Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಶಾಂಘೈ ರಾಂಕಿಂಗ್ ಅಕಾಡೆಮಿಕ್ ರಾಂಕಿಂಗ್ ಆಫ್ ವರ್ಲ್ಡ್ ಯುನಿವರ್ಸಿಟೀಸ್ (ಎ ಆರ್ ಡಬ್ಲ್ಯೂ ಯು) 2025ರಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಗೆ ಸ್ಥಾನ..!!

Dhrishya News by Dhrishya News
21/08/2025
in ಸುದ್ದಿಗಳು
0
ಶಾಂಘೈ ರಾಂಕಿಂಗ್ ಅಕಾಡೆಮಿಕ್ ರಾಂಕಿಂಗ್ ಆಫ್ ವರ್ಲ್ಡ್ ಯುನಿವರ್ಸಿಟೀಸ್ (ಎ ಆರ್ ಡಬ್ಲ್ಯೂ ಯು) 2025ರಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಗೆ ಸ್ಥಾನ..!!
0
SHARES
8
VIEWS
Share on FacebookShare on Twitter

ಮಣಿಪಾಲ, ಆ. 21: ಮಾನ್ಯತೆ ಪಡೆದ ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಡೀಮ್ಡ್-ಟು-ಬಿ-ಯುನಿವರ್ಸಿಟಿಯಾಗಿರುವ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), 2025ರ ಶಾಂಘೈ ರಾಂಕಿಂಗ್ ಅಕಾಡೆಮಿಕ್ ರಾಂಕಿಂಗ್ ಆಫ್ ವರ್ಲ್ಡ್ ಯುನಿವರ್ಸಿಟೀಸ್ (ಎ ಆರ್ ಡಬ್ಲ್ಯೂ ಯು)ಯಲ್ಲಿ ತನ್ನ ಜಾಗತಿಕ ಶೈಕ್ಷಣಿಕ ಸ್ಥಾನಮಾನವನ್ನು ಮುಂದುವರಿಸಿಕೊಂಡು 801–900 ಬ್ಯಾಂಡ್‌ಗೆ ಏರಿಕೆಯಾಗಿದೆ. ವಿಶ್ವದಾದ್ಯಂತ 2,500 ಕ್ಕೂ ಹೆಚ್ಚು ಸಂಸ್ಥೆಗಳಿಂದ ಮೌಲ್ಯಮಾಪನಗೊಂಡ ವಿಶ್ವವಿದ್ಯಾಲಯಗಳಲ್ಲಿ ಮಾಹೆ ಅಗ್ರ 1,000ರಲ್ಲಿ ಸ್ಥಾನ ಪಡೆದಿದೆ. ಈ ಸಾಧನೆ ಬಹಳ‌ಮಹತ್ವದ್ದಾಗಿದ್ದು ಯಾಕೆಂದರೆ ಎ ಆರ್ ಡಬ್ಲ್ಯೂ ಯು 2025ರಲ್ಲಿ ಕೇವಲ 15 ಭಾರತೀಯ ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿದ್ದು, ಯಾವುದೇ ಸಂಸ್ಥೆಗಳಿಗೆ ಸ್ವಯಂ ವರದಿ ಮಾಡಲು ಯಾವುದೇ ಅವಕಾಶ ಇರಲಿಲ್ಲ . ವೆಬ್ ಆಫ್ ಸೈನ್ಸ್ (2020–2024)ನ ವಸ್ತುನಿಷ್ಠ ಸಂಶೋಧನಾ ಡೇಟಾದ ಆಧಾರದ ಮೇಲೆ ಮಾಹೆ ಈ ಪ್ರತಿಷ್ಠಿತ ಮಾನ್ಯತೆ ಪಡೆದಿದೆ.

ಈ ಸಾಧನೆಯ ಕುರಿತು ಮಾಹೆಯ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್, ವಿಎಸ್ಎಂ ( ನಿವೃತ್ತ ) ಅವರು ಹೇಳಿದರು:

“ಶಾಂಘೈ ರಾಂಕಿಂಗ್ ನಮ್ಮ ಈ ಪ್ರಗತಿ ಸಂಶೋಧನಾ ಶ್ರೇಷ್ಠತೆಯತ್ತ ನಮ್ಮ ಬದ್ಧತೆ ಮತ್ತು ಶೈಕ್ಷಣಿಕ ಉತ್ಪಾದನೆಯ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ. ಎ ಆರ್ ಡಬ್ಲ್ಯೂ ಯು ನಲ್ಲಿ ಸ್ಥಾನ ಪಡೆದಿರುವ ಕೇವಲ 15 ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವುದು ನಮ್ಮ ಸಂಶೋಧನಾ ಆಧಾರಿತ ಕಾರ್ಯವೈಖರಿಯನ್ನು ಸಮರ್ಥಿಸುತ್ತದೆ ಮತ್ತು ಮಾಹೆ ಜಾಗತಿಕ ಶೈಕ್ಷಣಿಕ ವಲಯದಲ್ಲಿ ಮುಂಚೂಣಿ ಸಂಸ್ಥೆಯಾಗಿ ಗುರುತಿಸಲು ಸಹಾಯ ಮಾಡುತ್ತದೆ.

ಮುಖ್ಯ ಅಂಶಗಳು

ರಾಂಕ್ ಬ್ಯಾಂಡ್: 801–90

 (2024ರಲ್ಲಿ ಇದ್ದ 901–1000ರಿಂದ ಏರಿಕೆ)

ಬಲವಾದ ಮಾನದಂಡಗಳು:

* ಪಿಯುಬಿ (ಸೈನ್ಸ್ ಸಿಟೇಶನ್ ಇಂಡೆಕ್ಸ್-ಎಕ್ಸ್‌ಪಾಂಡೆಡ್™ ಮತ್ತು ಸೋಶಿಯಲ್ ಸೈನ್ಸ್ ಸಿಟೇಶನ್ ಇಂಡೆಕ್ಸ್™ಗಳಲ್ಲಿ ಸೂಚಿಸಲಾದ ಪ್ರಕಟಣೆಗಳು): 32.6

* ಪಿಸಿಬಿ (ಪ್ರತಿ ವ್ಯಕ್ತಿಯ ಶೈಕ್ಷಣಿಕ ಸಾಧನೆ): 13.7

2024ರಲ್ಲಿ 901–1000 ಬ್ಯಾಂಡ್‌ನಿಂದ 2025ರಲ್ಲಿ 801–900 ಬ್ಯಾಂಡ್‌ಗೆ ಮಾಹೆ ಏರಿಕೆಯಾದುದು ಅದರ ಶೈಕ್ಷಣಿಕ ವಲಯದಲ್ಲಿರುವ ಬದ್ಧತೆಗೆ ಸಾಕ್ಷಿಯಾಗಿದ್ದು, ಅಂತರಾಷ್ಟ್ರೀಯ ಮಾನ್ಯತೆ ಮತ್ತು ಸಂಶೋಧನಾ ಉತ್ಪಾದನೆಯ ಹೆಚ್ಚಳವನ್ನು ತೋರಿಸುತ್ತದೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಕುರಿತು:

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಕುರಿತು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದು ಇನ್ಸ್ಟಿಟ್ಯೂಷನ್ ಆಫ್ ಎಮಿನಾನ್ಸ್ ಸ್ಥಾನಮಾನ ಪಡೆದ ಡೀಮ್‌ಡ್-ಟು-ಬಿ ಯೂನಿವರ್ಸಿಟಿ ಆಗಿದೆ. ಹೆಲ್ತ್ ಸೈನ್ಸ್, ಮ್ಯಾನೇಜ್ಮೆಂಟ್ ಲಾ, ಹ್ಯುಮಾನಿಟೀಸ್ ಮತ್ತು ಸೋಶಿಯಲ್ ಸೈನ್ಸ್, ಹಾಗೂ ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ 400 ಕ್ಕಿಂತ ಹೆಚ್ಚಿನ ವಿಶೇಷತೆಗಳನ್ನು ಮಾಹೆ ತನ್ನ ಅಂಗ ಸಂಸ್ಥೆಗಳ ಮೂಲಕ ಮಣಿಪಾಲ, ಮಂಗಳೂರು, ಬೆಂಗಳೂರು, ಜಮ್ಶೇದ್ ಪುರ ಹಾಗೂ ದುಬೈ ನ ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಶ್ರೇಷ್ಠ ಶೈಕ್ಷಣಿಕ ದಾಖಲಾತಿ, ಆಧುನಿಕ ಮೂಲಸೌಕರ್ಯ, ಮತ್ತು ಪ್ರಮುಖ ಸಂಶೋಧನಾ ಕೊಡುಗೆಗಳೊಂದಿಗೆ ಮಾಹೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಮತ್ತು ಗೌರವ ಗಳಿಸಿದೆ. ಅಕ್ಟೋಬರ್ 2020ರಲ್ಲಿ ಭಾರತದ ಶಿಕ್ಷಣ ಸಚಿವಾಲಯ ಮಾಹೆ ಗೆ ಇನ್ಸ್ಟಿಟ್ಯೂಷನ್ ಆಫ್ ಎಮಿನೆನನ್ಸ್ ಸ್ಥಾನಮಾನ ನೀಡಿತು. ಪ್ರಸ್ತುತ ನ್ಯಾಷನಲ್ ಇನ್ಸ್ಟಿಟ್ಯೂಷನ್ ಆಫ್ ರ‍್ಯಾಂಕಿಂಗ್ ಫ್ರೇಮ್ವರ್ಕ್ (ಎನ್ಐಆರ್‌ಎಫ್) ನಲ್ಲಿ ಮಾಹೆ ನಾಲ್ಕನೇ ಸ್ಥಾನದಲ್ಲಿ ಇದೆ . ಬದಲಾವಣೆಯ ಶಿಕ್ಷಣ ಹಾಗೂ ಸಮೃದ್ಧ ಕ್ಯಾಂಪಸ್ ಜೀವನಕ್ಕಾಗಿ ವಿದ್ಯಾರ್ಥಿಗಳ ಅಗ್ರ ಆಯ್ಕೆ ಮಾಹೆ ಆಗಿದ್ದು, ದೇಶೀಯ ಮತ್ತು ಅಂತರಾಷ್ಟ್ರೀಯ ಕಂಪನಿಗಳಿಗೂ ಶ್ರೇಷ್ಠ ಪ್ರತಿಭೆಗಳ ತಾಣವಾಗಿ ಮಾಹೆ ಗುರುತಿಸಲ್ಪಟ್ಟಿದೆ.

Previous Post

ಕಾರ್ಕಳ : ಕಾರಿನಲ್ಲಿ ಪೆಟ್ರೋಲ್ ಸೋರಿಕೆಯಿಂದಾಗಿ ಹೊತ್ತಿ ಉರಿದ ಕಾರು..!!

Next Post

ಉಡುಪಿ ದೊಡ್ಡಣಗುಡ್ಡೆ ಶ್ರೀ ಚಕ್ರ ಪೀಠ ಸುರಪೂಜಿತೆಯ ಸನ್ನಿಧಾನದಲ್ಲಿ ಸೋಣೆ ತಿಂಗಳ ವಿಶೇಷ ಸೇವೆಯಾದ ಸೋಣಾರತಿ ಸೇವೆ ಇಂದಿನಿಂದ ಆರಂಭ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಉಡುಪಿ ದೊಡ್ಡಣಗುಡ್ಡೆ ಶ್ರೀ ಚಕ್ರ ಪೀಠ ಸುರಪೂಜಿತೆಯ ಸನ್ನಿಧಾನದಲ್ಲಿ ಸೋಣೆ ತಿಂಗಳ ವಿಶೇಷ ಸೇವೆಯಾದ ಸೋಣಾರತಿ ಸೇವೆ ಇಂದಿನಿಂದ ಆರಂಭ..!!

ಉಡುಪಿ ದೊಡ್ಡಣಗುಡ್ಡೆ ಶ್ರೀ ಚಕ್ರ ಪೀಠ ಸುರಪೂಜಿತೆಯ ಸನ್ನಿಧಾನದಲ್ಲಿ ಸೋಣೆ ತಿಂಗಳ ವಿಶೇಷ ಸೇವೆಯಾದ ಸೋಣಾರತಿ ಸೇವೆ ಇಂದಿನಿಂದ ಆರಂಭ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಡಬ: ಔಷಧ ಸೇವನೆಯ ಬಳಿಕ ಬಾಲಕನ ಸಂಶಯಾಸ್ಪದ ಸಾವು….!

ಕಡಬ: ಔಷಧ ಸೇವನೆಯ ಬಳಿಕ ಬಾಲಕನ ಸಂಶಯಾಸ್ಪದ ಸಾವು….!

19/03/2026
ಅಕ್ರಮ ಜಾನುವಾರು ವಧೆ ಶೆಡ್ ಮೇಲೆ ದಾಳಿ: 9 ಜಾನುವಾರು ರಕ್ಷಣೆ, 205 ಕೆ.ಜಿ. ಮಾಂಸ ವಶ….!

ಅಕ್ರಮ ಜಾನುವಾರು ವಧೆ ಶೆಡ್ ಮೇಲೆ ದಾಳಿ: 9 ಜಾನುವಾರು ರಕ್ಷಣೆ, 205 ಕೆ.ಜಿ. ಮಾಂಸ ವಶ….!

19/03/2026
ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ….!

ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ….!

19/03/2026
ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ತೋಳಗಳ ಮೊದಲ ಸಂತಾನೋತ್ಪತ್ತಿ…!

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ತೋಳಗಳ ಮೊದಲ ಸಂತಾನೋತ್ಪತ್ತಿ…!

19/03/2026

Recent News

ಕಡಬ: ಔಷಧ ಸೇವನೆಯ ಬಳಿಕ ಬಾಲಕನ ಸಂಶಯಾಸ್ಪದ ಸಾವು….!

ಕಡಬ: ಔಷಧ ಸೇವನೆಯ ಬಳಿಕ ಬಾಲಕನ ಸಂಶಯಾಸ್ಪದ ಸಾವು….!

19/03/2026
ಅಕ್ರಮ ಜಾನುವಾರು ವಧೆ ಶೆಡ್ ಮೇಲೆ ದಾಳಿ: 9 ಜಾನುವಾರು ರಕ್ಷಣೆ, 205 ಕೆ.ಜಿ. ಮಾಂಸ ವಶ….!

ಅಕ್ರಮ ಜಾನುವಾರು ವಧೆ ಶೆಡ್ ಮೇಲೆ ದಾಳಿ: 9 ಜಾನುವಾರು ರಕ್ಷಣೆ, 205 ಕೆ.ಜಿ. ಮಾಂಸ ವಶ….!

19/03/2026
ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ….!

ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ….!

19/03/2026
ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ತೋಳಗಳ ಮೊದಲ ಸಂತಾನೋತ್ಪತ್ತಿ…!

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ತೋಳಗಳ ಮೊದಲ ಸಂತಾನೋತ್ಪತ್ತಿ…!

19/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved