ಉಡುಪಿ:ಜುಲೈ 18 : ಕರ್ನಾಟಕ ಬ್ಯಾಂಕಿನ ನೂತನ ಎಂ. ಡಿ. ಶ್ರೀ ರಾಘವೇಂದ್ರ ಭಟ್ ರವರಿಗೆ ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣ ಮಠದ ವತಿಯಿಂದ ಶ್ರೀ ಕೃಷ್ಣ ಪ್ರಸಾದವನ್ನು ನೀಡಿ ಶಾಲು ಹೊದಿಸಿ ಗೌರವಿಸಲಾಯಿತು.
ಮಠದ ದಿವಾನರಾದ ನಾಗರಾಜ ಆಚಾರ್ಯರು ನೂತನ ಎಂ ಡಿ ಅವರಿಗೆ ಶುಭ ಹಾರೈಸಿದರು ಹಾಗೂ ಶ್ರೀಕೃಷ್ಣ ಮಠಕ್ಕೆ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಶ್ರೀ ರಾಮಚಂದ್ರ ಉಪಾಧ್ಯ ಹಾಗೂ ಶ್ರೀ ರವೀಂದ್ರ ಆಚಾರ್ಯರು ಉಪಸ್ಥಿತರಿದ್ದರು.