ಉಡುಪಿ : ಸೆಪ್ಟೆಂಬರ್ 05:ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಇದೇ ತಿಂಗಳ ತಾರೀಕು 7ರ ಭಾನುವಾರದಂದು ಚಂದ್ರ ಗ್ರಹಣದ ಪ್ರಯುಕ್ತ ಗ್ರಹಣ ಶಾಂತಿಯನ್ನು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿದೆ…
ಪೂರ್ವಾಭದ್ರ ನಕ್ಷತ್ರ ಕುಂಭ ರಾಶಿಯಲ್ಲಿ ಚಂದ್ರನಿಗೆ ರಾಹುಕೃತ ಗ್ರಹಣವು ಸಂಭವಿಸಲಿದ್ದು, ಇದು ಖಗ್ರಾಸವಾಗಿ ಗೋಚರಿಸಲಿದೆ..
ಇದರಿಂದ ಶತಭಿಷಾ ನಕ್ಷತ್ರ ಪೂರ್ವಭಾದ್ರ ಉತ್ತರಭಾದ್ರ ಪುನರ್ವಸು ವಿಶಾಖ ನಕ್ಷತ್ರದವರಿಗು ಮೀನಾ ಕರ್ಕಾಟಕ ಕನ್ಯಾ ರಾಶಿಗಳವರಿಗೂ ಅರಿಷ್ಟವಿದೆ..
ಸರಿಸುಮಾರು ಮೂರುವರೆ ಗಂಟೆಗಳ ಕಾಲದ ಸುದೀರ್ಘ ಅವಧಿಯ ಈ ಗ್ರಹಣದ ಸ್ಪರ್ಶವು ರಾತ್ರಿ ಗಂಟೆ9.56, ಗ್ರಹಣದ ಮಧ್ಯಕಾಲವು ರಾತ್ರಿ ಗಂಟೆ 11.42 ಉನ್ಮಿಲನ 12.24 ಗ್ರಹಣ ಮೋಕ್ಷ ಕಾಲವು ರಾತ್ರಿ ಗಂಟೆ 1.26ಕ್ಕೆ ಆಗಲಿದೆ..
ಈ ಗ್ರಹಣ ಕಂಠಕ ಕಾಲದಲ್ಲಿ ಕ್ಷೇತ್ರದಲ್ಲಿ ಗ್ರಹಣ ಶಾಂತಿ ಹೋಮವನ್ನು ಸಾಮೂಹಿಕವಾಗಿ ಏರ್ಪಡಿಸಲಾಗಿದ್ದು ಗ್ರಹಣ ಕಾಲದಲ್ಲಿ ಜಪ, ಭಜನೆ ಸಂಕೀರ್ತನೆ, ದೇವರ ನಾಮಸ್ಮರಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ








