ನವದೆಹಲಿ:ಆಗಸ್ಟ್ 09 :ಪ್ರಧಾನಿ ಮೋದಿಯವರ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನಿಂದ ಆಕಾಶವಾಣಿಗೆ 34.13 ಕೋಟಿ ಆದಾಯ ಬಂದಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಎಲ್.ಮುರುಗನ್ ತಿಳಿಸಿದ್ದಾರೆ.
ರಾಜ್ಯಸಭೆಗೆ ಈ ಕುರಿತಾಗಿ ಮಾಹಿತಿ ನೀಡಿದ ಸಚಿವರು, ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಆಕಾಶವಾಣಿಯು ಯೂಟ್ಯೂಬ್ ಸೇರಿ ವಿವಿಧ ಡಿಜಿಟಲ್ ರೂಪದ ವೇದಿಕೆಗಳಲ್ಲಿ ಪ್ರಸಾರ ಮಾಡುತ್ತಿದೆ. 2014ರ ಅಕ್ಟೋಬರ್ ನಿಂದ ಆರಂಭವಾದ ‘ಮನ್ ಕಿ ಬಾತ್’ ಬಾನುಲಿ ಕಾರ್ಯಕ್ರಮ ಇದುವರೆಗೆ 126 ಆವೃತ್ತಿ ಕಂಡಿದೆ. ‘ಮನ್ ಕಿ ಬಾತ್’ನಿಂದ 34.13 ಕೋಟಿ ಆದಾಯವನ್ನು ಆಕಾಶವಾಣಿ ಗಳಿಸಿದೆ ಎಂದು ಹೇಳಲಾಗಿದೆ.
ಪ್ರತಿ ತಿಂಗಳ ಕೊನೆಯ ಭಾನುವಾರ ಆಕಾಶವಾಣಿಯಲ್ಲಿ ‘ಮನ್ ಕಿ ಬಾತ್’ ನಲ್ಲಿ ಪ್ರಧಾನಿ ಮೋದಿ ದೇಶದ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.








