ಗಂಗೊಳ್ಳಿ:ಜುಲೈ 17 :ಗಂಗೊಳ್ಳಿ ನಾಡ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೀನುಗಾರ ಸುರೇಶ್ ಖಾರ್ವಿ ಅವರ ಮೃತದೇಹ ಗುರುವಾರ ಬೆಳಿಗ್ಗೆ (ಜು.16) ಕೋಡಿ ಸೀವಾಕ್ ಸಮೀಪ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಇದರೊಂದಿಗೆ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆಯಾದಂತಾಗಿದೆ.
ಗಂಗೊಳ್ಳಿ ಬಂದರಿನಿಂದ ಜು.15ರಂದು ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದ ದೋಣಿ ಸಮುದ್ರದ ಅಲೆಯ ರಭಸಕ್ಕೆ ಸಿಲುಕಿ ಮಗುಚಿದ್ದು, ನಾಲ್ವರು ನಿರುಪಾಲಾಗಿದ್ದರು ಈ ಪೈಕಿ ಓರ್ವ ಮೀನುಗಾರ ಈಜಿ ದಡ ಸೇರಿದ್ದರು. ಮೂವರು ಮೀನುಗಾರರು ನಾಪತ್ತೆಯಾಗಿದ್ದರು. ನಿರಂತರ ಶೋಧ ಕಾರ್ಯಚರಣೆ ನಡೆಸಿದ ವೇಳೆ ಬುಧವಾರ ಬೆಳಿಗ್ಗೆ ಲೋಹಿತ್ ಖಾರ್ವಿ (38) ಅವರ ಮೃತದೇಹ ಕುಂದಾಪುರದ ಕೋಡಿ ಲೈಟ್ ಹೌಸ್ ಬಳಿಯ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಅದೇ ದಿನ ಸಂಜೆಯ ವೇಳೆಗೆ ಇನ್ನೋರ್ವ ಮೀನುಗಾರ ಜಗನ್ನಾಥ ಖಾರ್ವಿ ಅವರ ಮೃತದೇಹ ಕೋಡಿಯ ಕಿನಾರ ಬಳಿ ಪತ್ತೆಯಾಗಿದೆ.
ನಾಪತ್ತೆಯಾಗಿರುವ ಸುರೇಶ್ ಖಾರ್ವಿ ಅವರಿಗಾಗಿ ರಕ್ಷಣಾ ತಂಡ ಶೋಧ ಕಾರ್ಯ ಮುಂದುವರೆಸಿತ್ತು ಅದರಂತೆ ಗುರುವಾರ ಬೆಳಿಗ್ಗೆ ಕೋಡಿ ಸೀವಾಕ್ ಸಮೀಪ ಸಮುದ್ರ ತೀರದಲ್ಲಿ ಶವ ಪತ್ತೆಯಾಗಿದೆ.