ಉಡುಪಿ:ಆಗಸ್ಟ್ 10:ಬದಲಾಗುತ್ತಿರುವ ಕಾಲಘಟ್ಟದಲ್ಲಿ ಭಾರತೀಯ ಸನಾತನ ಸಂಸ್ಕೃತಿಯ ಉಳಿವಿನ ಅವಶ್ಯಕತೆಯನ್ನು ಮನಗಂಡ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, “ಸ್ತ್ರೀ ಒಬ್ಬಳು ಸಂಸ್ಕಾರವಂತಳಾದರೆ ಇಡೀ ಕುಟುಂಬವೇ ಸಂಸ್ಕಾರದಿಂದ ಕೂಡಿರುತ್ತದೆ” ಎಂದು *ಶ್ರೀ ಪುತ್ತಿಗೆ ಮಹಿಳಾ ವಿದ್ಯಾಪೀಠ* ವನ್ನು ಪ್ರಾರಂಭಿಸಲು ಸಂಕಲ್ಪಿಸಿರುತ್ತಾರೆ..
ಇದರ ಉದ್ಘಾಟನಾ ಸಮಾರಂಭವು ಗೀತಾ ಮಂದಿರದಲ್ಲಿ ಅದಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಕೇಂದ್ರ ವಿತ್ತ ಸಚಿವೆಯಾದ *ಶ್ರೀಮತಿ ನಿರ್ಮಲಾ ಸೀತಾರಾಮನ್* ಅವರಿಂದ ದೀಪ ಪ್ರಜ್ವಲನೆ ಮಾಡುವ ಮೂಲಕ ನೆರವೇರಿತು.
ಈ ಸಂದರ್ಭದಲ್ಲಿ ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯ, ಅಂತರಾಷ್ಟ್ರೀಯ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ಶ್ರೀ ರತೀಶ್ ತಂತ್ರಿ, ಕೋಟಿ ಗೀತಾ ಲೇಖನ ಯಜ್ಞದ ಶ್ರೀ ಅನಂತ ಕೃಷ್ಣಪ್ರಸಾದ್ ಹಾಗೂ ಮಹಿಳಾ ವಿದ್ಯಾಪೀಠದ ಸಂಯೋಜಕರಾದ ಶ್ರೀಮತಿ ಉಮಾ ಪ್ರಸಾದ್, ಶ್ರೀಮತಿ ಪದ್ಮಜಾ ರಾಮಪ್ರಿಯ ಅವರು ಉಪಸ್ಥಿತರಿದ್ದರು.








