ಮಂಗಳೂರು : ಜುಲೈ 17:ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಅದು ಕಿರುತೆರೆ ಆಗಿರಲಿ, ಸಭೆ ಸಮಾರಂಭವೇ ಆಗಿರಲಿ ಅನುಶ್ರೀ ಇದ್ದರೆ ಅದಕ್ಕೊಂದು ಕಳೆ ಎನ್ನುವುದು ಅಭಿಮಾನಿಗಳ ಮಾತು. ಪಟ ಪಟನೆ ಹರಳು ಹುರಿದಂತೆ ಮಾತನಾಡುವ ಅನುಶ್ರೀ ವೀಕ್ಷಕರ ಗಮನ ಸೆಳೆಯುತ್ತಾರೆ. ಕನ್ನಡ ಕಿರುತೆರೆಯ ಬಹುಬೇಡಿಕೆಯ ನಿರೂಪಕಿ ಎನಿಸಿಕೊಂಡಿದ್ದಾರೆ.
ಅದೇ ಕಾರಣಕ್ಕೆ ಅನುಶ್ರೀ ಮದುವೆ ಯಾವಾಗ ಎಂದು ಅಭಿಮಾನಿಗಳು ಪದೇ ಪದೆ ಕೇಳುತ್ತಿದ್ದರು. ಆದಷ್ಟು ಬೇಗ ಮದುವೆ ಆಗ್ತೀನಿ ಎಂದಿದ್ದ ಚೆಲುವೆ ಈಗ ಹಸೆಮಣೆ ಏರಲು ಸಜ್ಜಾಗುತ್ತಿದ್ದಾರೆ.
ಆಗಸ್ಟ್ 28ಕ್ಕೆ ಆಕೆಯ ಮದುವೆ ನಿಗದಿಯಾಗಿದೆ ಎಂದು ಹೇಳಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ಸಿಕ್ಕಿಲ್ಲ. ಬೆಂಗಳೂರಿನಲ್ಲೇ ಅದ್ಧೂರಿಯಾಗಿ ಅನುಶ್ರೀ ಮದುವೆ ನಡೆಯುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ
ಮಂಗಳೂರು ಮೂಲದ ಆದರೆ ಬೆಂಗಳೂರಿನಲ್ಲಿ ನೆಲೆಸಿರುವ ಟೆಕ್ಕಿ ಜೊತೆ ಅನುಶ್ರೀ ಮದುವೆ ಎನ್ನುವ ಮಾತುಗಳು ಕೇಳಿಬರ್ತಿದೆ. ಬೆಂಗಳೂರು ಮೂಲದ ಉದ್ಯಮಿ ರೋಷನ್ ಜೊತೆ ಮದುವೆ ನಡೆಯುತ್ತದೆ ಎಂದು ಮಾಧ್ಯಮ ವರದಿ ಮಾಡಿದೆ. ಈಗಾಗಲೇ ಅನುಶ್ರೀ ಹಾಗೂ ರೋಷನ್ ಮದುವೆಗೆ ಕುಟುಂಬ ಸದಸ್ಯರು ಸಿದ್ಧತೆ ಆರಂಭಿಸಿದ್ದಾರೆ.
ಗೂರ್ಗ್ ಮೂಲದ ಉದ್ಯಮಿ ರೋಷನ್ ಮಗಳಿಗೆ ಸರಿಯಾದ ಜೋಡಿ ಎಂದು ಅನುಶ್ರೀ ತಾಯಿ ಕೂಡ ಒಪ್ಪಿದ್ದಾರಂತೆ. ಕೆಲ ದಿನಗಳ ಹಿಂದೆ ತಾವು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಅನುಶ್ರೀ ಮನದಾಳ ತೆರೆದಿಟ್ಟಿದ್ದರು. “ಹುಡುಗ ಬಹಳ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ, ಅವನ ಲೈಫ್ ಬಗ್ಗೆ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು” ಎಂದು ಹೇಳಿಕೊಂಡಿದ್ದರು.