ಉಡುಪಿ : ಆಗಸ್ಟ್ 19:ಕೆಂಪುಕಲ್ಲು ಮರಳು ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ ಮುಂದೆ ಕಟ್ಟಡ ಕಾರ್ಮಿಕರಿಂದ ಅನಿರ್ದಿಷ್ಟಾವಾದಿ ಹೋರಾಟ ನಿನ್ನೆ ಆರಂಭಗೊಂಡಿದೆ
ಕಾರ್ಮಿಕರ ಬೇಡಿಕೆ ಗಳು ಹೀಗಿವೆ
1.ಜಿಲ್ಲೆಯಲ್ಲಿರುವ ಕೆಂಪು ಕಲ್ಲು ಅಥವ ಮುರುಕಲ್ಲು ಎಂದು ಕರೆಯಲ್ಪಡುವ ಲ್ಯಾಟರೈಟ್ ಕೋರೆಗಳಿಗೆ ಅಪಾಯವಿಲ್ಲದ ಸ್ಥಳಗಳಲ್ಲಿ ಪರವಾನಿಗೆ ನೀಡಬೇಕು
2. ಕೇರಳ ಮಾದರಿಯಲ್ಲಿ ರಾಜಧನ ಅಥವ ರಾಯಲ್ಲಿ ಪ್ರತೀ ಟನ್ 76 ರೂ. ಮಾತ್ರ ಪಾವತಿಸಲು ಅವಕಾಶ ನೀಡಬೇಕು. ಈಗ ಇರುವ ಬೇರೆ ಬೇರೆ ತೆರಿಗೆಗಳನ್ನು ಕೈ ಬಿಡಬೇಕು
3. ಆರು ತಿಂಗಳಿಗೊಮ್ಮೆ ಪರವಾನಿಗೆ ನವೀಕರಿಸುವುದನ್ನು ಕೈ ಬಿಟ್ಟು ವರ್ಷಕ್ಕೊಮ್ಮೆ ನವೀಕರಿಸಲು ಅವಕಾಶ ನೀಡಬೇಕು. ಇದರಿಂದ ಅನಧಿಕೃತ ವ್ಯವಹಾರ ತಡೆಯಲು ಸಾಧ್ಯವಾಗುತ್ತದೆ.
4.ಉಡುಪಿ ಜಿಲ್ಲೆಯಲ್ಲಿ ಕೆಂಪು ಕಲ್ಲು ದೊರಕುವ ಕೋರೆಗಳು ಕಡಿಮೆ ಇರುವುದರಿಂದ ದಕ್ಷಿಣ ಕನ್ನಡ ಕೋರೆಗಳಿಂದ ಬರುವ ಕೆಲವು ಕಲ್ಲುಗಳಿಗೆ ನಿರ್ಬಂಧ ಹೇರಬಾರದು.
5. ಕೆಂಪು ಕಲ್ಲು ದುಬಾರಿ ದರದಲ್ಲಿ ವಿತರಣೆ ಮಾಡುವವರ ಮೇಲೆ ಕ್ರಮ ಜರುಗಿಸಬೇಕು ಈ ಹಿಂದಿನ ದರದಂತೆ ಕಲ್ಲು ಜನರಿಗೆ ಸಿಗುವಂತಾಗಬೇಕು.
6.ಕೆಲವು ಕಲ್ಲು ಮರಳು ಸಮಸ್ಯೆ ಬಗೆಹರಿಸಲು ಮಾನ್ಯ ಜಿಲ್ಲಾಧಿಕಾರಿ ದರದಂತೆ ಕಲ್ಲು ಜನರಿಗೆ ಸಿಗುವಂತಾಗಬೇಕು.
6.ಕೆಲವು ಕಲ್ಲು ಮರಳು ಸಮಸ್ಯೆ ಬಗೆಹರಿಸಲು ಮಾನ್ಯ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಗಣಿ ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರ ಜೊತೆ ಜಂಟಿ ಸಭೆ ನಡೆಸಲು ಸಮಯ ನಿಗದಿ ಗೊಳಿಸಬೇಕು








