ಉಡುಪಿ: ಆಗಸ್ಟ್ 22:ಶ್ರೀ ಚಕ್ರ ಪೀಠ ಸುರಪೂಜಿತೆಯ ಸನ್ನಿಧಾನದಲ್ಲಿ ಸೋಣೆ ತಿಂಗಳ ವಿಶೇಷ ಸೇವೆಯಾದ ಸೋಣಾರತಿ ಸೇವೆ ಇಂದು ಶುಕ್ರವಾರದಿಂದ ಅಂದರೆ ತಾರೀಕು 22. 8. 2025 ರಿಂದ ಆರಂಭವಾಗಿದೆ…
ಮೌಡ್ಯತೆಯನ್ನು ಕಳೆದು ಚೈತನ್ಯಶಕ್ತಿಯನ್ನು ತುಂಬಿಸುವ ಈ ವಿಶೇಷವಾದ ಮರದಿಂದ ತಯಾರಿಸಲಾದಂತಹ ಆರತಿಯನ್ನು ಶ್ರೀ ದುರ್ಗಾ ಆದಿಶಕ್ತಿಗೆ ಬೆಳಗಿಸುವರೇ ಭಕ್ತರಿಗೆ ಅವಕಾಶವನ್ನು ನೀಡಲಾಗಿದೆ…
ದಿನಂಪ್ರತಿ ಒಂದು ಆರತಿ ಹಾಗೂ ಶುಕ್ರವಾರದಂದು ಮಧ್ಯಾಹ್ನ 5 ಆರತಿ ಹಾಗೂ ರಾತ್ರಿಯ ಕಲ್ಪೋಕ್ತ ಪೂಜೆಯಲ್ಲಿ 16 ಆರತಿಗಳನ್ನು ಬೆಳಗಲಾಗುತ್ತದೆ..
ಈ ಸೋಣಾರತಿಯ ಸೇವೆಯ ದರ.. ಒಂದು ಆರತಿಗೆ ರೂಪಾಯಿ 150 /
ಶುಕ್ರವಾರದ 16 ಆರತಿಗೆ ಒಂದು ಸಾವಿರ ರೂಪಾಯಿಗಳು.Rs.
1000/
ಶುಕ್ರವಾರದ ಮಧ್ಯಾಹ್ನದ ಆರತಿಗೆ
Rs. 450/
ಸೇವೆ ನೀಡಲಿಚ್ಚಿಸುವವರು ಗೂಗಲ್ ಪೇ ಮುಖಾಂತರ ಹಣವನ್ನು ಪಾವತಿಸಿ ತಮ್ಮ ಹೆಸರು ರಾಶಿ ನಕ್ಷತ್ರವನ್ನು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ಅವರ ಮೊಬೈಲ್ ಸಂಖ್ಯೆಗೆ ಕಳುಹಿಸಬೇಕಾಗಿ ಕ್ಷೇತ್ರದ ಪ್ರಕಟಣೆ ತಿಳಿಸಿದೆ ಹೆಚ್ಚಿನ ಮಾಹಿತಿ ಗಾಗಿ ಸಂಪರ್ಕಿಸಿ 9352749650








