ಮಂಗಳೂರು : ಸೆಪ್ಟೆಂಬರ್ 18: ಯೆಯ್ಯಾಡಿ ಜಂಕ್ಷನ್‌ನಲ್ಲಿ ಬುಧವಾರ ನಡೆದ ಅಪಘಾತದಲ್ಲಿ ಯುವ ಎಂಜಿನಿಯರ್ ಸಾವಿಗೀಡಾಗಿದ್ದಾರೆ
ಸ್ಥಳೀಯ ನಿವಾಸಿ ಕೌಶಿಕ್ (27) ಮೃತಪಟ್ಟವರು. ನಿತ್ಯವೂ ಬೆಳಗ್ಗೆ ಮನೆಗಳಿಗೆ ಪೇಪರ್ ಹಾಕುತ್ತಿದ್ದರು. ತಂದೆಯ ಜೊತೆಗೆ ಬೆಳಗ್ಗೆ ಪೇಪರ್ ಹಾಕಿ ಬರುತ್ತಿರಬೇಕಾದರೆ ಕೌಶಿಕ್ ಸವಾರಿ ನಡೆಸುತ್ತಿದ್ದ ಬೈಕ್‌ಗೆ ಆಟೋರಿಕ್ಷಾ ಡಿಕ್ಕಿ ಹೊಡೆದಿತ್ತು.
ಗಂಭೀರ ಗಾಯಗೊಂಡ ಕೌಶಿಕ್ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಸಂಚಾರಿ ಪೂರ್ವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೌಶಿಕ್ ಅವರ ತಂದೆ ರಾಮಚಂದ್ರ ಅವರು ಪೇಪರ್ ವಿತರಕರಾಗಿದ್ದರು. ಕೌಶಿಕ್ ಅವರ ಒಬ್ಬನೇ ಪುತ್ರ ಸಿವಿಲ್ ಎಂಜಿನಿಯರ್ ಆಗಿದ್ದ. ಕೌಶಿಕ್ ಬೆಳಗ್ಗೆ ಪೇಪರ್ ವಿತರಿಸಲು ತಂದೆಗೆ ಸಹಾಯ ಮಾಡಿ ಅನಂತರ ಉದ್ಯೋಗಕ್ಕೆ ತೆರಳುತ್ತಿದ್ದ ಸ್ನೇಹಜೀವಿಯಾಗಿದ್ದ ಕೌಶಿಕ್ ಪರಿಸರದಲ್ಲಿ ಎಲ್ಲದ ಅಚ್ಚುಮೆಚ್ಚಿನವರಾಗಿದರು. ಸಿವಿಲ್ ಇಂಜಿನಿಯರ್ ಆಗಿದ್ದರೂ ಕೌಶಿಕ್ ಬೆಳಗ್ಗೆ ಎದ್ದು ನೂರಾರು ಮನೆಗಳಿಗೆ ಪೇಪರ್ ವಿತರಿಸುವ ಕಾಯಕ ನಿಲ್ಲಿಸಿರಲಿಲ್ಲ.








