Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಮಾಹೆ: ಎರಡು ದಿನದ ವಿಜ್ಞಾನ ವಿಚಾರ ಸಂಕಿರಣ ರಸಾಯನ 21ರಲ್ಲಿ ವಿಶ್ವದ ಪ್ರಮುಖ ವಿಜ್ಞಾನಿಗಳು ಭಾಗಿ..!!

Dhrishya News by Dhrishya News
02/08/2025
in ಮುಖಪುಟ
0
ಮಾಹೆ: ಎರಡು ದಿನದ ವಿಜ್ಞಾನ ವಿಚಾರ ಸಂಕಿರಣ ರಸಾಯನ 21ರಲ್ಲಿ ವಿಶ್ವದ ಪ್ರಮುಖ ವಿಜ್ಞಾನಿಗಳು ಭಾಗಿ..!!
0
SHARES
6
VIEWS
Share on FacebookShare on Twitter
  • ಅಂತರ್ ಶಿಸ್ತೀಯ ಸಂಶೋಧನೆಯ ಮಿತಿಗಳನ್ನು ಅನ್ವೇಷಿಸುವ ಅಂಗವಾಗಿ ಭಾರತ ಮತ್ತು ವಿದೇಶಗಳಿಂದ 200ಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿಕೆ.
  • ವಿಜ್ಞಾನ ಮತ್ತು ಸಮಾಜಕ್ಕೆ ನೀಡಿದ ಅಗ್ರಗಣ್ಯ ಕೊಡುಗೆಗಳಿಗಾಗಿ 36 ವಿಜ್ಞಾನಿಗಳಿಗೆ ಸಿ ಆರ್ ಎಸ್ ಪ್ರಶಸ್ತಿ ನೀಡಿ ಗೌರವ.
  • ಈ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಐ ಯು ಪಿ ಎ ಸಿ ಅಧ್ಯಕ್ಷ ಪ್ರೊ. ಎಹೂದ್ ಕೀನನ್ ಅವರ ಆನ್ಲೈನ್ ಉಪಸ್ಥಿತಿ.

ಮಣಿಪಾಲ್: ಆಗಸ್ಟ್ 2: ಮಣಿಪಾಲ ಡೀಮ್ಡ್ ಟು ಬಿ ಯೂನಿವರ್ಸಿಟಿಯ ಒಂದು ಭಾಗವಾಗಿರುವ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಂಸ್ಥೆಯಲ್ಲಿ ಎರಡು ದಿನಗಳ ಅಂತರಾಷ್ಟ್ರೀಯ ವಿಜ್ಞಾನ ವಿಚಾರ ಸಂಕಿರಣ ಸೈನ್ಸ್ ಬಿಯಾಂಡ್ ಬೌಂಡರಿ: ಇನ್‌ವೆನ್ಷನ್, ಡಿಸ್ಕವರಿ, ಇನೋವೇಷನ್ ಅಂಡ್ ಸೊಸೈಟಿ – ರಸಾಯನ್ 21” ಯಶಸ್ವಿಯಾಗಿ ಉದ್ಘಾಟನೆಗೊಂಡಿತು. ಮಾಹೆ ಮತ್ತು ಚಿರಂತನ ರಸಾಯನ್ ಸಂಸ್ಥೆ (ಸಿ ಆರ್ ಎಸ್) ಜಂಟಿಯಾಗಿ ಆಯೋಜಿಸಿದ ಈ ಎರಡು ದಿನಗಳ ಸಮ್ಮೇಳನವು 200ಕ್ಕೂ ಹೆಚ್ಚು ವಿಶ್ವಪ್ರಸಿದ್ಧ ವಿಜ್ಞಾನಿಗಳನ್ನು, ಸಂಶೋಧಕರನ್ನು ಮತ್ತು ಚಿಂತಕರನ್ನು ಸಂವಹನಾತ್ಮಕ ಸಂಶೋಧನೆಗಳ ಮೂಲಕ ಜಾಗತಿಕ ಸವಾಲುಗಳಿಗೆ ಪರಿಹಾರ ಹುಡುಕಲು ಒಟ್ಟಿಗೆ ಸೇರುವಂತೆ ಮಾಡಿತು.

ಮಾಹೆ ಕುಲಪತಿ ಲೆಫ್ಟನಂಟ್ ಜನರಲ್ ಡಾ. ಎಂ. ಡಿ. ವೆಂಕಟೇಶ್, ವಿ ಎಸ್ ಎಮ್ (ನಿವೃತ್ತ), ವಿಚಾರ ಸಂಕಿರಣವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಸಮಾರಂಭದಲ್ಲಿ ಐಸಿಟಿ ಮುಂಬಯಿ ಕುಲಾಧಿಪತಿ ಪ್ರೊ. ಜೆ.ಬಿ. ಜೋಶಿ, ಬಿ ಐ ಟಿ ಎಸ್ ಪಿಲಾನಿಯ ಕುಲಪತಿ ಪ್ರೊ. ರಾಮ್‌ಗೋಪಾಲ್ ರಾವ್, ಥಾಯ್ಲ್ಯಾಂಡ್ ಕೆಮಿಕಲ್ ಸೊಸೈಟಿಯ ಅಧ್ಯಕ್ಷ ಪ್ರೊ. ವುಧಿಚೈ ಪರಸುಕ್, ಮಣಿಪಾಲ್ ಅಪ್ಲೈಡ್ ಫಿಸಿಕ್ಸ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕರೂ ಹಾಗೂ ಸಂಯೋಜಕರೂ ಆಗಿರುವ ಪ್ರೊ. ಸಾಜನ್ ಡಿ. ಜಾರ್ಜ್, ಸಿ ಆರ್ ಎಸ್ ಕಾರ್ಯದರ್ಶಿ ಪ್ರೊ. ಸಿ.ವಿ. ಯೆಲಮಗ್ಗಡ, ಹಾಗೂ ಸಿ ಆರ್ ಎಸ್ ಅಧ್ಯಕ್ಷ ಪ್ರೊ. ಬ್ರಜ ಗೋಪಾಲ್ ಬಾಗ್ ಮೊದಲಾದವರು ಉಪಸ್ಥಿತರಿದ್ದರು.

ಭಾರತ ಸರ್ಕಾರದ ಪ್ರಮುಖ ವಿಜ್ಞಾನ ಸಲಹೆಗಾರರಾದ ಪ್ರೊ. ಅಜಯ್ ಕುಮಾರ್ ಸೂದ್ ಅವರ ವಿಶೇಷ ಬೆಂಬಲ ಸಂದೇಶವನ್ನು ಸ್ವೀಕರಿಸಲಾಯಿತು. ಅವರು “ವಿಜ್ಞಾನವು ಗಡಿಗಳನ್ನು ಮೀರಿದಾಗ ಅಭಿವೃದ್ಧಿ ಹೊಂದುತ್ತದೆ. ಅಲ್ಲಿ ಆವಿಷ್ಕಾರವು ಸಾಧ್ಯತೆಯನ್ನು ಪರಿವರ್ತಿಸುತ್ತದೆ, ಅನ್ವೇಷಣೆಯು ಜ್ಞಾನವನ್ನು ವಿಸ್ತರಿಸುತ್ತದೆ ಮತ್ತು ನಾವಿನ್ಯತೆಯ ಆವಿಷ್ಕಾರವು ಪ್ರಗತಿಗೆ ಉತ್ತೇಜನ ನೀಡುತ್ತದೆ” ಇಂದು ಹೇಳಿದರು. ಅವರು ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿಸಲು ವೈಜ್ಞಾನಿಕ ಸಂಶೋಧನೆ, ತಂತ್ರಜ್ಞಾನ, ಆವಿಷ್ಕಾರ ಮತ್ತು ಸಂಶೋಧನೆ (ಎಸ್ ಟಿ ಐ ಆರ್) ನ್ನು ಏಕೀಕೃತವಾಗಿ ಬಳಸುವ ನಿಟ್ಟಿನಲ್ಲಿ ರೂಪಿಸಲಾದ ರಾಷ್ಟ್ರಮಟ್ಟದ ಮಾರ್ಗನಕ್ಷೆಯನ್ನು ಪುನರುಚ್ಚರಿಸಿದರು.

ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ, ಇಂಟರ್‌ನ್ಯಾಷನಲ್ ಯೂನಿಯನ್ ಆಫ್ ಪ್ಯೂರ್ ಅಂಡ್ ಅಪ್ಪ್ಲೈಡ್ ಕೆಮಿಸ್ಟ್ರಿ (ಐಯು ಪಿ ಎ ಸಿ) ಅಧ್ಯಕ್ಷರಾದ ಪ್ರೊ. ಏಹುಡ್ ಕೀನನ್ ರವರು ದೂರವಾಣಿ ಮೂಲಕ ಮಾತನಾಡಿದರು. ಅವರು ಸಭಿಕರಿಗೆ ವೈಜ್ಞಾನಿಕ ಸಂಶೋಧನೆಗಳು ಶಿಸ್ತಿನ ಮತ್ತು ಭೌಗೋಳಿಕ ರಾಜಕೀಯ ಗಡಿಗಳನ್ನು ಮೀರಿ ಕಾರ್ಯನಿರ್ವಹಿಸಿದಾಗ ಉಂಟಾಗುವ ಪರಿವರ್ತನಾ ಸಾಮರ್ಥ್ಯದ ಕುರಿತು ಬೆಳಕು ಚೆಲ್ಲಿದರು.

ಈ ಸಮ್ಮೇಳನವು ಶ್ರೇಷ್ಠ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಹಂಚಿಕೊಳ್ಳುವ ಉತ್ಕೃಷ್ಟ ವೇದಿಕೆಯಾಗಿದ್ದು, ಶಾಸ್ತ್ರೀಯ ಅಂಕಣಗಳ ಪಾರಮ್ಯವನ್ನು ಮೀರಿ ಜಾಗತಿಕ ಸಮಸ್ಯೆಗಳಾದ ಹವಾಮಾನ ಮತ್ತು ಶಕ್ತಿಯಿಂದ ತೊಡಗಿ ಆಹಾರ ಆರೋಗ್ಯ ಮತ್ತು ಸುಸ್ಥಿರ ತಂತ್ರಜ್ಞಾನಗಳಿಗೆ ಪರಿಹಾರ ನೀಡುವ ಗುರಿಯೊಂದಿಗೆ ವಿಜ್ಞಾನಿಗಳು, ಆವಿಷ್ಕಾರಕಾರರು, ಉದ್ಯಮದ ತಜ್ಞರು ಹಾಗೂ ನೀತಿ ನಿರ್ಮಾಣಕರ ನಡುವೆ ಸಹಯೋಗವನ್ನು ಬೆಂಬಲಿಸುವಲ್ಲಿ ಸಹಾಯ ಮಾಡಿತು.

ಸಿ ಆರ್ ಎಸ್ ಪ್ರಶಸ್ತಿ ಪ್ರದಾನ
ರಸಾಯನ್ 21 ಸಮ್ಮೇಳನದ ಪ್ರಮುಖ ಭಾಗವೆಂದರೆ ಸಿ ಆರ್ ಎಸ್ ಪ್ರಶಸ್ತಿ ಪ್ರದಾನ ಸಮಾರಂಭ. ಈ ಸಂದರ್ಭದಲ್ಲಿ ವಿವಿಧ ವಿಶ್ವವಿದ್ಯಾಲಯಗಳು, ಆರ್ & ಡಿ ಸಂಸ್ಥೆಗಳು ಮತ್ತು ಉದ್ಯಮಗಳಿಂದ 36 ವಿಜ್ಞಾನಿಗಳನ್ನು ಗೌರವಿಸಲಾಯಿತು. ಪ್ರೊ. ಜೆ.ಬಿ. ಜೋಶಿಗೆ ಟಿ
ಸಿ ಆರ್ ಎಸ್ ಲೈಫ್‌ಟೈಮ್ ಅಚೀವ್‌ಮೆಂಟ್ ಪ್ರಶಸ್ತಿ ಮತ್ತು ಪ್ರೊ. ರಾಮ್‌ಗೋಪಾಲ್ ರಾವ್ ಅವರಿಗೆ ಸಿ ಆರ್ ಎಸ್ ಲೀಡರ್‌ಶಿಪ್ ಪ್ರಶಸ್ತಿ ಪ್ರದಾನಿಸಲಾಯಿತು.

MAHE ಕುಲಪತಿಯಾದ ಲೆಫ್ಟ. ಜನರಲ್ (ಡಾ.) ಎಂ. ಡಿ. ವೆಂಕಟೇಶ್ ಅವರು ವಿಚಾರ ಸಂಕಿರಣದ ಮಹತ್ವವನ್ನು ಉದ್ದೇಶಿಸಿ ಮಾತನಾಡಿ“ರಸಾಯನ್ 21 ಶೈಕ್ಷಣಿಕ ಮತ್ತು ಉದ್ಯಮಕ್ಕೆ ಸೇತುವೆಯಾಗುವ ನಾವಿನ್ಯತೆ ಪರಿಸರ ವ್ಯವಸ್ಥೆಗಳನ್ನು ಬೆಳೆಸುವ ನಮ್ಮ ಭದ್ರತೆಯನ್ನು ಸಾಕಾರ ಗೊಳಿಸುತ್ತದೆ. ಈ ವಿಚಾರ ಸಂಕಿರಣವು ಸಂಶೋಧನೆಯ ನೈಜ ಪ್ರಪಂಚದ ಪರಿಣಾಮಕಾರಿ ದೃಷ್ಟಿಕೋನಗಳನ್ನು ಹಂಚಿಕೊಳ್ಳಲು, ವಿಜ್ಞಾನ ಹೇಗೆ ಮತ್ತು ಎಲ್ಲಿ ಬಳಸಲ್ಪಡುತ್ತದೆ ಎಂಬುದರ ಮೇಲೆ ಅದು ಸಮಾಜಕ್ಕೆ ನೀಡುವ ಕೊಡುಗೆಗಳು ಹಾಗೂ ಮಾನವೀಯತೆಯಲ್ಲಿ ದೊಡ್ಡ ಸವಾಲುಗಳನ್ನು ಎದುರಿಸಲು ಪರಿವರ್ತಕ ಶಕ್ತಿಯಾಗಿ ಬದಲಾಗಲು ಸಹಾಯ ಮಾಡುತ್ತದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಹೇಳಿದರು.

ಸಮ್ಮೇಳನದಲ್ಲಿ ರಸಾಯನಶಾಸ್ತ್ರ, ವಸ್ತುಶಾಸ್ತ್ರ, ಪರಿಸರ ಸುಸ್ಥಿರತೆ, ತಂತ್ರಜ್ಞಾನ, ವೈದ್ಯಕೀಯ ಅನ್ವಯಿಕೆ, ಕೃತಕ ಬುದ್ಧಿಮತ್ತೆ ಮತ್ತು ಶುದ್ಧ ಇಂಧನ ತಂತ್ರಜ್ಞಾನಗಳ ಬಗ್ಗೆ ಪ್ರಮುಖ ವಿಚಾರ ಸಂಕಿರಣ ಮತ್ತು ಚರ್ಚೆಗಳು ನಡೆಯುತ್ತವೆ. ಎರಡನೇ ದಿನದಲ್ಲಿ “ಸಮಾಜಕ್ಕಾಗಿ ಸಂಶೋಧನೆ: ಭಾರತೀಯ ಮತ್ತು ಜಾಗತಿಕ ಸನ್ನಿವೇಶದಲ್ಲಿ ಸವಾಲುಗಳು ಮತ್ತು ಅವಕಾಶಗಳು” ಎಂಬ ವಿಚಾರದಲ್ಲಿ ದುಂಡು ಮೇಜಿನ ಚರ್ಚೆ ನಡೆಯಲಿದೆ.

ಈ ಸಮ್ಮೇಳನವು ಮಾಹೆ ಸಂಸ್ಥೆಗೆ ತನ್ನ ಶ್ರೇಷ್ಠ ಸಂಶೋಧನೆಗಳನ್ನು ಬಿಂಬಿಸುವ ಮಹತ್ವದ ಹೆಜ್ಜೆಯಾಗಿ, ಅಂತರಾಷ್ಟ್ರೀಯ ಸಹಯೋಗವನ್ನು ಸದೃಢಗೊಳಿಸಿ ಸಮಾಜಮುಖಿ ವಿಜ್ಞಾನವನ್ನು ಉತ್ತೇಜಿಸುವಲ್ಲಿ ಸಹಾಯ ಮಾಡುತ್ತದೆ.

Previous Post

ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಿ ಕೋರ್ಟ್ ತೀರ್ಪು..!

Next Post

ಭೂ ವಿನ್ಯಾಸ ನಕ್ಷೆ , ನಮೂನೆ 9 / 11ಎ, ಕಟ್ಟಡ ಪರವಾನಿಗೆ, ಸ್ವಾಧೀನ ಪ್ರಮಾಣ ಪತ್ರ ವಿತರಣೆ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಡಳಿತ ಕ್ಕೆ ಮನವಿ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಭೂ ವಿನ್ಯಾಸ ನಕ್ಷೆ , ನಮೂನೆ 9 / 11ಎ, ಕಟ್ಟಡ ಪರವಾನಿಗೆ, ಸ್ವಾಧೀನ ಪ್ರಮಾಣ ಪತ್ರ ವಿತರಣೆ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಡಳಿತ ಕ್ಕೆ ಮನವಿ..!!

ಭೂ ವಿನ್ಯಾಸ ನಕ್ಷೆ , ನಮೂನೆ 9 / 11ಎ, ಕಟ್ಟಡ ಪರವಾನಿಗೆ, ಸ್ವಾಧೀನ ಪ್ರಮಾಣ ಪತ್ರ ವಿತರಣೆ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಡಳಿತ ಕ್ಕೆ ಮನವಿ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಡಬ: ಔಷಧ ಸೇವನೆಯ ಬಳಿಕ ಬಾಲಕನ ಸಂಶಯಾಸ್ಪದ ಸಾವು….!

ಕಡಬ: ಔಷಧ ಸೇವನೆಯ ಬಳಿಕ ಬಾಲಕನ ಸಂಶಯಾಸ್ಪದ ಸಾವು….!

19/03/2026
ಅಕ್ರಮ ಜಾನುವಾರು ವಧೆ ಶೆಡ್ ಮೇಲೆ ದಾಳಿ: 9 ಜಾನುವಾರು ರಕ್ಷಣೆ, 205 ಕೆ.ಜಿ. ಮಾಂಸ ವಶ….!

ಅಕ್ರಮ ಜಾನುವಾರು ವಧೆ ಶೆಡ್ ಮೇಲೆ ದಾಳಿ: 9 ಜಾನುವಾರು ರಕ್ಷಣೆ, 205 ಕೆ.ಜಿ. ಮಾಂಸ ವಶ….!

19/03/2026
ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ….!

ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ….!

19/03/2026
ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ತೋಳಗಳ ಮೊದಲ ಸಂತಾನೋತ್ಪತ್ತಿ…!

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ತೋಳಗಳ ಮೊದಲ ಸಂತಾನೋತ್ಪತ್ತಿ…!

19/03/2026

Recent News

ಕಡಬ: ಔಷಧ ಸೇವನೆಯ ಬಳಿಕ ಬಾಲಕನ ಸಂಶಯಾಸ್ಪದ ಸಾವು….!

ಕಡಬ: ಔಷಧ ಸೇವನೆಯ ಬಳಿಕ ಬಾಲಕನ ಸಂಶಯಾಸ್ಪದ ಸಾವು….!

19/03/2026
ಅಕ್ರಮ ಜಾನುವಾರು ವಧೆ ಶೆಡ್ ಮೇಲೆ ದಾಳಿ: 9 ಜಾನುವಾರು ರಕ್ಷಣೆ, 205 ಕೆ.ಜಿ. ಮಾಂಸ ವಶ….!

ಅಕ್ರಮ ಜಾನುವಾರು ವಧೆ ಶೆಡ್ ಮೇಲೆ ದಾಳಿ: 9 ಜಾನುವಾರು ರಕ್ಷಣೆ, 205 ಕೆ.ಜಿ. ಮಾಂಸ ವಶ….!

19/03/2026
ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ….!

ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ….!

19/03/2026
ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ತೋಳಗಳ ಮೊದಲ ಸಂತಾನೋತ್ಪತ್ತಿ…!

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ತೋಳಗಳ ಮೊದಲ ಸಂತಾನೋತ್ಪತ್ತಿ…!

19/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved