ಉಡುಪಿ: ಸೆಪ್ಟೆಂಬರ್ 16: ದಸರಾ ಪ್ರಯುಕ್ತ ಜಿಲ್ಲೆಯ ಸುತ್ತಮುತ್ತಲಿನ ದೇವಸ್ಥಾನಗಳ ದರ್ಶನಕ್ಕೆ ಕೆಎಸ್ಸಾರ್ಟಿಸಿ ವತಿಯಿಂದ ವಿಶೇಷ ಪ್ಯಾಕೇಜ್ ಪ್ರವಾಸ ಆಯೋಜಿಸಲಾಗಿದೆ.
ಶೃಂಗೇರಿ ಕ್ಷೇತ್ರ ದರ್ಶನ ಪ್ಯಾಕೇಜ್ (ಬೆಳಗ್ಗೆ 7.30ರಿಂದ ರಾತ್ರಿ 8): ನಗರ ಸಾರಿಗೆ ಬಸ್ ನಿಲ್ದಾಣದಿಂದ ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಶೃಂಗೇರಿ ಶ್ರೀ ಶಾರದಾಂಬ ದೇವಸ್ಥಾನ (ವಯಾ ಎಸ್‌ಕೆ ಬಾರ್ಡರ್), ಶ್ರೀಋಷ್ಯಶೃಂಗೇಶ್ವರ ದೇವಸ್ಥಾನ ಕಿಗ್ಗ ಕ್ಷೇತ್ರ, ಹರಿ ಹರಪುರ ಮಠಕ್ಕೆ ಹೋಗಿ ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಮೂಲಕ ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ವಾಪಸು ಬರಲಿದೆ.
ಕೊಲ್ಲೂರು ಕ್ಷೇತ್ರ ದರ್ಶನ ಪ್ಯಾಕೇಜ್ (ಬೆಳಗ್ಗೆ 7.30ರಿಂದ ಸಂಜೆ 6.30): ನಗರ ಸಾರಿಗೆ ಬಸ್ ನಿಲ್ದಾಣದಿಂದ ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕಮಲಶಿಲೆ ಶ್ರೀ ಬ್ರಾಹ್ಮ ದುರ್ಗಾಪರಮೇಶ್ವರೀ ದೇವಸ್ಥಾನ, ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೈಶ್ವರ ದೇವಸ್ಥಾನಕ್ಕೆ ಹೋಗಿ ನಗರ ಸಾರಿಗೆ ಬಸ್ ನಿಲ್ದಾಣ ತಲುಪಲಿದೆ.








