ಉಡುಪಿ:ಸೆಪ್ಟೆಂಬರ್ 18 :ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಹುಟ್ಟು ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 1 ಪೆರಂಪಳ್ಳಿ ಫಾತಿಮಾ ಮಾತೆ ಚರ್ಚ್ ವಠಾರದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತು.
ಉಡುಪಿ ಶಾಸಕರಾದ ಶ್ರೀ ಯಶಪಾಲ್ ಸುವರ್ಣ ಹಾಗೂ ನಗರಧ್ಯಕ್ಷರಾದ ಶ್ರೀ ದಿನೇಶ್ ಅಮೀನ್ ರವರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ವನ್ನು ಹಮ್ಮಿ ಕೊಳ್ಳಲಾಯಿತು.
ಈ ಸಂಧರ್ಭದಲ್ಲಿ ನಮ್ಮ ಚರ್ಚಿನ ಧರ್ಮಗುರುಗಳಾದ ರೆ/ವ /ಫಾ/ವಿಶಾಲ್ ಲೋಬೊರವರು, ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ಯನ್ನು ನೀಡಿದರು.ಚರ್ಚಿನ ಧರ್ಮಗುರುಗಳು ನಮ್ಮ ನೆಚ್ಚಿನ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರಮೋದಿಜಿ ಯವರ ಹುಟ್ಟು ಹಬ್ಬಕ್ಕೆ ಶುಭವನ್ನು ಹಾರೈಸಿದರು. ಮೋರ್ಚಾದ ಅಧ್ಯಕ್ಷರಾದ ಶ್ರೀ ಡೇನಿಸ್ ಮಸ್ಕೇರೆನ್ಹಸ್, ಪ್ರಧಾನ ಕಾರ್ಯದರ್ಶಿಗಳಾದ ಗ್ರೇಟ್ಟ ಮಸ್ಕೇರೆನ್ಹಸ್, ಶೇಖ್ ಫಯಾಜ್, ಉಪಾಧ್ಯಕ್ಷರುಗಳಾದ ಮಥಿಯಸ್ ಮಸ್ಕೇರೆನ್ಹಸ್, ಅಬ್ದುಲ್ ಖಾದರ್, ಪಧಾಧಿಕಾರಿಗಳದ ವಿನ್ನಿ, ಇಬಾ, ಲಿಡಿಯಾ, ಲಾನ್ಸಿ, ಮಿಲ್ಟೊನ್, ಸೋಫಿಯ,ಪೀಟರ್,ಒಲಿವರ್, ಗ್ರೇಟ್ಟ,ಆರ್ಚಿ ಬೊಲ್ಟ್, ಪ್ರಿನ್ಸನ್,ಜಾರ್ಜ್,ಸೋಹಲ್ ಮತ್ತಿತ್ತರು ಉಪಸ್ಥಿತರಿದ್ದರು.








