ಉಡುಪಿ:ಆಗಸ್ಟ್ 14:ಶ್ರೀ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಪ್ರಯುಕ್ತ ಆಗಸ್ಟ್ 1 ರ ಬ್ರಾಹ್ಮೀ ಸುಮೂಹರ್ತದಲ್ಲಿ ವಿವಿಧ ಯೋಗಬಂಧುಗಳ ಹಾಗೂ ಶ್ರೀ ಕೃಷ್ಣ ಭಕ್ತರ ಉಪಸ್ಥಿತಿಯಲ್ಲಿ ಸೂರ್ಯಮಂಡಲ ನಮಸ್ಕಾರ(48) ಹಾಗೂ ಪರ್ಯಾಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಉಪದೇಶಿಸಲ್ಪಟ್ಟ ಶ್ರೀ ಕೃಷ್ಣ ಜಪಮಂತ್ರವಾದ ಸ್ವಾಮಿ ಶ್ರೀ ಕೃಷ್ಣಾಯ ನಮ: ನಮ್ಮ ಜಿಲ್ಲೆ/ರಾಜ್ಯ/ದೇಶ/ವಿದೇಶಗಳಲ್ಲೂ ಉತ್ತಮ ಸ್ಪಂದನೆ ದೊರೆತಿದ್ದು, ಅಂಕಿ-ಅಂಶ ತಜ್ಞರ ಪ್ರಕಾರ ಒಂದು ಮಂಡಲ(48 ದಿನ) ಪೂರ್ಣಗೊಳ್ಳುವಾಗ ದಶಕೋಟಿ ಸಂಖ್ಯೆಯ ಸನಿಹಕ್ಕೆ ತಲಪುವ ಮಾಹಿತಿಯಿದೆ.
ಚಾಂದ್ರ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪರ್ಯಾಯ ಶ್ರೀ ಗಳವರು ಹಾಗೂ ಆಯೋದ್ಯೆ ರಾಮ ಮಂದಿರ ಟ್ರಸ್ಟ್ ನ ಶ್ರೀ ಗೋವಿಂದ ಗಿರಿದೇವ ಸ್ವಾಮೀಜಿ ಮಹಾರಾಜರ ಉಪಸ್ಥಿತಿಯಲ್ಲಿ ಆಗಸ್ಟ್ 15ರಂದು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಬೆಳಿಗ್ಗೆ 11.15- 12.15 ಸಾಮೂಹಿಕ 1008 ಬಾರಿ ಶ್ರೀ ಕೃಷ್ಣ ಮಂತ್ರ ಜಪ ಪಠಣ ಹಾಗೂ ಭೋಜನ ಪ್ರಸಾದ ವಿತರಣೆ ನಡೆಯಲಿದ್ದು ಶ್ರೀ ಕೃಷ್ಣ ಭಕ್ತಾಭಿಮಾನಿಗಳು ಮನೆ ಮಂದಿ ಯೊಂದಿಗೆ ಸಾಂಪ್ರದಾಯಿಕ ಶೈಲಿಯ ವಸ್ತ್ರದಾರಣೆಯೊಂದಿಗೆ ಹಾಜರಾಗಲು ವಿನಂತಿ. ಪರ್ಯಾಯ ಪುತ್ತಿಗೆ ಮಠದ ಪ್ರಕಟಣೆ ತಿಳಿಸಿದೆ
ವಿ.ಸೂ. :ಪುರುಷರು ಬಿಳಿ ಪಂಚೆ+ಅಂಗಿ,
ಮಹಿಳೆಯರು ಕೇಸರಿ/ಹಸಿರು ಬಣ್ಣದ ಸೀರೆ/ಚೂಡಿದಾರ ದರಿಸಿದರೆ ಉತ್ತಮ.. ಖಡ್ಡಾಯವಿಲ್ಲ








