಲೆ ಕಡಿಮೆ ಬಡ್ಡಿ ದರ :RBI ನಿಂದ ರೆಪೋ ದರ ಶೇ.5.25ಕ್ಕೆ ಇಳಿಕೆ..!!

ಇನ್ಮುಂದೆ ಗೃಹ ಸಾಲ, ವಾಹನದ ಮೇಲಿನ ಸಾಲಗಳ ಮೇಲೆ ಕಡಿಮೆ ಬಡ್ಡಿ ದರ :RBI ನಿಂದ ರೆಪೋ ದರ ಶೇ.5.25ಕ್ಕೆ ಇಳಿಕೆ..!!

05/12/2025
ಉಡುಪಿ: ಹಾಸ್ಟೆಲ್‌ನಿಂದ ಕಾಣೆಯಾಗಿದ್ದ ಬಾಲಕ ಕಾರವಾರದಲ್ಲಿ ಪತ್ತೆ..!!

ಉಡುಪಿ: ಹಾಸ್ಟೆಲ್‌ನಿಂದ ಕಾಣೆಯಾಗಿದ್ದ ಬಾಲಕ ಕಾರವಾರದಲ್ಲಿ ಪತ್ತೆ..!!

05/12/2025
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved