Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಉಡುಪಿ:ದೀಪಾವಳಿ ಹಬ್ಬದ ಪ್ರಯುಕ್ತ ತಾತ್ಕಾಲಿಕ ಸುಡುಮದ್ದು ಮಾರಾಟ ಪರವಾನಿಗೆ ಪಡೆಯಲು  ಆಸಕ್ತರಿಂದ ಅರ್ಜಿ ಆಹ್ವಾನ..!!

Dhrishya News by Dhrishya News
17/09/2025
in ಮುಖಪುಟ, ಸುದ್ದಿಗಳು
0
ಉಡುಪಿ:ದೀಪಾವಳಿ ಹಬ್ಬದ ಪ್ರಯುಕ್ತ ತಾತ್ಕಾಲಿಕ ಸುಡುಮದ್ದು ಮಾರಾಟ ಪರವಾನಿಗೆ ಪಡೆಯಲು  ಆಸಕ್ತರಿಂದ ಅರ್ಜಿ ಆಹ್ವಾನ..!!
0
SHARES
20
VIEWS
Share on FacebookShare on Twitter

ಉಡುಪಿ: ಸೆಪ್ಟೆಂಬರ್ 17: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ಮಾಡಲು ಅಪೇಕ್ಷಿಸುವವರಿಂದ ಸುಡುಮದ್ದು ಮಾರಾಟದ ಪರವಾನಿಗೆ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿದಾರರು LE-5 ರಲ್ಲಿ ತಾತ್ಕಾಲಿಕ ಸುಡುಮದ್ದು ಪರವಾನಿಗೆಯನ್ನು ಪಡೆಯಲು ಸಾಕಷ್ಟು ಮುಂಚಿತವಾಗಿ AE-5 ನಮೂನೆಯನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದ ಪಡೆದು, ತಾಲೂಕು ಮಟ್ಟದಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ಮಾಡುವ ಪರವಾನಿಗೆ ನೀಡಲು ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಸದ್ರಿ ಸಮಿತಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ನಿರಾಕ್ಷೇಪಣಾ

ಪತ್ರವನ್ನು ಪಡೆದು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಿದಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ಪರವಾನಿಗೆಯನ್ನು ನೀಡುವ ಬಗ್ಗೆ, ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಸ್ಫೋಟಕ ಕಾಯಿದೆ ಮತ್ತು ನಿಯಮ 2008 ರ ಶೆಡ್ಯೂಲ್-IV ರಡಿಯಲ್ಲಿ ಜಿಲ್ಲಾ ವ್ಯಾಪ್ತಿಯ ಈಗಾಗಲೇ ಸಮಿತಿಯು ನಿಗದಿಪಡಿಸಿರುವ ತೆರೆದ ಪ್ರದೇಶಗಳಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಸುಡುಮದ್ದು ಮಾರಾಟದ ತಾತ್ಕಾಲಿಕ ಪರವಾನಿಗೆ ನೀಡುವ ಬಗ್ಗೆ, ಅರ್ಜಿಗಳನ್ನು ಜಿಲ್ಲಾಧಿಕಾರಿಯವರ ಕಚೇರಿಯಿಂದ ಅಥವಾ ಆನ್‌ಲೈನ್ LSDA Portal ನಲ್ಲಿ ಪಡೆದು ಅಕ್ಟೋಬರ್ 10 ರ ಒಳಗಾಗಿ ಅರ್ಜಿಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ 300 ರೂ. ಪರಿಶೀಲನಾ ಶುಲ್ಕವನ್ನು ಹಾಗೂ ಪರವಾನಿಗೆ ಮಂಜೂರು ಮಾಡುವ ಸಂದರ್ಭದಲ್ಲಿ 600 ರೂ. ಪರವಾನಿಗೆ ಶುಲ್ಕವನ್ನು ಪಾವತಿಸಬೇಕು.ಅರ್ಜಿಯನ್ನು ನಿಗಧಿತ ನಮೂನೆಯಲ್ಲಿ AE-5 ರಲ್ಲಿ ಸಲ್ಲಿಸಬೇಕಾಗಿದ್ದು, ಅರ್ಜಿಯೊಂದಿಗೆ ತಾತ್ಕಾಲಿಕ ಅಂಗಡಿ ತೆರೆಯಲು ಉದ್ದೇಶಿಸಿರುವ ಸ್ಥಳದ ನೀಲಿ ನಕ್ಷೆ, ಅರ್ಜಿದಾರರ ಭಾವಚಿತ್ರ, ಪ್ರಸ್ತಾಪಿತ ಜಮೀನಿನ ಪಹಣಿ, ಖಾಸಗಿ ಜಮೀನಾಗಿದ್ದಲ್ಲಿ ಜಮೀನಿನ ಮಾಲಕರ ಒಪ್ಪಿಗೆ ಪತ್ರ (100ರೂ.ಸ್ಟಾಂಪ್ ಪೇಪರ್), ಸರಕಾರ ಜಾಗವಾಗಿದ್ದಲ್ಲಿ ಜಮೀನು ಯಾವ ಇಲಾಖೆಯ ಸುಪರ್ದಿಯಲ್ಲಿದೆಯೋ ಆ ಇಲಾಖೆಯ ನಿರಾಕ್ಷೇಪಣಾ ಪತ್ರದೊಂದಿಗೆ ಸಲ್ಲಿಸಬೇಕು.

ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಅಗ್ನಿಶಾಮಕ ಇಲಾಖೆ, ಪೊಲೀಸ್ ಇಲಾಖೆ, ತಹಶೀಲ್ದಾರರ ಹಾಗೂ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಂದ ಪಡೆದ ನಿರಾಕ್ಷೇಪಣಾ ಪತ್ರಗಳನ್ನು AE-5 ನಮೂನೆ, ಪ್ರಸ್ತಾವಿತ ಜಮೀನಿನ ನಕ್ಷೆ, ಇತ್ತೀಚಿನ ಪಹಣಿ ಪತ್ರ ದಾಖಲೆಗಳು ಹಾಗೂ ತಾಲೂಕು ಮಟ್ಟದ ಸಮಿತಿಯಿಂದ ಪಡೆದಿರುವ ನಿರಾಕ್ಷೇಪಣಾ ಪತ್ರದೊಂದಿಗೆ ಸಲ್ಲಿಸಬೇಕು. LSDA Portal ನ ನಮೂನೆಯಲ್ಲಿರುವ ಎಲ್ಲಾ ಕಲಂಗಳನ್ನು ವಿವರದೊಂದಿಗೆ ಭರ್ತಿ ಮಾಡಬೇಕು.

ತಾಲೂಕು ಮಟ್ಟದ ಸಮಿತಿಯು ನಿಗದಿಪಡಿಸುವ ಸಾರ್ವಜನಿಕ ವಸತಿ ಹಾಗೂ ಅಂಗಡಿ ಇರುವ ಸ್ಥಳಗಳಿಂದ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಮಾತ್ರ ತಾತ್ಕಾಲಿಕ ಸುಡುಮದ್ದು ಮಾರಾಟ ಮಳಿಗೆಗಳನ್ನು ತೆರೆಯಬಹುದಾಗಿದ್ದು, ಸಂಬಂಧಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಬಂದಲ್ಲಿ ದಿ ಎಕ್ಸ್ಪ್ಲೋಸಿವ್ ಆಕ್ಟ್ 1884 ಸೆಕ್ಷನ್ 84 ಹಾಗೂ ಎಕ್ಸ್ಪ್ಲೋಸಿವ್ ರೂಲ್ಸ್ 2008 ಕಾಯಿದೆ/ ನಿಯಮಾವಳಿಗಳಿಗೆ ಒಳಪಟ್ಟು ಜಿಲ್ಲಾಧಿಕಾರಿಗಳ ಕಚೇರಿಯಿಂದ ಪರವಾನಿಗೆ ಮಂಜೂರು ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿಪ್ರಕಟಣೆ ತಿಳಿಸಿದೆ.

Previous Post

ರಿತನ್ಯ ಎಸ್. ಆಚಾರ್ಯ “ಸೂಪರ್ ಟ್ಯಾಲೆಂಟೆಡ್ ಕಿಡ್” ಪುರಸ್ಕಾರ..!!

Next Post

ಉಡುಪಿ :ಶಾಂತ ಕೆ ಕಾಮತ್ ನಿಧನ ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಉಡುಪಿ :ಶಾಂತ ಕೆ ಕಾಮತ್ ನಿಧನ ..!!

ಉಡುಪಿ :ಶಾಂತ ಕೆ ಕಾಮತ್ ನಿಧನ ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಬ್ರಹ್ಮಾವರದಲ್ಲಿ ಭೀಕರ ಅಪಘಾತ: ಹುಲಿವೇಷ ಕಲಾವಿದ ಮಂಜುನಾಥ್ ದುರ್ಮರಣ

ಬ್ರಹ್ಮಾವರದಲ್ಲಿ ಭೀಕರ ಅಪಘಾತ: ಹುಲಿವೇಷ ಕಲಾವಿದ ಮಂಜುನಾಥ್ ದುರ್ಮರಣ

01/07/2026
ಇಂಡಸ್ಟ್ರಿಯಲ್ ಎಐ ಅನ್ನು ಚುರುಕುಗೊಳಿಸಲು ಬೆಂಗಳೂರಿನ ಎಬಿಬಿ ಇನ್ನೋವೇಶನ್ ಸೆಂಟರ್‌ ನಲ್ಲಿ ನಡೆದ ಎಬಿಬಿ ಆಕ್ಸಿಲರೇಟರ್ ಕಾರ್ಯಕ್ರಮದಲ್ಲಿ 37 ದೇಶಗಳ 1,000ಕ್ಕೂ ಹೆಚ್ಚು ಆವಿಷ್ಕಾರಕರು ಭಾಗಿ

ಇಂಡಸ್ಟ್ರಿಯಲ್ ಎಐ ಅನ್ನು ಚುರುಕುಗೊಳಿಸಲು ಬೆಂಗಳೂರಿನ ಎಬಿಬಿ ಇನ್ನೋವೇಶನ್ ಸೆಂಟರ್‌ ನಲ್ಲಿ ನಡೆದ ಎಬಿಬಿ ಆಕ್ಸಿಲರೇಟರ್ ಕಾರ್ಯಕ್ರಮದಲ್ಲಿ 37 ದೇಶಗಳ 1,000ಕ್ಕೂ ಹೆಚ್ಚು ಆವಿಷ್ಕಾರಕರು ಭಾಗಿ

01/07/2026
ಕರಾವಳಿಯಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ : ರೆಡ್ ಅಲರ್ಟ್ ಘೋಷಣೆ

ಕರಾವಳಿಯಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ : ರೆಡ್ ಅಲರ್ಟ್ ಘೋಷಣೆ

01/07/2026
ವಿಕಸಿತ ಭಾರತ’, ‘ವಿಶ್ವ ಗುರು ಭಾರತ’ ಬಿಜೆಪಿ ಗುರಿ : ಕುತ್ಯಾರು ನವೀನ್ ಶೆಟ್ಟಿ

ವಿಕಸಿತ ಭಾರತ’, ‘ವಿಶ್ವ ಗುರು ಭಾರತ’ ಬಿಜೆಪಿ ಗುರಿ : ಕುತ್ಯಾರು ನವೀನ್ ಶೆಟ್ಟಿ

01/07/2026

Recent News

ಬ್ರಹ್ಮಾವರದಲ್ಲಿ ಭೀಕರ ಅಪಘಾತ: ಹುಲಿವೇಷ ಕಲಾವಿದ ಮಂಜುನಾಥ್ ದುರ್ಮರಣ

ಬ್ರಹ್ಮಾವರದಲ್ಲಿ ಭೀಕರ ಅಪಘಾತ: ಹುಲಿವೇಷ ಕಲಾವಿದ ಮಂಜುನಾಥ್ ದುರ್ಮರಣ

01/07/2026
ಇಂಡಸ್ಟ್ರಿಯಲ್ ಎಐ ಅನ್ನು ಚುರುಕುಗೊಳಿಸಲು ಬೆಂಗಳೂರಿನ ಎಬಿಬಿ ಇನ್ನೋವೇಶನ್ ಸೆಂಟರ್‌ ನಲ್ಲಿ ನಡೆದ ಎಬಿಬಿ ಆಕ್ಸಿಲರೇಟರ್ ಕಾರ್ಯಕ್ರಮದಲ್ಲಿ 37 ದೇಶಗಳ 1,000ಕ್ಕೂ ಹೆಚ್ಚು ಆವಿಷ್ಕಾರಕರು ಭಾಗಿ

ಇಂಡಸ್ಟ್ರಿಯಲ್ ಎಐ ಅನ್ನು ಚುರುಕುಗೊಳಿಸಲು ಬೆಂಗಳೂರಿನ ಎಬಿಬಿ ಇನ್ನೋವೇಶನ್ ಸೆಂಟರ್‌ ನಲ್ಲಿ ನಡೆದ ಎಬಿಬಿ ಆಕ್ಸಿಲರೇಟರ್ ಕಾರ್ಯಕ್ರಮದಲ್ಲಿ 37 ದೇಶಗಳ 1,000ಕ್ಕೂ ಹೆಚ್ಚು ಆವಿಷ್ಕಾರಕರು ಭಾಗಿ

01/07/2026
ಕರಾವಳಿಯಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ : ರೆಡ್ ಅಲರ್ಟ್ ಘೋಷಣೆ

ಕರಾವಳಿಯಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ : ರೆಡ್ ಅಲರ್ಟ್ ಘೋಷಣೆ

01/07/2026
ವಿಕಸಿತ ಭಾರತ’, ‘ವಿಶ್ವ ಗುರು ಭಾರತ’ ಬಿಜೆಪಿ ಗುರಿ : ಕುತ್ಯಾರು ನವೀನ್ ಶೆಟ್ಟಿ

ವಿಕಸಿತ ಭಾರತ’, ‘ವಿಶ್ವ ಗುರು ಭಾರತ’ ಬಿಜೆಪಿ ಗುರಿ : ಕುತ್ಯಾರು ನವೀನ್ ಶೆಟ್ಟಿ

01/07/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved