ಬ್ರಹ್ಮಾವರ: ಆಗಸ್ಟ್ 16: ಬ್ರಹ್ಮಾವರ ಹಾವಂಜೆ ಗ್ರಾಮದ ಕೀಳಿಂಜೆ ಪರಿಸರದಲ್ಲಿ ಚಿರತೆ ಹಾವಳಿ ಹೆಚ್ಚಿದ್ದು. ಯಶೋಧ ಶೆಟ್ಟಿ ದನದ ಕೊಟ್ಟಿಗೆಯಲ್ಲಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿದಾಗ ಮನೆ ಮಾಲಿಕೆ ಯಶೋಧ ಶೆಟ್ಟಿಯವರು. ಬೊಬ್ಬೆ ಹೊಡೆದಾಗ. ಚಿರತೆ ದನದ ಕೊಟ್ಟಿಯಿಂದ ಹೊರಗೆ ಕಾಡಿನತ್ತ ಓಡಿ ಹೋಗಿದೆ ಕರುವಿನ ಮೇಲೆ ಪರಚಿದ ಗಾಯಗಳಿವೆ ಕರು ಅಪಾಯದಿಂದ ಪಾರಾಗಿದೆ.
ಯಶೋಧಶೆಟ್ಟಿಯವರ ಮನೆಯ ಎರಡುಕೋಳಿ. ಹಾಗೂ ಪಕ್ಕದ ಮನೆಯವರ ಜಯಶೆಟ್ಟಿ ಬನ್ನಂಜೆಯವರ ಮೂರು ಅಂಕದ ಕೋಳಿಗಳು ಆಹಾರವಾಗಿ ಚಿರತೆಯ ಪಾಲಾಗಿದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿರುವುದರಿಂದ ಬ್ರಹ್ಮಾವರ ಅರಣ್ಯ ಪಾಲಕರು. ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಘಟನೆ ಇಂದು ಬೆಳಿಗ್ಗೆ ನಡೆದಿದೆ.








