ಉಡುಪಿ :ಆಗಸ್ಟ್ 11 : 2024-25 ಸಾಲಿನಲ್ಲಿ ಜಿಲ್ಲಾ ಉದ್ಯಮ ಕೇಂದ್ರ ಹಾಗೂ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ ಗ್ರಾಮೀಣ ಪ್ರದೇಶದ ವೃತ್ತಿನಿರತ ಕುಶಲಕರ್ಮಿಗಳಿಗೆ ಗರಿಷ್ಠ 8000 ವರೆಗೆ ಉಚಿತ ಸುಧಾರಿತ ಉಪಕರಣಗಳು ಕಾಪು ಕ್ಷೇತ್ರದ 67 ಫಲಾನುಭವಿಗಳಿಗೆ ಮಂಜೂರಾಗಿದ್ದು ಇಂದು ದಿನಾಂಕ 11-08-2025 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ತಮ್ಮ ಕಾಪು ಶಾಸಕರ ಕಚೇರಿಯಲ್ಲಿ ಸಾಂಕೇತಿಕವಾಗಿ 9 ಫಲಾನುಭವಿಗಳಿಗೆ ವಿತರಿಸಿದರು.








