ಕಾರ್ಕಳ: ಸೆಪ್ಟೆಂಬರ್ 05: ಉಷಾ ಜುವಲರ್ಸ್ ಮಾಲಕ ಕೆ. ಗಣಪತಿ ಆಚಾರ್ಯ (75) ಅವರು ಸೆ.5ರಂದು ಬೆಳಿಗ್ಗೆ ನಿಧನ ಹೊಂದಿದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಿಗ್ಗೆ ಕುಕ್ಕುಂದೂರು ಜಯಂತಿನಗರದಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.